ಕನ್ನಡ ವಾರ್ತೆಗಳು

ಮಿಜಾರಿನಲ್ಲಿ ಎರಡು ದಿನದ ಕಾರ್ಯಗಾರ

Pinterest LinkedIn Tumblr

alvas_scinec_photo

ಮಿಜಾರು,ಜ. 30 : ಕಂಪ್ಯೂಟರ್ ಸೈನ್ಸ್ ಎಂಬುದು ನಿಜಕ್ಕೂ ಹೆಚ್ಚಿನ ಅವಕಾಶಗಳಿರುವ ಕ್ಷೇತ್ರ. ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ಅಗತ್ಯವಾದುದು, ಇದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ನ ಬಗೆಗೆ ಹೆಚ್ಚಿನ ಅವಕಾಶ ಮತ್ತು ಜ್ಞಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಸುರತ್ಕಲ್ ಎನ್.ಐ.ಟಿ.ಇ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ. ಮೋಹಿತ್ ಪಿ ತಹಿಲಾನಿ ಹೇಳಿದರು.

ಆಳ್ವಾಸ್ ಇಂಜಿನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆಸಲಾದ ೨ ದಿನದ ನೆಟ್‌ವರ್ಕ್ ಸಿಮ್ಯುಲೆಶನ್ ಯೂಸಿಂಗ್-ಎನ್ ಎಸ್ ೩ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಗವಹಿಸಿ ಅವರು ಮಾತನಾಡಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪೀಟರ್ ಫೆರ್ನಾಂಡಿಸ್ ಮಾತನಾಡಿ ನಾವು ಇಂದು ಕಲಿಯುವ ವಿಷಯ ನಾಳೆಗೆ ಹಳೆಯದಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಸ್ತುತ ವಿಷಯಗಳನ್ನು ತಿಳಿದುಕೊಂಡಿರಬೇಕು. ವಿದ್ಯಾರ್ಥಿಗಳು ಜ್ಞಾನದೊಂದಿಗೆ ಪ್ರಯೋಗ ಮಾಡುತ್ತಿರಬೇಕು ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ನಾವು ಬದಲಾಗದಿದ್ದರೆ ಬದಲಾವಣೆಯನ್ನು ಕಾಣಲು ಅಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ಸಹಾಯಕ ಪ್ರಾಧ್ಯಾಪಕ ಹರೀಶ್ ಕುಂದರ್, ಡೀನ್ ಡಾ.ಕಿಶೋರ್ ಶೆಟ್ಟಿ, ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಟಾಲಿನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು, ವಿಭಾಗದ ಮುಖ್ಯಸ್ಥ ಮಂಜುನಾಥ್ ಕೊಠಾರಿ ಸ್ವಾಗತಿಸಿ, ಫ್ರೋ. ಹರೀಶ್ ಕುಂದರ್ ವಂದಿಸಿದರು.

Write A Comment