ಕನ್ನಡ ವಾರ್ತೆಗಳು

23 ಮಕ್ಕಳು, ನಾಲ್ವರು ಪತ್ನಿಯರು ಇದ್ದರೂ.. ಅಪ್ರಾಪ್ತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ಸೆರೆ

Pinterest LinkedIn Tumblr

ಮಂಗಳೂರು / ವಿಟ್ಲ: ಈಗಾಗಲೇ 23 ಮಕ್ಕಳನ್ನು ಹೊಂದಿರುವ ವ್ಯಕ್ತಿಯೊಬ್ಬ 10ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ.

ಕೊಳ್ನಾಡು ಗ್ರಾಮದ ಕಾರಾಜೆ ನಿವಾಸಿ, ನಾಲ್ವರು ಪತ್ನಿಯರು ಮತ್ತು 23 ಮಕ್ಕಳ ತಂದೆ ರಝಬ್ (50) ಕೃತ್ಯ ಎಸಗಿದ ವ್ಯಕ್ತಿ. ಬಾಲಕಿಯ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ವಿಟ್ಲ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಗುರುವಾರ ಪ್ರಕರಣ ದಾಖಲಾಗಿದೆ.

ಜ.23ರಂದು ಮಧ್ಯಾಹ್ನ ತನ್ನದೇ ಊರಿನ 10 ವರ್ಷದ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ತಂದೆ ಕೆಲಸದ ನಿಮಿತ್ತ ದೂರದೂರಿಗೆ ಹೋಗಿದ್ದರಿಂದ ಬಂದ ಬಳಿಕ ದೂರು ನೀಡುತ್ತಿರುವುದಾಗಿ ಬಾಲಕಿಯ ತಾಯಿ ತಿಳಿಸಿದ್ದಾರೆ.

ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಭಿನ್ನ ಕೋಮಿಗೆ ಸಂಬಂಧಿಸಿದ ಪ್ರಕರಣವಾದ ಕಾರಣ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

Write A Comment