ಕನ್ನಡ ವಾರ್ತೆಗಳು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಏರಿಯ ವತಿಯಿಂದ ಸಾರ್ವಜನಿಕ ಸಭೆ

Pinterest LinkedIn Tumblr

popular_front_photo_1

ಮಂಗಳೂರು,ಜ.29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಏರಿಯ ವತಿಯಿಂದ ದಿನಾಕ 28-01-2015 ರಂದು ” ಪ್ರವಾದಿ ಜೀವನ : ಹಾಗು “ಪ್ರಿಯಪೆಟ್ಟ ಉಮ್ಮ ” ಎಂಬ ಎರಡು ವಿಷಯಗಳಲ್ಲಿ ಪ್ರವಚನ ನಡೆಯಿತು .

ಮುಖ್ಯ ಪ್ರವಚನಕಾರರಾಗಿ : ಜನಾಬ್ ಸಿದ್ದೀಕ಼್ ಕಲ್ಲಡ್ಕ ( ಜಿಲ್ಲಾ ಸಮಿತಿ ಸದಸ್ಯರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ , ದ . ಕ ಜಿಲ್ಲೆ ) ಹಾಗು ಇಮ್ತಿಯಾಜ್ ತುಂಬೆ ( ಜಿಲ್ಲಾ ಸಮಿತಿ ಸದಸ್ಯರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ , ದ . ಕ ಜಿಲ್ಲೆ ) ಭಾಗವಹಿಸಿದ್ದರು .

ಈ ಸಮಯದಲ್ಲಿ ಮಾತನಾಡಿದ ಸಿದ್ದೀಕ಼್ ಪ್ರವಾದಿಯವರ ಜೀವನ ಹಾಗು ಪ್ರಸಕ್ತ ಸನ್ನಿವೇಶದಲ್ಲಿ ಅದನ್ನು ಹೇಗೆ ನಾವು ಅಳವಡಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು , ದೇಶದಲ್ಲಿ ಶಾಂತಿ ನೆಮ್ಮದಿ ಉಳಿಸುವಲ್ಲಿ ಮುಸ್ಲಿಮರ ಪಾತ್ರ ಹಾಗು ಅನ್ಯಾಯದ ವಿರುದ್ಧ ಎಲ್ಲರೂ ಎದ್ದೇಳಬೇಕು ಎಂದರು .

popular_front_photo_2a

ಪ್ರಿಯಪೆಟ್ಟ ಉಮ್ಮ ಎಂಬ ವಿಷಯದಲ್ಲಿ ಮಾತನಾಡಿದ ಇಮ್ತಿಯಾಜ್ ತಮ್ಮ ತಂದೆ ತಾಯಿಯರ ಮೇಲೆ ಮಕ್ಕಳಿಗೆ ಇರುವ ಕರ್ತವ್ಯಗಳು ತಿಳಿಸಿಕೊಟ್ಟರು , ಯುವಜನಾಂಗ ತಂದೆ ತಾಯಿಯ ಸೇವೆ ಮಾಡಬೇಕೆಂದರು . ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ವಿಶೇಷವಾಗಿತ್ತು , ವಿಶೇಷವಾಗಿ ಮಹಿಳೆಯರ ಸಂಖ್ಯೆ ಅಧಿಕವಾಗಿತ್ತು.

ಇರ್ಶಾದ್ ಕಿರಾತ್ ವಾಚಿಸಿದರು , ಉದ್ಘಾಟನೆಯನ್ನು ಎ . ಕೆ ಅಶ್ರಫ್ ( ಅಧ್ಯಕ್ಷರು , ಎಸ್ . ಡಿ . ಪಿ . ಐ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ) ನೆರವೇರಿಸಿದರು , ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಮಜೀದ್ ( ಅಧ್ಯಕ್ಷರು , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ) ವಹಿಸಿದ್ದರು .

ವೇದಿಕೆಯಲ್ಲಿ ಬಜ್ಪೆ ಯುವನಾಯಕ ಪಾಪ್ಯುಲರ್ ಫ್ರಂಟ್ ವಲಯ ಕಾರ್ಯದರ್ಶಿಗಳಾದ ನಜ್ಹೀರ್ ಕೆ ಪಿ ನಗರ , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲಾಧ್ಯಕ್ಷರಾದ ಏ. ಎಮ್ ಅತ್ಹಾವುಲ್ಲ ಜೋಕಟ್ಟೆ , ಬಜ್ಪೆ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ವಿ ಮುಹಮ್ಮದ್ , ಅಲ್ – ಹುದಾ ಜುಮ್ಮಾ ಮಸ್ಜಿದ್ ಕೆ ಪಿ ನಗರ ಇದರ ಅಧ್ಯಕ್ಷರಾದ ಇಬ್ರಾಹಿಂ ಹಾಜಿ , ನೂರಾನೀಯ ಜುಮ್ಮಾ ಮಸ್ಜಿದ್ ಜರಿ ನಗರ ಇದರ ಅಧ್ಯಕ್ಷರಾದ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು .
ಆಸೀಫ್ ಸ್ವಾಗತಿಸಿದರು , ಅರ್ಫಾದ್ ಧನ್ಯವಾದ ಹಾಗು ಜಲಾಲ್ ಕಾರ್ಯಕ್ರಮ ನಿರೂಪಿಸಿದರು.

Write A Comment