ಕನ್ನಡ ವಾರ್ತೆಗಳು

ದೇರೆಬೈಲ್ ಸ್ಟ್ರಕ್ ಬಾಯ್ಸ್ ಪ್ರಮುಖನ ಸೆರೆ, ಗಾಂಜಾ ಪ್ಯಾಕೇಟು ವಶ.

Pinterest LinkedIn Tumblr

ganja_kavoor_photo

ಮಂಗಳೂರು,ಜ.26 : ಕಾವೂರು, ಉರ್ವ, ಹಾಗೂ ಬಂದರು ಠಾಣಾ ವ್ಯಾಪ್ತಿಗಳಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಬೇಕಾಗಿದ್ದ, ದೇರೆಬೈಲ್ ಜನರಿಗೆ ತಲೆ ನೋವಾಗಿದ್ದ ಸ್ಟ್ರಕ್ ಬಾಯ್ಸ್‍ತಂಡದ ಪ್ರಮುಖ ದೇರೆಬೈಲ್ ನಿವಾಸಿ ಧೀರು ಯಾನೆ ಧೀರಜ್ (18)ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದು, ಆತನಲ್ಲಿದ್ದ 46 ಗಾಂಜಾ ಪ್ಯಾಕೇಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾವೂರು, ಉರ್ವ ಹಾಗೂ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿ 392 ಕಲಂ ನಡಿ ಪ್ರಕರಣಗಳು ದಾಖಲಾಗಿವೆ. ಉರ್ವ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ 17ರ ಹರೆಯದಲ್ಲಿ ಬಂಧಿಸಲಾಗಿತ್ತು. ಅಪ್ರಾಪ್ತನೆಂಬ ಕಾರಣದಿಂದ ಜಾಮೀನು ಪಡೆದು ಹೊರಬಂದ ಧೀರಜ್ ಸ್ಟ್ರಕ್ ಬಾಯ್ಸ್ ತಂಡ ಕಟ್ಟಿ ಹಲವು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

ಪೊಲೀಸರಿಗೂ ಹಲವು ಸಮಯದಿಂದ ಚಳ್ಳೆಹಣ್ಣು ತಿನ್ನಿಸುತ್ತಾ ತಲೆಮರೆಸಿಕೊಂಡಿದ್ದಾತ ದೇರೆಬೈಲು ಸಮೀಪ ಸಾರ್ವಜನಿಕರಿಗೂ ತಲೆನೋವಾಗಿದ್ದನೆಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.

ಕಾವೂರು ಎಸ್.ಐ ಉಮೇಶ್ ನೇತೃತ್ವದಲ್ಲಿ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

Write A Comment