ಕನ್ನಡ ವಾರ್ತೆಗಳು

ಪುತ್ತೂರಿನಲ್ಲಿ “ಕ್ಯಾಂಪ್ಕೋ ಕೃಷಿಯಂತ್ರ ಮೇಳ – III ಕ್ಕೆ ಚಾಲನೆ

Pinterest LinkedIn Tumblr

Camco_krishi_mela_1

ಮಂಗಳೂರು,ಜ.24 : ಕ್ಯಾಂಪ್ಕೋ ಅಡಿಕೆ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ (ರಿ.) ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮತ್ತು ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇವುಗಳ ಸಹಯೋಗದಲ್ಲಿ ಜನವರಿ 24ರಿಂದ 26 ರವರೆಗೆ ಮೂರು ದಿನಗಳ ಕಾಲ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಆವರಣದಲ್ಲಿ ಅಯೋಜಿಸಲಾಗಿರುವ “ಕೃಷಿಯಂತ್ರ ಮೇಳ – III -2015” ಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಿಂಗಾರ ಅರಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಶುಭಾ ಹಾರೈಸಿದರು. ಬಳಿಕ ಅಡಿಕೆ ಪತ್ರಿಕೆ ವಿಶೇಷ ಸಂಚಿಕೆಯನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿದರು.  ಕೃಷಿ ಯಂತ್ರ ಮೇಳದಲ್ಲಿ 250ಕ್ಕೂ ಅಧಿಕ ಪ್ರದರ್ಶನ ಮಳಿಗೆ ಗಳಿದ್ದು,  ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಅನಂತ್ ಕುಮಾರ್ ಅವರು “ಕೃಷಿಯಂತ್ರ ಮೇಳ ಹಾಗೂ ಪ್ರದರ್ಶನ” ಮಳಿಗೆಗಳನ್ನು ಉದ್ಘಾಟಿಸಿದರು.

Camco_krishi_mela_2

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವರಾದ ಜಿ.ಎಂ.ಸಿದ್ದೇಶ್ವರ್ ಸಹಕಾರಿ ಧ್ವಜಾರೋಹಣಗೈದರು. ಸಂಸದ ನಳಿನ್ ಕುಮಾರ್ ಕಟೀಲ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸ್ಥಾಪಕರಾದ ವಾರಣಶಿ ಸುಬ್ರಯ ಭಟ್ ಅವರ ಭಾವಚಿತ್ರದ ವಿಶೇಷ ಅಂಚೆ ಲಕೋಟೆಯನ್ನು ಫೋಸ್ಟ್ ಮಾಸ್ಟರ್ ಜನರಲ್ ಸೌತ್ ಕರ್ನಾಟಕ ರಿಜನಲ್ ಶ್ರೀಮತಿ ಐಂದ್ರಿಯಾ ಅನುರಾಗ್ ಅವರು ಬಿಡುಗಡೆಗೊಳಿಸಿದರು.

ಕೃಷಿ ಉಪಕರಣಗಳ ಡೈರಕ್ಟರಿಯನ್ನು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಲರಾಮ ಆಚಾರ್ಯ ಬಿಡು ಗಡೆಗೊಳಿಸಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆಯ ವಿವಿಧ ಘಟಕಗಳ ಪ್ರಮುಖರಾದ ಶಿವಪ್ರಸಾದ್, ಎ.ವಿ.ನಾರಾಯಣ, ಸತೀಶ್ಚಂದ್ರ ಭಂಡಾರಿ ಮತ್ತು ಸುರೇಶ್ ಭಂಡಾರಿ ಉಪಸ್ಥಿತರಿದ್ದರು. ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಪ್ರಾಸ್ತಾ ವಿಕವಾಗಿ ಮಾತನಾಡಿದರು.ಬಲರಾಮ ಆಚಾರ್ಯ ವಂದಿಸಿದರು.

Camco_krishi_mela_3

70 ಲಕ್ಷ ರೂ. ಬಜೆಟ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಕೃಷಿ ಯಂತ್ರ ಮೇಳದಲ್ಲಿ ಒಟ್ಟು 240 ಮಳಿಗೆಗಳಿವೆ. ಯಂತ್ರ ಮೇಳದಲ್ಲಿ ಎಂಟು ಮಂದಿ ರೈತ ಸಂಶೋಧಕರು ಪಾಲ್ಗೊಳ್ಳುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕೃಷಿ ಯಂತ್ರ ಮೇಳದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

Camco_krishi_mela_4

ಅಡಿಕೆ ಆಮದು ಸುಂಕ ಶೇ.175ಕ್ಕೇರಿಸಲು ಚಿಂತನೆ: ‘ಕೃಷಿ ಯಂತ್ರ ಮೇಳ’ಕ್ಕೆ ಚಾಲನೆ ನೀಡಿ ಕೇಂದ್ರ ಸಚಿವ ಅನಂತಕುಮಾರ್

ಪುತ್ತೂರು, ಜ.25: ಅಡಿಕೆ ಬೆಳೆಗಾರರ ಹಿತರಕ್ಷಣೆಯ ಉದ್ದೇಶದಿಂದ ಆಮದು ಸುಂಕವನ್ನು ಶೇ.175ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಮನವಿ ಸಲ್ಲಿಸಲಾ ಗುವುದು ಎಂದು ಕೇಂದ್ರ ರಾಸಾ ಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಅವರು ಕ್ಯಾಂಪ್ಕೊ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಎಂಜಿಯರಿಂಗ್ ಟೆಕ್ನಾಲಜಿ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನಲ್ಲಿ 3 ದಿನಗಳ ಕಾಲ ನಡೆ ಯಲಿರುವ ‘ಕೃಷಿ ಯಂತ್ರ ಮೇಳ’ವನ್ನು ಶನಿವಾರ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಆವರಣ ದಲ್ಲಿ ಉದ್ಘಾಟಿಸಿ ಮಾತ ನಾಡುತ್ತಿದ್ದರು.

ಹಿಂದಿನ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ತಪ್ಪು ಅಫಿದವಿತ್ ಸಲ್ಲಿಸಿದ ಕಾರಣ ಅಡಿಕೆ ಬೆಳೆಯು ಅಪಪ್ರಚಾರಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ಅಫಿದವಿತ್ ತಿದ್ದುಪಡಿಗೊಳಿಸಿ ಮರು ಸಲ್ಲಿಕೆ ಮಾಡುವಂತೆ ಪ್ರಧಾನ ಮಂತ್ರಿ ಯವರನ್ನು ಆಗ್ರಹಿಸಿದ್ದೇವೆ ಎಂದ ಅವರು, ಬಾಂಗ್ಲಾದಿಂದ ಭಾರತಕ್ಕೆ ಆಮ ದಾಗುತ್ತಿರುವ ಅಡಿಕೆ ತಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನ್ನೆಲೆಯಲ್ಲಿ ಅಡಿಕೆ ಆಮದು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದರು.

ಸುಮಾರು ಶೇ.40ರಷ್ಟು ರಸ ಗೊಬ್ಬರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರಸಗೊಬ್ಬರ ತಯಾರಿಕೆಯಲ್ಲಿ ನಾವು ಸ್ವಾವಲಂಬಿಗಳಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ ಒಂದು ರಸಗೊಬ್ಬರ ಕಾರ್ಖಾನೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಕಾರ್ಖಾನೆ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2 ಬಾರಿ ದಿಲ್ಲಿಗೆ ಆಗಮಿಸಿ ಚರ್ಚೆ ನಡೆಸಿದ್ದಾರೆ ಹಾಗೂ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಸ್ಥಳ ತೋರಿಸಿದ ತಕ್ಷಣವೇ ಕಾರ್ಖಾನೆ ಕಾಮಗಾರಿ ಆರಂಭಿಸಲಾಗುವುದು ಎಂದು ಅನಂತಕುಮಾರ್ ತಿಳಿಸಿದರು.

ಸಹಕಾರಿ ಧ್ವಜಾರೋಹಣ ನೆರವೇರಿ ಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಹಲವು ಕಾರಣಗಳಿಂದಾಗಿ ಅಡಿಕೆ ಬೆಳೆ ಏರಿಳಿತಗೊಂಡಿತ್ತು. ಅಡಿಕೆ ಬೆಲೆ ಸ್ಥಿರೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. ಆದರೆ ಹೆಚ್ಚು ಬೆಲೆ ಅಪೇಕ್ಷಿಸುವುದು ಸರಿಯಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಕೃಷಿ ಯಂತ್ರಗಳು ರೈತರಿಗೆ ದುಬಾರಿಯಾಗಿದ್ದು, ಯಂತ್ರೋ ಪಕರಣಗಳ ಬೆಲೆಗಳನ್ನು ಕಡಿಮೆ ಗೊಳಿಸಿ ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ನೀಡುವಂತಾಗಬೇಕು. ಸಬ್ಸಿಡಿಯೂ ಸಕಾಲದಲ್ಲಿ ಒದಗುವ ಮೂಲಕ ಸಾಮಾನ್ಯ ರೈತನೂ ಯಂತ್ರೋಪಕರಣ ಖರೀದಿ ಮಾಡುವಂತೆ ಆಗಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಇಂಧನ ರಾಸಾಯನಿಕ ವಲಯ ಆರಂಭಿಸು ವುದು ಉತ್ತಮ ವಿಚಾರ. ಆದರೆ ಅದಕ್ಕಾಗಿ ಈಗಾಗಲೇ ಎಸ್‌ಇಝೆಡ್ಗೆ ನೀಡಲಾಗಿರುವ ಜಾಗದಲ್ಲೇ ಅದನ್ನು ಆರಂಭಿಸಲಿ ಎಂದು ಸಲಹೆ ನೀಡಿದರು.

****************************************************************

ರೈತನನ್ನು ಉಳಿಸಲು ರಾಜ್ಯ ಸರಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು :ಮಾಜಿ ಮುಖ್ಯಮಂತ್ರಿ, ಸಂಸದ ಯಡಿಯೂರಪ್ಪ

ಪುತ್ತೂರು: ಹಸಿರು ಕ್ರಾಂತಿ ಆದ ಮೇಲೆ ನಾವು ಕೃಷಿ ಬದುಕಿನಲ್ಲಿ, ಆಹಾರದಲ್ಲಿ ಸ್ವಾವಲಂಬಿಗಳಾಗಿದ್ದು, ಭಾರತೀಯ ಆರ್ಥಿಕತೆಗೆ ಕೃಷಿಯ ಪಾಲು ಶೇ.18.5ರಷ್ಟಿದೆ. ರೈತನಿಗೆ ತಾನು ಬೆಳೆದ ಬೆಳೆಗೆ ಎಲ್ಲಿಯ ತನಕ ವೈಜ್ಞಾನಿಕ ಬೆಲೆ ಸಿಗುವುದಿಲ್ಲವೋ ಅಲ್ಲಿಯ ತನಕ ರೈತ ನಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ರೈತನಿಗೆ ಸಂಕಷ್ಟ ಬಂದರೆ ಜನರಿಗೆ ನೆಮ್ಮದಿಯಿಲ್ಲ. ಈ ನಿಟ್ಟಿನಲ್ಲಿ ರೈತನನ್ನು ಉಳಿಸುವಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆಯನ್ನು ರಾಜ್ಯ ಸರಕಾರ ಮಾಡಬೇಕಾಗಿದೆ. ಈ ಕುರಿತು ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಲಿದ್ದೇವೆ ಎಂದು ಸಂಸದ ಯಡಿಯೂರಪ್ಪ ಹೇಳಿದರು.

ಇಲ್ಲಿಯ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕಿಸಾನ್ ಸಂಸತ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕೃಷಿಕ ಮಹೇಶ್ ಚೌಟ ಅವರು ನೀಡಿದ ಆಹಾರ ಬೆಳೆ ಬಗ್ಗೆ ನಿಮ್ಮ ಚಿಂತನೆ ಏನು? ಅದಕ್ಕೆ ಯಾವ ಪರಿಹಾರ ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಮಾರುಕಟ್ಟೆ ಶುಲ್ಕ, ಬಿಳಿ ಚೀಟಿ ಬಗ್ಗೆ ಅವ್ಯವಹಾರ ನಡೆಯುತ್ತಿದ್ದು, ಈ ಕುರಿತು ಗಂಭೀರ ಚಿಂತನೆ ಯಾಕಿಲ್ಲ ಎಂದು ವಿಜಯ ಕುಮಾರ್ ಎಂಬವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಎಪಿಎಂಸಿಯಲ್ಲಿ ಪಾರದರ್ಶಕತೆ ತರುವುದಕ್ಕೋಸ್ಕರ ಪ್ರಾಂಗಣದಲ್ಲಿ ಸಿಸಿ ಟಿವಿ, ಕಂಪ್ಯೂಟರೀಕರಣ, ಇ ಬಿಲ್ಲಿಂಗ್ ವ್ಯವಸ್ಥೆ ಅಳವಡಿಸುವುದಕ್ಕೋಸ್ಕರ ಪ್ರಾಮಾಣಿಕ ವೈಜ್ಞಾನಿಕ ತಂತ್ರಜ್ಞಾನರ ಅಗತ್ಯತೆ ಕಂಡುಕೊಳ್ಳಲಾಗಿದೆ. ಆದರೆ ಬಿಳಿ ಚೀಟಿ, ಶುಲ್ಕದ ವಿಚಾರದಲ್ಲಿ ರೈತರು ಜಾಗ್ರತೆಯಿಂದಿದ್ದರೆ ಅಲ್ಲಿ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಯಾವುದೇ ಅವ್ಯವಹಾರ ನಡೆಯದ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಹಳದಿ ರೋಗಕ್ಕೆ ಸರಕಾರ ಶಾಶ್ವತ ಪರಿಹಾರ ನೀಡಿಲ್ಲ, ಪರ್ಯಾಯ ಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯಿರಿ ಎಂದು ಘೋಷಿಸಿದರೂ ಅದಕ್ಕೆ ಯಾವುದೇ ರೀತಿಯಲ್ಲಿ ಬೆಂಬಲ ನೀಡುತ್ತಿಲ್ಲ ಯಾಕೆ ಎಂದು ವಸಂತ ರಾವ್ ಎಂಬವರು ನೀಡಿದ ಪ್ರಶ್ನೆಗೆ ಉತ್ತರುಸುದ ಯಡಿಯೂರಪ್ಪ, ಶೃಂಗೇರಿ, ಕೊಪ್ಪ ಕಡೆಗಳಲ್ಲಿ ಹಳದಿ ಎಲೆ ರೋಗದ ಸಮಸ್ಯೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಯತ್ನ ಮಾಡಿದೇನೆ ಎಂದ ಅವರು, ತಾಳೆ ಬೆಳೆಗಳನ್ನು ಮುಂದಿನ ದಿನಗಳಲ್ಲಿ ಪರ್ಯಾಯವಾಗಿ ಮಾಡುವ ನಿವಾರ್ಯತೆ ಒದಗಲಿದೆ. ಇದಕ್ಕೆ ಬೇಕಾದ ಸೌಲಭ್ಯವನ್ನು ಹಂತ ಹಂತವಾಗಿ ಚರ್ಚಿಸಿ ನೀಡಲಿದ್ದೇವೆ ಎಂದರು.

ಗೋರಕ್‌ಸಿಂಗ್ ವರದಿ ಎಲ್ಲರಿಗೂ ಪಥ್ಯ ಆಗುವುದಿಲ್ಲ. ಈ ವರದಿ ಸಂಪೂರ್ಣ ಜ್ಯಾರಿಯಾದರೆ ರೈತರಿಗೆ ಆತಂಕ ಉಂಟಾಗುವ ಪರಿಸ್ಥಿತಿ ಬರಲಿದೆ. ಈ ವರದಿಯಲ್ಲಿ ಎರಡಂಶಗಳನ್ನು ಬಿಟ್ಟರೆ ಉಳಿದ ವರದಿಗಳು ರೈತರಿಗೆ ಪೂರಕವಾಗಿದೆ. ಈ ಎರಡಂಶಗಳಾದ ನ್ಯಾಚುರಲ್ ವಾಟರ್ ಮತ್ತು ರಸಗೊಬ್ಬರ ಬಳಕೆ ಮಾಡಬಾರದು ಎಂಬ ಎರಡು ಅಂಶಗಳನ್ನು ಪ್ರತ್ಯೇಕಿಸಿ ಸುಪ್ರಿಂ ಕೋರ್ಟ್ ಮುಂದಿಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೃಷಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಸಾರ್ಕ್ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿ, ಸಾರ್ಕ್ ದೇಶಗಳಲ್ಲಿ ಅಡಕೆ ಬೆಳೆಯುವುದು ಕಡಿಮೆ. ಅಡಕೆ ಬೆಳೆಯದ ಪ್ರದೇಶದಿಂದ ಅಡಕೆಯನ್ನು ಆಮದು ಮಾಡಲಾಗಿದೆ. ಅಡಕೆ ಬೆಳೆಯದ ಭಾಗದಿಂದ ಯಾವುದೇ ಕಾರಣಕ್ಕೂ ಅಡಕೆ ಬಾರದಂತೆ ನೋಡಿಕೊಳ್ಳುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ಆಮದು ಸುಂಕ ಹೆಚ್ಚಿಸಲಾಗಿದೆ ಎಂದರು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಸಿಂಥೆಟಿಕ್ ರಬ್ಬರ್ ಬೆಲೆ ಕುಸಿದಿದೆ. ಹೀಗಾಗಿ ಅಗ್ಗದ ದರದಲ್ಲಿ ಸಿಗುವ ಸಿಂತೆಟಿಕ್ ರಬ್ಬರ್‌ಗೆ ಟಯರು ಕಂಪನಿಗಳು ಮಾರು ಹೋಗುತ್ತಿದೆ. ಅಲ್ಲದೆ ಭಾರಿ ಪ್ರಮಾಣದಲ್ಲಿ ರಬ್ಬರ್ ಆಗಿದೆ. ಈ ಹಿನ್ನೆಲೆಯಲ್ಲಿ ರಬ್ಬರ್ ಬೆಲೆ ಕುಸಿದಿದೆ. ಇದೇನಿದ್ದರೂ ತಾತ್ಕಾಲಿ ಎಂದು ಅವರು ಹೇಳಿದರು.

ಕೃಷಿ ಯಂತ್ರೋಪಕರಣಗಳ ಸಬ್ಸಿಡಿಯಲ್ಲಿ ಅವ್ಯವಹಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಬ್ಸಿಡಿ ವಿಚಾರದಲ್ಲಿ ಮಧ್ಯವರ್ತಿಗಳು, ಅಧಿಕಾರಿಗಳು ಸೇರಿ ರೈತರಿಗೆ ಸಿಗುವ ಸಬ್ಸಿಡಿಯನ್ನು ಕಬಳಿಸಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಸಬ್ಸಿಡಿಯನ್ನು ನೇರವಾಗಿ ರೈತನ ಅಕೌಂಟ್‌ಗೆ ಜಮೆ ಆಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಅಡಕೆ ಮೌಲ್ಯವರ್ಧಿತ ಕುರಿತು ಎ.ಎಸ್. ಭಟ್ ಕೇಳಿದ ಪ್ರಶ್ನೆಗೆ ಶೋಭಾ ಕರಂದ್ಲಾಜೆ ಉತ್ತರಿಸಿ, ಅಡಕೆಯನ್ನು ಆಹಾರ ಪಟ್ಟಿಗೆ ಸೇರಿಸಲಾಗಿದೆ. ಆ ಕಾರಣದಿಂದ ಮೌಲವರ್ಧಿತ ಸಾಧ್ಯವಾಗಿಲ್ಲ. ಇದರಲ್ಲಿ ಐಟಿಸಿ ಕಂಪನಿಗಳ ಲಾಬಿ ಇದೆ ಎಂಬುದು ಸ್ಪಷ್ಟವಾಗಿದೆ ಎಂದ ಅವರು, ದೆಹಲಿಯವರಿಗೆ ಅಲ್ಲಿಯ ಗುಡ್ಕಾ ಅಡಕೆ ಕುರಿತು ಮಾತ್ರ ಗೊತ್ತಿರುವುದು. ಆದರೆ ದ.ಕ. ಜಿಲ್ಲೆಯಲ್ಲಿ ಬೆಳೆಯುವ ನ್ಯಾಚುರಲ್ ಅಡಕೆ ಕುರಿತು ಗೊತ್ತಿಲ್ಲ. ಈ ಕಾರಣದಿಂದಾಗಿ ಅಡಕೆಯಲ್ಲಿ ವಿಷಕಾರಕ, ಕ್ಯಾನ್ಸರ್ ಕಾರಕವಿದೆ ಎಂದು ಮೌಲ್ಯವರ್ಧಿತ ಬಗ್ಗೆ ಹಿಂದೆ ಸರಿದಿದ್ದಾರೆ. ಈ ಕುರಿತು ಯಡಿಯೂರಪ್ಪ ಅವರಲ್ಲಿ ಚರ್ಚಿಸಿದ್ದು, ಮೌಲ್ಯವರ್ಧಿತದ ಕುಇರಿತು ಚರ್ಚಿಸಿ ರೈತರಿಗೆ ಹೆಚ್ಚು ಲಾಭ ಆಗುವಂತೆ ಮಾಡಲಾಗುವುದು ಎಂದರು. ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಉಪಸ್ಥಿತರಿದ್ದರು. ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು ಕಾರ್ಯಕ್ರಮ ನಿರೂಪಿಸಿದರು.

******************************************************

ಸೋಮವಾರ ಸಮಾರೋಪ :
ದಿನಾಂಕ 26-01-2015 ರ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ವಹಿಸಲಿರುವರು.ಗೌರವಾನ್ವಿತ ಅತಿಥಿಗಳಾಗಿ ಅರಣ್ಯ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕೇರಳ ಸರಕಾರದ ಕೃಷಿ ಸಚಿವರು ಹಾಗೂ ಪಶುಸಂಗೋಪನಾ ಸಚಿವರಾದ ಕೆ.ಪಿ.ಮೋಹನ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮುಂತಾದವರು ಭಾಗವಹಿಸಲಿರುವರು.

ಕ್ಯಾಂಪ್ಕೋ ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ.ಎಂ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಇದರ ಅಧ್ಯಕ್ಷ ಬಲರಾಮ ಆಚಾರ್ಯ, ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಅಧ್ಯಕ್ಷ ಪ್ರೋ| ಎ.ವಿ.ನಾರಾಯಣ, ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಇ.ಶಿವಪ್ರಸಾದ್, ಎ.ಆರ್.ಡಿ.ಎಫ್ ಮಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ಡಾ| ಎಸ್. ಕೇಶವ ಭಟ್ ಮುಂತಾದವರು ಉಪಸ್ಥಿತರಿರುವರು.

Camco_krishi_mela_5

ಇದೇ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕೃಷಿಯಂತ್ರ ಮೇಳದಲ್ಲಿ ಪ್ರತೀ ದಿನಾ ತೆಂಗಿನಿಂದ ನೀರಾ ತಯಾರಿ, ಸೌರ ಶಕ್ತಿ, ಕಾಡು ಪ್ರಾಣಿಗಳ ನಿಯಂತ್ರಣ ಮುಂತಾದ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಮಾತ್ರವಲ್ಲದೇ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಇಂದ್ರಜಾಲ ಪ್ರದರ್ಶನಗಳೂ ನಡೆಯಲಿದೆ.

ಕೃಷಿ ಮೇಳದ ವೈಶಿಷ್ಟತೆಗಳು:
240 ಮಳಿಗೆಗಳು ಕೂಡಾ ಭರ್ತಿಯಾಗಿದ್ದು ಇನ್ನೂ ಮಳಿಗೆಗಳಿಗೆ ಬೇಡಿಕೆಗಳು ಬರುತ್ತಿದ್ದು ಸುಮಾರು 1.5 ಕಿ.ಮೀ. ನಷ್ಟು ವ್ಯಾಪ್ತಿಯನ್ನು ಹೊಂದಿದೆ. ಸುಮಾರು ನಾಲ್ಕು ಲಕ್ಷ ಕೃಷಿಕರ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿರುವ ಈ ಕೃಷಿಯಂತ್ರ ಮೇಳಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಜಿಲ್ಲೆಗಳಿಂದ ಸುಮಾರು 1.5 ಲಕ್ಷ ಜನ ಕೃಷಿಕರು ಭಾಗವಹಿಸಲು ಸಿದ್ಧತೆ ನಡೆದಿದೆ.

ನಮ್ಮ ರಾಜ್ಯದ ಟಿ.ಎಸ್.ಎಸ್., ಮ್ಯಾಮ್ಕೋಸ್, ತುಮ್ಕೋಸ್ ನಂತಹ ಹಲವಾರು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳು ವಿಶೇಷವಾಗಿ ಕೃಷಿಕರನ್ನು ಯಂತ್ರ ಮೇಳಕ್ಕೆ ಕರೆತರುವ ಯೋಜನೆ ಹಾಕಲಾಗಿದೆ.

ಕ್ಯಾಂಪ್ಕೋದ ಮಂಗಳೂರು, ಪುತ್ತೂರು, ಕಾಸರಗೋಡು, ಶಿವಮೊಗ್ಗ, ಶಿರಸಿ ಮತ್ತು ತುಮಕೂರು ಪ್ರಾದೇಶಿಕ ಕಛೇರಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಖೆಗಳಿಂದ ರೈತರ ಸಂಪರ್ಕವಾಗಿದ್ದು ಬಹಳ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳವ ಆಶಯವನ್ನು ಸಂಘಟಕರು ವ್ಯಕ್ತ ಪಡಿಸಿದ್ದಾರೆ.

Camco_krishi_mela_6

ವಿಶೇಷತೆ:
ಕೊಯಂಬತ್ತೂರಿನ ಕೇಂದ್ರೀಯ ಕೃಷಿ ಇಂಜಿನಿಯರಿಂಗ್, ಹಾಸನ ಕೃಷಿ ಇಲಾಖೆ, ತ್ರಿಶೂರು ಕೃಷಿ ಇಲಾಖೆ ತಮ್ಮಲ್ಲಿರುವ ವಿಶೇಷ ಯಂತ್ರಗಳನ್ನು ಪ್ರದರ್ಶಿಸುತ್ತಿವೆ.
ವಾರಾಣಾಸಿ ಸುಬ್ರಾಯ ಭಟ್ ಪ್ರಶಸ್ತಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸುಮಾರು 45 ಯಂತ್ರೋಪಕರಣಗಳ ಪ್ರದರ್ಶನ.
ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಉಪಸ್ಥಿತಿಯಲ್ಲಿ ಕಿಸಾನ್ ಸಂಸತ್. ಅನುಭವಿ ತಜ್ಞರಿಂದ ಸೌರಶಕ್ತಿ, ತೆಂಗಿನಿಂದ ನೀರಾ ತಯಾರಿ, ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ವಿಚಾರ ಸಂಕಿರಣ.
ಸುಬ್ರಾಯ ಭಟ್‌ರ ಭಾವಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ
ವಿವಿಧ ಯಂತ್ರಗಳ ಮಾಹಿತಿ ಇರುವ ಡೈರೆಕ್ಟರಿ ಬಿಡುಗಡೆ.
ಪತ್ರಿಕೋಧ್ಯಮ ವಿದ್ಯಾರ್ಥಿಗಳಿಂದ ವಿಕಸನ ಪತ್ರಿಕೆ ಬಿಡುಗಡೆ.
ದಿನಂಪ್ರತಿ ಯಂತ್ರಮೇಳಕ್ಕೆ ಆಗಮಿಸುವ ಕೃಷಿಕರಿಗೆ ಕ್ಯಾಂಪ್ಕೋ ಚಾಕೋಲೇಟ್ ಕಾರ್ಖಾನೆ ವೀಕ್ಷಿಸುವ ಸದವಕಾಶ
ಆಹಾರ ಪದಾರ್ಥಗಳಿಗೆ ಪ್ರತ್ಯೇಕ ಪುಡ್ ಕೋರ್ಟ್.
ಸಾಂಸ್ಕೃತಿಕ ವೈಭವ ಮತ್ತು ಇಂದ್ರಜಾಲ ಪ್ರದರ್ಶನ ಕಾರ್ಯಕ್ರಮ
ಸುಮಾರು 10 ಕ್ಕೂ ಮಿಕ್ಕಿ ವಿವಿಧ ಮಾದರಿಯ ಮರಹತ್ತುವ ಯಂತ್ರಗಳ ಪ್ರದರ್ಶನ, ಸುಮಾರು 20 ಕ್ಕೂ ಮಿಕ್ಕಿ ಸುದಾರಿತ ಅಡಿಕೆ ಸುಲಿಯುವ ಯಂತ್ರಗಳು, ಕೈಗಾಡಿಗಳು, ಮೋಟೋ ಕಾರ್ಟ್‌ಗಳು.
ಪ್ರಸಿದ್ದ ವಿದೇಶಿ ಕಂಪೆನಿಗಳ ಪರವಾಗಿ ಅದರ ವಿತರಕರಿಂದ ಅಂತರಾಷ್ಟ್ರೀಯ ಗುಣಮಟ್ಟದ ಯಂತ್ರಗಳ ಪ್ರದರ್ಶನ.
ಕೃಷಿಕ ಸಂಶೋಧಕರಿಂದ ತಾವೇ ತಯಾರಿಸಿದ ಯಂತ್ರೋಪಕರಣಗಳ ಪ್ರದರ್ಶನ.
ತೋಟದೊಳಗೆ ಮಣ್ಣು ಅಗೆಯುವ ಸಣ್ಣ ಸಣ್ಣ ಸಾಧನಗಳ ಪ್ರದರ್ಶನ.
ಮಂಗಳೂರು ಆಕಾಶವಾಣಿಯಲ್ಲಿ ಮೂರುದಿನಗಳ ಕಾಲ ಕಾರ್ಯಕ್ರಮಗಳ ನೇರಪ್ರಸಾರ.
ಕ್ಯಾಂಪ್ಕೋ ಸಂಸ್ಥೆಯು ತಯಾರಿಸಿದ ಜಪಾನ ಮಾದರಿಯ ಮರ ಹತ್ತುವ ಸಾಧನದ ಪ್ರದರ್ಶನ.

Camco_krishi_mela_7

ವಿಶೇಷ ರಿಯಾಯಿತಿ:
ಯಂತ್ರಮೇಳ ವೀಕ್ಷಿಸಲು ಬರುವ ಎಲ್ಲರಿಗೂ ಕ್ಯಾಂಪ್ಕೋ ಚಾಕೋಲೇಟ್‌ಗಳನ್ನು ಶೇಕಡಾ 40 ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ.
ರೂ.10/- ಸರಳ ಗಂಜಿ ಊಟದ ವ್ಯವಸ್ಥೆ.
ಅಡಿಕೆ ಕೊಳೆರೋಗಕ್ಕೆ ಹೊಸ ಸಾವಯವ ಔಷದ ಸಂಶೋಧನೆ ಮಾಡಿದ ಡಾ.ಭಾಮೀ ಸಿ. ಶೆಣೈ ಅವರಿಗೆ ಕ್ಯಾಂಪ್ಕೋದಿಂದ ಸಹಕಾರ ನೀಡಲಾಗುವುದು.

Write A Comment