ಕನ್ನಡ ವಾರ್ತೆಗಳು

ಮಡಿಕೇರಿಗೆ ರೋಟರಿ ಕ್ವಿಜ್ ಪ್ರಶಸ್ತಿ – ಮಂಗಳೂರು ಮೆಟ್ರೊ, ಶಿರ್ವ ಕ್ಲಬ್ಬಿಗೂ ಗೌರವ

Pinterest LinkedIn Tumblr

rotaory_win_photo

ಮಂಗಳೂರು,ಜ.24 : ರೋಟರಿ ಜಿಲ್ಲಾ 3180  ಮಟ್ಟದ ವಾರ್ಷಿಕ ವಿಶೇಷ ಕ್ವಿಜ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಮಿಸ್ಟಿ ಹಿಲ್ ರೋಟರಿ ಕ್ಲಬ್ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮಂಗಳೂರು ಮೆಟ್ರೊ ರೋಟರಿ ಕ್ಲಬ್ ದ್ವೀತಿಯ ಸ್ಥಾನಿಯಾಗಿದೆ.

ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಟ್ಟದಲ್ಲಿ ನಡೆದ ಈ ಕ್ವಿಜ್ ಸ್ಪರ್ಧೆಯಲ್ಲಿ ಶಿರ್ವ ರೋಟರಿ ಕ್ಲಬ್ ಮೂರನೇ ಬಹುಮಾನ ಪಡೆದುಕೊಂಡಿತು. ಕ್ವಿಜ್ ಸ್ಪರ್ಧೆ ಹಲವು ಹಂತಗಳಲ್ಲಿ ನಡೆದು ಶುಕ್ರವಾರ ಸಂಜೆ ಮಂಗಳೂರು ಸೆಂಟ್ರಲ್ ರೋಟರಿ ಆಶ್ರಯದಲ್ಲಿ ಮಂಗಳೂರಿನ ಈಡನ್ ಕ್ಲಬ್ಬಿನಲ್ಲಿ ನಡೆದ ಫೈನಲಿನಲ್ಲಿ ಒಟ್ಟು ಎಂಟು ರೋಟರಿ ಕ್ಲಬ್ ತಂಡಗಳು ಭಾವಹಿಸಿದ್ದವು.

ಕ್ವಿಜ್ ಸಮಿತಿ ಅಧ್ಯಕ್ಷ ಡಾ.ಬಿ.ದೇವದಾಸ ರೈ ಅವರು ಕ್ವಿಜ್ ಮಾಸ್ಟರ್ ಆಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ ಅಧ್ಯಕ್ಷತೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ಡಾ.ಭಾಸ್ಕರ್ ಶ್ರೀನಿವಾಸ್ ಅವರು ಕ್ವಿಜ್ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ವಿತರಿಸಿದರು.
ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರಾಜಗೋಪಾಲ ರೈ, ನಿಯುಕ್ತ ಅಧ್ಯಕ್ಷರಾದ ಸತೀಶ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ವಿವಿದೆಡೆಯಿಂದ ಆಗಮಿಸಿದ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಸದಸ್ಯರು, ಕ್ವಿಜ್ ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Write A Comment