ಕನ್ನಡ ವಾರ್ತೆಗಳು

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದೇಶದ ಬೆಳವಣಿಗೆ ದುಡಿಯಬೇಕು :ಸುಧೀಂದ್ರ ಹಾಲ್ದೊಡ್ಡಿ

Pinterest LinkedIn Tumblr

alvas_science_report_1a

ಮಂಗಳೂರು,ಜ.23 : ಇವತ್ತು ಭಾರತ ದೇಶ ವಿಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆಯಲು ಕಾರಣವಾದದ್ದು ಹಿಂದಿನ ಕಾಲದ ವಿಜ್ಞಾನಿಗಳ ಕೊಡುಗೆ ಮಹತ್ವರವಾದದ್ದು. ಈಗೀನ ವಿಜ್ಞಾನದ ವಿದ್ಯಾರ್ಥಿಗಳು ತಾಂತ್ರೀಕವಾಗಿ ತುಂಬಾ ಮುಂದುವರೆಯುತಿದ್ದಾರೆ ಇದರಿಂದ ಮುಂದೆ ವಿಜ್ಞಾನ ಕ್ಷೇತ್ರದಲ್ಲಿ ಉನ್ನತವಾದ ಬೆಳವಣಿಗೆ ಕಂಡು ಬಂದು, ಭಾರತ ದೇಶ ಮುಂದುವರೆದ ದೇಶವಾಗಿ ಹೊರಹೊಮ್ಮುತ್ತದೆ ಎಂದು ಸುಧೀಂದ್ರ ಹಾಲ್ದೊಡ್ಡಿ ಹೇಳಿದರು. ಆಳ್ವಾಸ್ ಉನ್ನತ ಶಿಕ್ಷಣ,ಸಂಶೋಧನೆ ಮತ್ತು ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ವಿಜ್ಞಾನ ಮೇಳ “ಆಳ್ವಾಸ್ ವಿಜ್ಞಾನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.

alvas_science_report_1

ವಿಜ್ಞಾನ ಕ್ಷೇತ್ರದಲ್ಲಿ ಇಂದು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹೊಸ ಹೊಸ ಅನ್ವೇಷಣೆ ಮಾಡುತ್ತಾರೆ ಆದರೆ ಅದನ್ನು ಹೇಗೆ ಜಗತ್ತಿಗೆ ಪರಿಚಯಿಸುವುದು ಎಂಬುದು ಅವರಿಗೆ ತಿಳಿದಿರುವುದಿಲ್ಲ ಇದರಿಂದ ಅವರಿಗೆ ಜನರ ಅಭಿಪ್ರಾಯ ಪಡೆದುಕೊಳ್ಳಲು ಅಸಾಧ್ಯವಾಗುತ್ತದೆ.ಯಾವಾಗ ಜನರಿಂದ ಒಳಿತು ಅಥವಾ ಕೆಡುಕು ಅಭಿಪ್ರಾಯವನ್ನು ಪಡೆದಾಗ ತಮ್ಮ ತಪ್ಪನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವಿಜಾನ್ಞದ ಕ್ಷೇತ್ರದ ಚಟುವಟಿಕೆ ದೀರ್ಘಕಾಲದ ಕಾರ್ಯ ಇದು ತುಂಬಾ ತಾಳ್ಮೆಯ ಕೆಲಸ ಎಂದು ಮಾಜಿ ವಿಜ್ಞಾನಿ ಮತ್ತು ಸಹನಿರ್ದೇಶಕರು ಕೆಮಿಲಕ್,ಡಿ.ಆರ್.ಡಿ.ಡಿ ಡಾ. ಸುಧೀಂದ್ರ ಹಾಲ್ದೊಡ್ಡಿ ಹೇಳಿದರು. ಈ ಸಂದರ್ಭದಲ್ಲಿ ಆಳ್ವಾಸ್ ಪತ್ರಿಕೋಧ್ಯಮ ವಿಭಾಗದಿಂದ ಪ್ರಕಟಕೊಳ್ಳುತ್ತಿರುವ ಆಳ್ವಾಸ್ ಮಾಧ್ಯಮವನ್ನು ಬಿಡುಗಡೆಮಾಡಲಾಯಿತು.

alvas_science_report_3

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕುರಿಯನ್ ಮತ್ತು ರಸಾಯನಶಾಸ್ತ್ರ ವಿಭಾಗದ ಮಾರ್ಗದರ್ಶಕರು ಡಾ. ಎಸ್ ಸಂಶುದ್ದೀನ್, ಅಧ್ಯಾಪಕ ವೃಂದ, 13  ಕಾಲೇಜು ಭಾಗವಹಿಸಿದ್ದು,ವಿವಿಧ ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾರ್ಗದರ್ಶಕ ಡಾ. ಪ್ರವೀಣ್ ಮುಗಲಿ ಸ್ವಾಗತಿಸಿದರು. ಮಾರ್ಗದರ್ಶಕ ಡಾ.ಸಂಶುದ್ದೀನ್ ವಂದಿಸಿದರು. ಉಪನ್ಯಾಸಕಿ ದೀಪಾ ರತ್ನಾಕರ್ವಕಾರ್ಯಕ್ರಮನ್ನು ನಿರೂಪಿದರು.

Write A Comment