ಕನ್ನಡ ವಾರ್ತೆಗಳು

ಗಂಗೊಳ್ಳಿ: ಅಂಗಡಿಗೆ ಬೆಂಕಿ ಹಾಗೂ ಗಲಭೆ ಪ್ರಕರಣ; ಗಂಗೊಳ್ಳಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ; ಹಲವರು ಅರೆಸ್ಟ್

Pinterest LinkedIn Tumblr

ಕುಂದಾಪುರ: ಗಂಗೊಳ್ಳಿಯಲ್ಲಿ ಮಂಗಳವಾರ ತಡರಾತ್ರಿ (ಬುಧವಾರ ಮುಂಜಾನೆ) 2.30 ಗಂಟೆಗೆ ವೆಂಕಟೇಶ ಶೈಣೈ ಎನ್ನುವರ ಅಂಗಡಿ, ಗೋದಾಮು ಹಾಗೂ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿಯಿಟ್ಟ ಘಟನೆಯ ತರುವಾಯ ಆಕ್ರೋಷಗೊಂಡ ಹಿಂದೂಪರ ಸಂಘಟನೆಗಳು ಬುಧವಾರ ಬೆಳಿಗ್ಗೆ ಗಂಗೊಳ್ಳಿಗೆ ಬಂದ್ ನಡೆಸಿದ್ದರು.

ಈ ವೇಳೆ ನಡೆದ ಅಹಿತಕರ ಘಟನೆಗಳು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜ.21 ರಿಂದ ಜ.25 ಮಧ್ಯರಾತ್ರಿಯವರೆಗೂ ಗಂಗೊಳ್ಳಿ, ತ್ರಾಸಿ, ಹಾಗೂ ಗುಜ್ಜಾಡಿ ಪರಿಸರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

Gangolli_Communal_Issue_2015 (32) Gangolli_Communal_Issue_2015 (31) Gangolli_Communal_Issue_2015 (29) Gangolli_Communal_Issue_2015 (30) Gangolli_Communal_Issue_2015 (27) Gangolli_Communal_Issue_2015 (28) Gangolli_Communal_Issue_2015 (25) Gangolli_Communal_Issue_2015 (26) Gangolli_Communal_Issue_2015 (24) Gangolli_Communal_Issue_2015

ಗಂಗೊಳಿಯ ವೆಂಕಟೇಶ ಶೈಣೈ ಎನ್ನುವರ ಅಂಗಡಿ, ಗೋಡಾನು ಹಾಗು 2 ಕಾರು ಹಾಗೂ  ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಈ ಬಗ್ಗೆ ಆಕ್ರೋಷಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗಂಗೊಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಗಂಗೊಳಿ ಬಂದ್‌ಗೆ ಕರೆ ನೀಡಿದ್ದರು. ಈ ಬಳಿಕ ಗಂಗೊಳ್ಳಿ ರಾಮಮಂದಿರ ಪ್ರದೇಶದಲ್ಲಿ ರಸ್ತೆ ತಡೆದು ವಾಹನ ಸಂಚಾರಕ್ಕೆ ಪ್ರತಿಭಟನಾಕಾರರು ನಿರ್ಭಂದ ಹೇರಿದ್ದರು.

ಮಧ್ಯಾಹ್ನದ ವೇಳೆ ಇನ್ನೊಂದು ಸಮುದಾಯದವರು ಅರ್ಬನ್ ಬ್ಯಾಂಕ್ ಸಮೀಪದ ನಿವಾಸಿ ಗಂಗೊಳ್ಳಿಯ ನಗರೇಶ್ವರಿ ದೇವಸ್ಥಾನದ ಬಳಿ ಕ್ಷೌರದಂಗಡಿ ನಡೆಸುತ್ತಿರುವ ಸತೀಶ್ ಭಂಡಾರಿ ಎನ್ನುವವರ ತಲೆಗೆ ಬ್ಯಾಟ್ ಹಾಗೂ ಕಲ್ಲಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ಹಲ್ಲೆಗೊಳಗಾದ ಸಂತೋಷ ಎಂಬಾತನು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು.

Gangolli_Communal_Issue_2015 (1) Gangolli_Communal_Issue_2015 (2) Gangolli_Communal_Issue_2015 (5) Gangolli_Communal_Issue_2015 (4) Gangolli_Communal_Issue_2015 (3) Gangolli_Communal_Issue_2015 (6) Gangolli_Communal_Issue_2015 (7) Gangolli_Communal_Issue_2015 (8) Gangolli_Communal_Issue_2015 (11) Gangolli_Communal_Issue_2015 (10) Gangolli_Communal_Issue_2015 (9) Gangolli_Communal_Issue_2015 (12) Gangolli_Communal_Issue_2015 (13) Gangolli_Communal_Issue_2015 (14) Gangolli_Communal_Issue_2015 (17) Gangolli_Communal_Issue_2015 (16) Gangolli_Communal_Issue_2015 (15) Gangolli_Communal_Issue_2015 (18) Gangolli_Communal_Issue_2015 (19) Gangolli_Communal_Issue_2015 (20) Gangolli_Communal_Issue_2015 (21)

ತದನಂತರ ಗುಂಪೊಂದು ಅರ್ಬನ್ ಬ್ಯಾಂಕ್ ಸಮೀಪದ ಮನೆ ಹಾಗೂ ಮೊಯಿದ್ದೀನ್ ಜುಮ್ಮಾ ಮಸೀದಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಸೀದಿಯ ಅಝಾನ್ ಕೊಡುವ ಮೌಲಾನಾ ಮಿರಾ ಸಾಹೇಬ್ ಎನ್ನುವವರ ಕೈಗೆ ಗಾಯವಾಗಿದೆ. ಅಲ್ಲದೇ ವೀರೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಆಸ್ಮಾ ಅಬ್ದುಲ್ ರಹೀಮ್ ಎನ್ನುವವರ ಮನೆಯ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಗುಂಪೊಂದು ನಡೆಸಿದ ಕಲ್ಲು ತೂರಾಟದ ವೇಳೆ ರಿಝಿಯಾ ಹಾಗೂ ಅಮೀನಾ ಎನ್ನುವವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆಯೂ ಮಾಹಿತಿಯಿದೆ.

ಗಂಗೊಳ್ಳಿ ಪ್ರಕರಣವು ಮತೀಯ ಬಣ್ಣ ಪಡೆಯುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಇಲಾಖೆ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳು ಗಂಗೊಳ್ಳಿ ಪ್ರದೇಶದಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಿದ್ದಾರೆ. ತ್ರಾಸಿ, ಗುಜ್ಜಾಡಿ ಹಾಗೂ ಗಂಗೊಳ್ಳಿ ಭಾಗದಲ್ಲಿ ಈ ನಿಷೇದಾಜ್ಞೆ ಜಾರಿಯಲ್ಲಿದೆ.

40ಕ್ಕೂ ಅಧಿಕ ಮಂದಿ ಬಂಧನ…?: ಗಂಗೊಳ್ಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದ ಬೆಂಕಿ ಪ್ರಕರಣಕ್ಕೆ ಸಂಭಂಧಿಸಿದಂತೆ ಬುಧವಾರ ಬಂದ್ ಬಳಿಕ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪೊಲಿಸರು 40ಕ್ಕೂ ಅಧಿಕ ಜನರನ್ನು ವಶಪಡಿಸಿಕೊಂಡಿದ್ದಾರೆ. ಇವರ ಪೈಕಿ ೧೨ ಜನರ ಮೇಲೆ ಶಾಂತಿ ಸುವ್ಯವಸ್ಥೆಗೆ ಭಂಗ ಮಾಡಿದ ಆರೋಪವನ್ನು ಮಾಡಲಾಗಿದೆ.

ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿಯ ಭಾಗದಲ್ಲಿ ವೆಲ್ಡಿಂಗ್ ವೃತ್ತಿ ಮಾಡಿಕೊಂಡಿರುವ ವ್ಯಕ್ತಿಯೋರ್ವನ ಬಗ್ಗೆ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದ್ದು ಆತ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಆದರೇ ಆತ ಕೃತ್ಯಕ್ಕೆ ಬಳಸಿದ್ದನೆನ್ನಲಾದ ಮಾರುತಿ ಕಾರೊಂದನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ ಹಾಗೂ ಇನ್ನೋರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ.

ಸದ್ಯ ೩ ಕೆ.ಎಸ್.ಆರ್.ಪಿ., ೫ ಡಿ.ಎ.ಆರ್. ಸೇರಿದಂತೆ ನೂರಕ್ಕೂ ಅಧಿಕ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment