ಕನ್ನಡ ವಾರ್ತೆಗಳು

ಪ್ರಜ್ಞಾಸಿಂಗ್ ಕಟೌಟ್ ತೆರವಿಗೆ ಹೋದ ಅಧಿಕಾರಿಗಳಿಗೆ ಪುರಸಭಾ ಆಡಳಿತ ಸಂಘಟಕ ಕಾರ್ಯಕರ್ತರಿಂದ ಅಡ್ಡಿ.

Pinterest LinkedIn Tumblr

prajnaa_sing_cutout

ಪುತ್ತೂರು, ಜ.17 : ಪುತ್ತೂರಿನ ಮುಖ್ಯರಸ್ತೆಯಲ್ಲಿ ಅಳವಡಿಸಲಾಗಿದ್ದ ಮಾಲೆಂಗಾವ್ ಬಾಂಬ್ ಸ್ಪೋಟದ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಭಾವಚಿತ್ರವಿದ್ದ ಕಟೌಟ್‌ನ್ನು ಪುತ್ತೂರು ಪುರಸಭಾ ಅಕಾರಿಗಳು ಶುಕ್ರವಾರ ಬೆಳಗ್ಗೆ ತೆರವುಗೊಳಿಸಲು ಮುಂದಾದ ಮತ್ತು ಅದಕ್ಕೆ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದ ತಡೆದ ಘಟನೆ ವರದಿಯಾಗಿದೆ.

ಪುತ್ತೂರಿನ ಪೊಲೀಸ್ ಠಾಣೆಯ ಸಮೀಪ ಮತ್ತು ದರ್ಬೆ ಜಂಕ್ಷನ್ ಬಳಿ ವಿರಾಟ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಂಕಿತ ಭಯೋತ್ಪಾದಕಿ ಪ್ರಜ್ಞ್ಞಾ ಸಿಂಗ್ ಭಾವಚಿತ್ರವಿದ್ದ ಕಟೌಟನ್ನು ಅಳವಡಿಸಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿ ಮತ್ತು ಕಟೌಟ್ ತೆರವುಗೊಳಿಸುವಂತೆ ಆಗ್ರಹಿಸಿ ಪಿಎ್ಐ ಸಂಘಟನೆಯಿಂದ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪುತ್ತೂರಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಈ ಕಟೌಟ್ ತೆರವುಗೊಳಿಸುವ ಬಗ್ಗೆ ಆಗ್ರಹವೂ ವ್ಯಕ್ತವಾಗಿತ್ತು. ಸಮಾವೇಶದ ಅಂತಿಮ ಕ್ಷಣವಾದ ಶುಕ್ರವಾರ ಬೆಳಗ್ಗೆ ಪುತ್ತೂರು ಪುರಸಭಾ ಆಡಳಿತವು ಪೊಲೀಸ್ ಸ್ಟೇಷನ್ ಸಮೀಪದಲ್ಲಿ ಅಳವಡಿಸಲಾಗಿದ್ದ ಕಟೌಟನ್ನು ತೆರವುಗೊಳಿಸಲು ಮುಂದಾಗಿತ್ತು.

ಈ ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಇಂದು ಕಟೌಟ್ ತೆರವುಗೊಳಿಸಬಾರದು ಎಂದು ಪಟ್ಟು ಹಿಡಿದರು ಎನ್ನಲಾಗಿದೆ. ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಬಿಟ್ಟ ಅಕಾರಿಗಳು ಬರಿಗೈಯಲ್ಲಿ ಹಿಂದಿರುಗಿದರು ಎಂದು ತಿಳಿದು ಬಂದಿದೆ.

Write A Comment