ಮಂಗಳೂರು.ಜ.15: ದ.ಕ. ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಖಾಸಗಿ ಬಸ್ಸುಗಳಾದ ನಗರ ಸಾರಿಗೆ, ಗ್ರಾಮಾಂತರ ಸಾರಿಗೆ ಹಾಗೂ ಎಕ್ಸ್‌ಪ್ರೆಸ್ ಮತ್ತು ಷಟಲ್ ಬಸ್ಸುಗಳ ಪ್ರಯಾಣ ದರವನ್ನು ದಿನಾಂಕ:12-01-2015 ರಿಂದ ಜ್ಯಾರಿಗೆ ಬರುವಂತೆ ಪರಿಷ್ಕರಿಸಿ ಜ್ಯಾರಿಗೊಳಿಸಿದ ದರಪಟ್ಟಿಯನ್ನು ಎಲ್ಲಾ ದೈನಂದಿನ ಪತ್ರಿಕೆಗಳಲ್ಲಿ ಈಗಾಗಲೇ ಪ್ರಚುರಪಡಿಸಲಾಗಿರುತ್ತದೆ. ಆದರೂ ಕೆಲವು ಬಸ್ಸುಗಳಲ್ಲಿ ಅಧಿಕ ದರ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಪ್ರಾದೇಶಿಕ ಸಾರಿಗೆ ಕಛೇರಿಗೆ ಬರುತ್ತಿದೆ.
ಆದುದರಿಂದ ಸಂಬಂಧಪಟ್ಟ ಎಲ್ಲಾ ಬಸ್ಸು ಮಾಲೀಕರಿಗೆ/ ಪರವಾನಿಗೆದಾರರಿಗೆ ಈ ಮೂಲಕ ತಿಳಿಸುವುದೇನೆಂದರೆ ಪ್ರಾಧಿಕಾರವು ನಿಗದಿಪಡಿಸಿರುವ ದರಪಟ್ಟಿಯಲ್ಲಿದ್ದಂತೆಯೇ ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆದುಕೊಳ್ಳತಕ್ಕದ್ದು ಹಾಗೂ ಪ್ರಾಧಿಕಾರವು ನಿಗದಿಪಡಿಸಿದ ದರಪಟ್ಟಿಯನ್ನು ಎಲ್ಲಾ ಬಸ್ಸುಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸತಕ್ಕದ್ದು.
ತಪ್ಪಿದ್ದಲ್ಲಿ ಅಂತಹ ಅಧಿಕ ದರ ವಸೂಲಿ ಮಾಡುವ ಬಸ್ಸು ಮಾಲಕರ/ ಪರವಾನಿಗೆದಾರರ ವಿರುದ್ಧ ಸೂಕ್ತ ಕ್ರಮವನ್ನು ಇಲಾಖಾ ವತಿಯಿಂದ ತೆಗೆದುಕೊಳ್ಳಲಾಗುವುದೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.