ಉಡುಪಿ: ಉಡುಪಿ ತಾಲೂಕಿನ ಬನ್ನಾಡಿ ಗ್ರಾಮದ ಉಪ್ಲಾಡಿ ಇಟ್ಟಿಗೆ ಕಾರ್ಖಾನೆ ಬಳಿ ನಿನ್ನೆ ರಾತ್ರಿ ಬೊಲೆರೋ ಮತ್ತು ಆಟೋ ರಿಕ್ಷಾ ಮುಖಾ ಮುಖಿ ಢಿಕ್ಕಿ ಸಂಭವಿಸಿದ್ದು, ರಿಕ್ಷಾ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಆಟೋ ಚಾಲಕನನ್ನು ಶಂಕರ ಮರಕಾಲ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಸಂಜೆ 7.15 ರ ಸುಮಾರಿಗೆ ಕೋಟ ಮೂರು ಕೈ ಕಡೆಯಿಂದ ಬಂದ, ನಂಬರ್ ಅಳವಡಿಸದ ಮಹೇಂದ್ರ ಬೊಲೆರೋ ವಾಹನ ಉಪ್ಲಾಡಿ ಇಟ್ಟಿಗೆ ಕಾರ್ಖಾನೆ ಬಳಿಯ ಸಣ್ಣ ತಿರುವಿನ ಬಳಿ ರಸ್ತೆಯ ತೀರ ಎಡ ಭಾಗಕ್ಕೆ ಬಂದು, ಅಚ್ಲಾಡಿ ಬದಿಯಿಂದ ಕೋಟ ಕಡೆಗೆ ಬರುತ್ತಿದ್ದ ರಿಕ್ಷಾ ಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಶಂಕರ ಮರಕಾಲ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಶಂಕರ ಮರಕಾಲರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುದು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಪಘಾತ ತೀವ್ರತೆ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ.
ಈ ಕುರಿತು ಸ್ಥಳೀಯರಾದ ಗಣೇಶ್ ಅಮೀನ್ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.