ಕುಂದಾಪುರ: ಕಳೆದ ಶನಿವಾರ ಸಂಜೆ ಮನೆಯಿಂದ ಸ್ನೇಹಿತನ ಮನೆಗೆ ಹೊರಟು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ತನ್ನ ಸ್ನೇಹಿತನ ಮನೆಯ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ನೇಹಿತನಿಂದಲೇ ಆತ ಕೊಲೆಯಾಗಿದ್ದಾನೆ.
ಉಡುಪಿ ತಾಲೂಕಿನ ಕೋಟ ಸಮೀಪದ ಬನ್ನಾಡಿ ಗ್ರಾಮದ ಉಪ್ಲಾಡಿ ನಿವಾಸಿ ರೇವತಿ ಎನ್ನುವವರ ಪುತ್ರ ಸುಘೋಷ್ (10) ಸ್ನೇಹಿತನಿಂದಲೇ ಕೊಲೆಯಾದಾತ. ಸುಘೋಷ್ ಮನೆ ಸಮೀಪದ ಚಿಕ್ಕಪ್ಪನ ಮನೆಯಲ್ಲಿ ವಾಸವಿರುವ 15 ವರ್ಷದ ಬಾಲಕನೋರ್ವನೇ ಸದ್ಯ ಬಂಧಿತ ಆರೋಪಿಯಾಗಿದ್ದಾನೆ.
ಘಟನೆ ಹಿನ್ನೆಲೆ: ತೆಕ್ಕಟ್ಟೆ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದ ಸುಘೋಶ್ ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿ ಬಂದು ಮನೆಯಲ್ಲಿಯೇ ಇದ್ದ. ಈ ಸಂದರ್ಭ ಅದೇ ದಾರಿ ಮೂಲಕವಾಗಿ ಟ್ಯೂಷನ್ ಮುಗಿಸಿ ಮನೆಕಡೆಗೆ ಹೊರಟಿದ್ದ ಈತನ ಸ್ನೇಹಿತ ಕೈಸನ್ನೆ ಮೂಲಕ ತನ್ನ ಮನೆಗೆ ಆಟವಾಡಲು ಬರುವಂತೆ ಹೇಳಿದ್ದಾನೆ. ಆತನ ಕರೆಗೆ ಓಗೊಟ್ಟ ಬಾಲಕ ಆಟವಾಡಲು ತೆರಳಿದ್ದು ಸಂಜೆ 6 ಗಂತೆಯಾದರೂ ವಾಪಾಸ್ಸಾಗಿರಲಿಲ್ಲ. ಮನೆಯವರು ಹಾಗೂ ಸ್ಥಳೀಯರು ಸಾಕಷ್ಟು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತನ್ನ ಮನೆಯಿಂದ ಸ್ನೇಹಿತನ ಮನೆಗೆ ಸೈಕಲ್ ಮೂಲಕ ತೆರಳಿದ್ದ ಬಾಲಕನ ಸೈಕಲ್ ಮನೆಯ ಬಳಿಯೇ ಪತ್ತೆಯಾಗಿತ್ತು. ಆತನನ್ನು ಆಟವಾಡಲು ಕರೆದ ಸ್ನೇಹಿತ ನಾಪಾತ್ತೆಯಾದ ಬಾಲಕನ ಬಗ್ಗೆ ಯಾವುದೇ ಸಮರ್ಪಕ ಉತ್ತರವನ್ನು ನೀಡದ ಕಾರಣ ಆತನ ಮೇಲೆಯೇ ಸ್ಥಳೀಯರು ಅನುಮಾನಿಸಿದ್ದರಾದರೂ ಆರೋಪಿ 18 ವರ್ಷಕ್ಕೂ ಕಿರಿಯವನಾದ ಕಾರಣ ಆತನನ್ನು ತೀವ್ರ ವಿಚಾರಣೆಗೊಳಪಡಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಆದರೇ ಈತನೇ ಆರೋಪಿಯೆನ್ನುವುದು ಸ್ಥಳಿಯರು ಗೊತ್ತಿತ್ತು ಎನ್ನಲಾಗಿದೆ.
ಕಥೆಗೆ ಟ್ವಿಸ್ಟ್: ಹೀಗೆ ಬಾಲಕ ಸುಘೋಶ್ ನಾಪತ್ತೆಯ ಬಗ್ಗೆ ತನಗೇನು ತಿಳಿದಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದ 15 ವರ್ಷ ಪ್ರಾಯದ ಸುಘೋಶನ ಸ್ನೇಹಿತ ಶನಿವಾರ ಸಂಜೆ ವೇಳೆ ಬಹಳಷ್ಜ್ಟು ಜನರು ವಿಚಾರಿಸಿದಾಗಲೂ ಅದೇ ಉತ್ತರ ನೀಡಿದ್ದ. ಭಾನುವಾರ ಬೆಳಿಗ್ಗೆ ಟ್ಯೂಶನ್ ಕ್ಲಾಸಿಗೆ ತೆರಳುವ ನೆಪವೊಡ್ಡಿ ಮನೆಯಿಂದ ದುಡ್ಡು ಪಡೆದು ಹೊರನಡೆದಿದ್ದ ಆತ, ಸ್ಥಳೀಯ ಕೋಟದ ಜಾತ್ರೆ, ಕೋಟದ ಪಡುಕೆರೆ ಸೇರಿದಂತೆ ಹಲವೆಡೆ ಅಲೆದಾಡಿದ್ದ. ಬಳಿಕ ಸ್ಯಾಬ್ರಕಟ್ಟೆಯಲ್ಲಿ ಇತರೇ ಬಾಲಕರೊಂದಿಗೆ ಕ್ರಿಕೇಟ್ ಆಟವಾಡಿ ಸಂಜೆ ವೇಳೆಗೆ ಕುಂದಾಪುರಕ್ಕೆ ತೆರಳಿ ಅಲ್ಲಿನಿಂದ ಶಿವಮೊಗ್ಗಕ್ಕೆ ಬಸ್ಸು ಹತ್ತಿ ಸಾಗರದಲ್ಲಿನ ಅಜ್ಜಿ ಮನೆಗೆ ತೆರಳುವ ಸ್ಕೆಚ್ ರೂಪಿಸಿದ್ದ. ಈ ಬಾಲಕನ ವಿಚಾರಣೆಗಾಗಿ ಪೊಲೀಸರು ಭಾನುವಾರ ಮನೆಗೆ ಬಂದರೇ ದಿನವಿಡೀ ಈತ ಮನೆಗೆ ಬಂದಿರಲಿಲ್ಲ, ಇದರಿಂದಾಗಿ ಸ್ಥಳಿಯರು ಹಾಗೂ ಪೊಲೀಸರಿಗೆ ಸುಘೋಶ್ ನಾಪತ್ತೆಯಲ್ಲಿ ಈ ಬಾಲಕನ ಕೈವಾಡವಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈತನ ಚಿಕ್ಕಪ್ಪನಾದ ಕಲ್ಯಾಣಕುಮಾರ್ ಅಡಿಗನಲ್ಲಿ ವಿಚಾರಿಸಿದರೇ ಆತ ಬೆಳಿಗ್ಗೆನಿಂದ ಬಂದಿಲ್ಲ ಎನ್ನುವ ಉತ್ತರವೂ ಸಿಕ್ಕಿತ್ತು. ಹೀಗೆ ಶಿವಮೊಗ್ಗಕ್ಕೆ ತೆರಳಿದ ಬಾಲಕನಿಗೆ ಸಾಗರದ ಬಸ್ಸು ಸಿಗದೇ ಇದ್ದ ಕಾರಣ ತಾನ್ಬೂ ತೆರಳಿದ್ದ ಬಸ್ಸಿನಲ್ಲಿಯೇ ವಾಪಾಸ್ಸು ಕುಂದಾಪುರದತ್ತ ಪಯಣ ಬೆಳೆಸಿದ್ದ. ಕುಂದಾಪುರದಿಂದ ಕೋಟಕ್ಕೆ ಬಂದು ಬಸ್ಸು ಇಳಿಯುತ್ತಿದ್ದಂತೆಯೇ ಸ್ಥಳಿಯರಿಬ್ಬರು ಆತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ, ಆತ ತಡವರಿಸಿದಾಗ ಕೂಡಲೇ ಕೋಟ ಪೊಳಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕನನ್ನು ವಶಪಡಿಸಿಕೊಂಡು ತನಿಖೆ ನಡೆಸಿದಾಗ ಆತ ಬಾಯ್ಬಿಟ್ಟ ಭಯಾನಕ ರಹಸ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.
ಹೊಡೆದು-ಬಾವಿಗೆಸಿದಿದ್ದ: ವಿಚಾರಣೆ ವೇಳೆ ಬಂಧಿತ ಬಾಲಕನು ಸುಘೋಶ್ ಕುರಿತ ಸಂಗತಿಯನ್ನು ಬಿಚ್ಚಿಟ್ಟಿದ್ದ. ಶನಿವಾರ ಟ್ಯೂಶನ್ ಮುಗಿಸಿ ಬರುವಾಗ ಮನೆ ಸಮೀಪವಿದ್ದ ಸುಘೋಶನನ್ನು ತಮ್ಮ ಮನೆಗೆ ಬರುವಂತೆ ತಿಳ್ಖಿಸಿದ್ದು, ಆತ ಸೈಕಲಿನಲ್ಲಿ ಈತನ ಮನೆಗೆ ಬಂದಿದ್ದ. ಬಳಿಕ ಇಬ್ಬರು ತಿಂಡಿ ತಿಂದು ಮಾತಿಗಿಳಿದಿದ್ದಾರೆ. ಈ ವೇಳೆ ಆರೋಪಿ ಬಾಲಕ ಸುಘೋಷನ ಬಳಿ ಹಳೆಯ ಕ್ಷುಲ್ಲಕ ವಿಚಾರವೊಂದನ್ನು ಕೆದಕಿ ಜಗಳಕ್ಕಿಳಿದು ಹೊಡೆದಿದ್ದಾನೆ. ಆರೋಪಿ ಬಾಲಕನ ಹೊಡೆತದಿಂದ ಘಾಸಿಗೊಳಗಾದ ಬಾಲಕನ ಮನೆಯಲ್ಲಿನ ಕಂಬವೊಂದಕ್ಕೆ ತಗುಲಿ ಆತ ರಜ್ನೆ ತಪ್ಪಿ ಕೆಳಗುರುಳಿದ್ದಾನೆ, ಆರೋಪಿ ಬಾಲಕ ಸುಘೋಶ್ ಸತ್ತಿರುವನೆಮ್ದು ಭಾವಿಸಿ ಹಿಂದೆ ಮುಂದೆ ನೋಡದೇ ಆತನ ದೇಹವನ್ನು ಮನೆ ಸಮೀಪದ ಪಂಪು-ಸೆಟ್ ಬಾವಿಯ ಬಳಿ ತಂದು ಬಾವಿಗೆಸೆದು ತನೆಗೇನು ತಿಳಿದಿಲ್ಲ ಎಂಬಂತೆ ಮನೆಗೆ ತೆರಳಿ, ಸುಘೋಷನ ಸೈಕಲನ್ನು ಆತನ ಮನೆಯ ಮುಂದಿಟ್ಟು ಬಂದು ಕೂರುತ್ತಾನೆ. ಬಳಿಕ ತನ್ನ ಚಿಕ್ಕಪ್ಪನೈಗೆ ಫೋನಾಯಿಸಿ ಕುಂದಾಪುರದ ಬಳ್ಕೂರಿಗೆ ತೆರಳಿ ಅಲ್ಲಿ ತನ ತಂದೆ ಕಳುಹಿಸಿಕೊಟ್ಟ ಬಟ್ಟೆ ತೆಗೆದುಕೊಂಡುಬರುವಂತೆ ಕೋರುತ್ತಾನೆ. ಇಬ್ಬರು ಆ ಬಳಿಕ ಅಲ್ಲಿಗೆ ತೆರಳಿ ಪುನಃ ರಾತ್ರಿ ೧೦ ಗಂತೆಯ ಸುಮಾರಿಗೆ ವಾಪಾಸಾಗುತ್ತಾರೆ. ಭಾನುವಾರ ಬೆಳಿಗ್ಗೆನಿಂದ ಆರೋಪಿ ಬಾಲಕ ಮನೆಯಲ್ಲಿರದೇ ನಾಪತ್ತೆಯಾಗಿರುತ್ತಾನೆ.
ಬಡತನದ ಕುಟುಂಬ: ಸುಘೋಶ್ ೪ ನೇ ತರಗತಿಯಲ್ಲಿ ಓದುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಈತನ ತಂದೆ ವಿಘ್ನೇಶ್ವರ ಭಟ್ ಕಳೆದ ಮೂರು ತಿಂಗಳ ಹಿಂದಷ್ಟೇ ಹ್ರದಯಾಘಾತದಿಂದ ಸಾವನ್ನಪ್ಪಿದ್ದರು. ಇನ್ನು ತಾಯಿ ರೇವತಿ ಭಟ್ ಬ್ರೇನ್ ಟ್ಯೂಂಅರ್ ಹಾಗೂ ಫ್ಯಾರಾಲಿಸಿಸ್ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದಾರೆ. ಹಿರಿಯ ಸಹೋದರ ಮಹೇಶ್ ಕೋಟ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಮನೆಯ ನಿರ್ವಹಣೆಯನ್ನು ಆತನೇ ಮಾಡುತ್ತಿದ್ದ ಎನ್ನಲಾಗಿದೆ. ಹೀಗೆ ಬಡ ಕುಟುಂಬವೀಗ ನೋವಿನ ಮೇಲೆ ನೋವು ಅನುಭವಿಸುವಂತಾಗಿದ್ದು, ಮಗನ ಈ ಸಾವಿನೀಂದಾಗಿ ರೇವತಿ ಅವರು ಮತ್ತಷ್ಟು ಕುಗ್ಗಿದ್ದಾರೆ.
ಸ್ಥಳೀಯರ ಆಕ್ರೋಷ: ಬೆಂಗಳೂರಿನಲ್ಲಿ ತಂದೆ-ತಾಯಿಯೊಂದಿಗೆ ಇರುವಾಗಲೂ ಕೂಡ ಚೇಷ್ಟೇ ಮಾಡುತ್ತಿದ್ದ ಈ ಬಾಲಕ ೬ ತಿಂಗಳ ಹಿಂದಷ್ಟೇ ಚಿಕ್ಕಪ್ಪನ ಮನೆಯಾದ ಉಪ್ಲಾಡಿಗೆ ಬಂದಿದ್ದು ಇಲ್ಲಿಯೂ ತನ್ನ ಚೇಷ್ಟೆ ಬುದ್ದಿಯ ಮೂಲಕ ಊರಿನವರ ಕೆಂಗಣ್ಣಿಗೆ ಗುರಿಯಾಗಿದ್ದ. ಶಾಲೆಗೆ ತೆರಳದೇ ಅಲೆಯುತ್ತಿದ್ದ ಈತತನಗಿಂತ ವಯಸ್ಸಿನಲ್ಲಿ ಹಿರಿಯರಾದ ಹಲವರ ಸಂಗವನ್ನಿಟ್ಟುಕೊಂಡಿದ್ದ ಎನ್ನಲಾಗಿದೆ. ಈತನ ಉಪ್ದ್ರವ ಹಾಗೂ ಚೇಷ್ಟೆಗೆ ಈತನ ಚಿಕ್ಕಪ್ಪನಾದ ಕಲ್ಯಾಣಕುಮಾರ್ ಅಡಿಗನ ಕುಮ್ಮಕ್ಕಿದೆ, ಅಲ್ಲದೇ ಸುಘೋಶನ ಕೊಲೆಯ ಪ್ರಕರಣದಲ್ಲಿ ಕಲ್ಯಾಣ ಕುಮಾರ್ ಕೂಡ ಭಾಗಿಯಾಗಿದ್ದಾನೆ, ಆತನಿಗೂ ಶಿಕ್ಷೆಯಾಗಬೇಕು ಎಂದು ಸ್ಥಳಿಯರು ಆರೋಪಿಸಿದ್ದು, ಕಲ್ಯಾಣಕುಮಾರನ ಮನೆಯ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾರೆ. ಅಲ್ಲದೇ ಸೋಮವಾರ ಬೆಳಿಗ್ಗೆ ಕಲ್ಯಾಣಕುಮಾರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸ್ಥಳಿಯರು ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಕೈಹಾಕಬಾರದು, ಇಲಾಖೆ ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳಲಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಸ್ಥಳಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್ ಮೊದಲಾದವರು ಭೇಟಿ ನೀಡಿದ್ದಾರೆ.
ಪೊಲೀಸರ ನಿಯೋಜನೆ: ಘಟನೆ ನಡೆದ ಮನೆ ಹಾಗೂ ಮ್ರತ ಬಾಲಕನ ಮನೆ ಸಮೀಪ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಬ್ರಹ್ಮಾವರ ವೃತ್ತನಿರೀಕ್ಷಕ ಅರುಣ ನಾಯಕ್, ಕೋಟ ಪಿಎಸ್ಸೈ ಕೆ.ಆರ್. ನಾಯ್ಕ್, ಬ್ರಹ್ಮಾವರ ಪಿಎಸ್ಸೈ ಗಿರೀಶ್ ಕುಮಾರ್, ಹಿರಿಯಡಕ ಪಿಎಸ್ಸೈ ರಫೀಕ್ ಹಾಗೂ ಸಿಬ್ಬಂದಿಗಳು ಬೀಡುಬಿಟ್ಟಿದ್ದು ತನಿಖೆ ನಡೆಯುತ್ತಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.