ಕನ್ನಡ ವಾರ್ತೆಗಳು

ಕೋಡಿ : ಎರಡು ಕೋಮಿನ ನಡುವೆ ಹೊಡೆದಾಟ: ಒಂದೇ ಕೋಮಿನ ಇಬ್ಬರು ಗಂಭೀರ; ದೂರು-ಪ್ರತಿದೂರು ದಾಖಲು: ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ

Pinterest LinkedIn Tumblr

ಕುಂದಾಪುರ: ಕೋಡಿಯಲ್ಲಿ ಭಾನುವಾರ ಸಂಜೆ ಒಂದು ಕೋಮಿನ ಯುವಕರಿಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಯುವಕರಿಬ್ಬರು ಗಂಭೀರ ಗಾಯಗೊಂಡು ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಾದ ಘಟನೆ ಕೋಡಿ ಹಳವಳ್ಳಿಯ ಕಿನಾರಾ ಹೋಟೆಲ್ ಸಮೀಪ ನಡೆದಿದೆ. ಗಂಭೀರ ಗಾಯಗೊಂಡ ಯುವಕರನ್ನು ಹಳವಳ್ಳಿಯ ಭರತ್ (17) ಹಾಗೂ ರಂಜಿತ್ (17) ಎಂದು ಗುರುತಿಸಲಾಗಿದೆ. ಇನ್ನೊಂದು ಕೋಮಿನ ಆಶಿದಾ ಅಹ್ಮದ್ ಹಾಗೂ ಅಬ್ದುಲ್ ಮುನಾಫ್ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Kodi_Communal_Issue (20) Kodi_Communal_Issue (19) Kodi_Communal_Issue Kodi_Communal_Issue (18) Kodi_Communal_Issue (15) Kodi_Communal_Issue (12) Kodi_Communal_Issue (13) Kodi_Communal_Issue (14) Kodi_Communal_Issue (17) Kodi_Communal_Issue (16) Kodi_Communal_Issue (9) Kodi_Communal_Issue (7) Kodi_Communal_Issue (8) Kodi_Communal_Issue (6) Kodi_Communal_Issue (10) Kodi_Communal_Issue (11)

ಘಟನೆಯ ವಿವರ: ಹಳವಳ್ಳಿಯ ಕಿನಾರಾ ಹೋಟೆಲ್ ಸಮೀಪ ಹಲ್ಲೆ ನಡೆದಿದ್ದು, ಆರೋಪಿಗಳಾದ ಮಯದಿ ಬಿನ್ ಇಬ್ರಾಹಿಂ ಹಳೆ‌ಅಳಿವೆ, ಫರೂಝ್ ಬಿನ್ ರಫೀಕ್, ಗಲ್ಫಿ ಬಿನ್ ಮಿರ್ಜಿ ಸಾಹೇಬ್, ಅಷ್ಪಕ್ ಗಂಟಿ, ಮಲ್ಲಿಕ್ ಕುಳ್ಳ, ಆಶಿಫ್ ಗದ್ದೆಮನೆ, ಶಾಜಿದ್, ಶಾಯಿದ್, ಲತೀಫ್ ಖಾನ್ ಮೊಹಮ್ಮದ್ ಸಾಹೇಬ್ ಮನೆ, ಇಂತಿಯಾನ್, ಇರ್ಷಾದ್, ರಹೀಂ ಬ್ಯಾರಿ ಬ್ರದರ್ ಸೇರಿದಂತೆ ಸುಮಾರು ಇಪ್ಪತ್ತೈದು ಯುವಕರ ತಂಡ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಯುವಕರು ಆರೋಪಿಸಿದ್ದಾರೆ.

ಇದೇ ಸಂದರ್ಭ ಆಸ್ಪತ್ರೆಗೆ ದಾಖಲಾದ ಆಶಿದಾ ಅಹ್ಮದ್ ಹಾಗೂ ಅಬ್ದುಲ್ ಮುನಾಫ್ ಅವರು ಸಂಬಂಧಿಕರ ಮನೆಗೆ ಸಾಲ ಪಡೆದ ಹಣವನ್ನು ಹಿಂತಿರುಗಿಸಿದಾಗ ಯುವಕರ ತಂಡವೊಂದು ಹಲ್ಲೆ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಮುಸ್ಲಿಂ ಯುವಕರ ಸಂಬಂಧಿಕರ ಹುಡುಗಿಯರನ್ನು ಚುಡಾಯಿಸಿದ್ದೇ ಹಲ್ಲೆ ಕಾರಣವೆಂದು ಅವರು ತಿಳಿಸಿದ್ದಾರೆ.

Kodi_Communal_Issue (3) Kodi_Communal_Issue (4) Kodi_Communal_Issue (1) Kodi_Communal_Issue (2) Kodi_Communal_Issue (5)

ಹಳೆ ದ್ವೇಷ: ಗಂಭೀರ ಹಲ್ಲೆ ಗೀಡಾದವರ ಜೊತೆಗೆ ಇದ್ದ ಹಳೆ ದ್ವೇಷವೇ ಈ ಹಲ್ಲೆಗೆ ಕಾರಣ ಎಂಬುದು ಹಲ್ಲೆಗೀಡಾದವರ ಆರೋಪ. ಇತ್ತೀಚೆಗೆ ಕೋಡಿಯ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ನಡೆದ ಗೆಂಡಸೇವೆಯ ಸಂದರ್ಭ ದೀಪಕ್ ಎಂಬುವರ ಬೈಕನ್ನು ಹಾನಿ ಮಾಡಿದ್ದ ವಿಚಾರಕ್ಕೆ ಗಲಾಟೆಯಾಗಿತ್ತು. ಅದರ ನಂತರ ಹಳೆ‌ಅಳಿವೆಯಲ್ಲಿ ಹಿಂದೂ ಯುವಕರು ಧ್ವಜವೊಂದನ್ನು ನೆಟ್ಟಿದ್ದ ಸಂದರ್ಭವೂ ಭಿನ್ನ ಕೋಮಿನ ನಡುವೆ ಗಲಾಟೆ ನಡೆದಿತ್ತು. ಇದೇ ನೆಪದಲ್ಲಿ ಭಾನಿವಾರ ಹಲ್ಲೆ ನಡೆದಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಧನಂಜಯ ಕುಂದಾಪುರ ಆರೋಪಿಸಿದ್ದಾರೆ.

ಮನೆಗೆ ಕಲ್ಲು: ಕೋಡಿಯ ಕೆ.ಎಚ್. ಹುಸ್ಮನ್ ಎನ್ನುವವರ ಮನೆಯೆ ಕಿಟಲಿ ಗಾಜು ಪುಡಿಗೈಯ್ಯಲಾಗಿದ ಎಂದು ಆರೋಪಿಸಿದ್ದಾರೆ.

ಅಲ್ದೇ ಜಲಜಾ ಎನ್ನುವವರ ಕರಿಮಣಿ ಸೆಳೆದೊಯ್ದು ಆಕೆಗೆ ಹಲ್ಲೆ ನಡೆಸಲಾಗಿದೆ ಎಂದು ಇನ್ನೊಂದು ಕೋಮಿನ ಮೇಲೆ ಆರೋಪಿಸಲಾಗಿದೆ.

ಕೋಡಿ ಉದ್ವಿಗ್ನ : ಗಲಾಟೆ ನಡೆದ ಬಳಿಕ ಕೋಡಿ ಪರಿಸರದಲ್ಲಿ ಉದ್ವಿಘ್ನ ಸ್ಥಿತಿ ಏರ್ಪಟ್ಟಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೋಡಿಯಲ್ಲಿ ಬೀಡು ಬಿಟ್ಟಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎರಡೂ ತಂಡಗಳಿಂದ ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡಸುತ್ತಿದ್ದಾರೆ.

ಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳೊಂದಿಗೆ ಖುದ್ದು ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದರು. ಈ ಸಂದರ್ಭ ಎ‌ಎಸ್ಪಿ ಸಂತೋಷ ಕುಮಾರ್ ಮೊದಲಾದವರಿದ್ದರು.

Write A Comment