ಕನ್ನಡ ವಾರ್ತೆಗಳು

ಸಿಗರೇಟು ಇತರೆ ತಂಬಾಕು ಸೇವನೆ ಜಿಲ್ಲೆಯಲ್ಲಿ 1251 ಜನರಿಂದ 1.56 ಲಕ್ಷ ರೂ ದಂಡ ವಸೂಲಿ

Pinterest LinkedIn Tumblr

Dc_Ibrahim_Pics

ಮಂಗಳೂರು, ಜ.9: ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳನ್ನು ಸಿಷಿದ್ಧ ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುತ್ತಿದ್ದ 1251 ಜನರಿಗೆ ರೂ.1,56,995 ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗಿದೆ.ತಂಬಾಕು ಮತ್ತು ಇತರೆ ತಂಬಾಕು ಪದಾರ್ಥಗಳ ಸೇವನೆ ನಿಯಂತ್ರಣ  ಕಾಯ್ದೆಯನ್ನು ಇನ್ನೂ ಹೆಚ್ಚಿಗೆ ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜಿಲ್ಲಾ ಪೋಲೀಸ್ ಅಧೀಕ್ಷಕರ ಕಾರ್ಯ ವ್ಯಾಪ್ತಿ ಪ್ರದೇಶಗಳಲ್ಲಿ 2012 ನೇ ಎಪ್ರಿಲ್‌ನಿಂದ 2014 ರ ನವೆಂಬರ್ ವರೆಗೆ ಕಾನೂನು ಉಲ್ಲಂಘನೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಿದ ಬಗ್ಗೆ 274  ಜನರಿಂದ ರೂ.40,600/- ಹಾಗೂ ನಗರ ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇಲ್ಕಂಡ ಅವಧಿಯಲ್ಲಿ 977 ಜನರಿಂದ 1, 16, 395  ರೂ.ಗಳ ದಂಡ ವಸೂಲು ಮಾಡಲಾಗಿದೆ ಎಂದರು. ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇವನೆ ಮಾಡಿದರೆ ಸ್ಥಳದಲ್ಲಿ ಅಥವಾ ನ್ಯಾಯಾಲಯಕ್ಕೆ ಕರೆದೊಯ್ಯುವ ಮೊದಲೇ ದಂಡ,ಕಾನೂನು ಉಲ್ಲಂಘಿಸಿ ದಂಡ ಪಾವತಿಸಲು ನಿರಾಕರಿಸಿದರೆ ಬಂಧಿಸಬಹುದು ಎಚಿದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣರಾವ್ ಮುಂತಾದವರು ಉಪಸ್ಥಿತರಿದ್ದರು.

Write A Comment