ಕನ್ನಡ ವಾರ್ತೆಗಳು

ಉಡುಪಿ: ಆಜ್ರಿಯಲ್ಲಿ ಹುಲಿಕಾಟ; ಐದಕ್ಕೂ ಹೆಚ್ಚು ಜಾನುವಾರುಗಳು ಬಲಿ

Pinterest LinkedIn Tumblr

tiger

ಉಡುಪಿ : ಆಜ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಿನಲ್ಲಿ ಐದು ಹಸುಗಳನ್ನು ಹೊತ್ತೊಯ್ದು ತಿಂದು ಹಾಕಿದೆ. ಅಲ್ಲದೇ ಮೂರು ನಾಯಿಗಳನ್ನು ಕೊಂದು ಹಾಕಿದ್ದು, ಗ್ರಾಮಸ್ಥರು ಆತಂಕಿತರಾಗುದ್ದಾರೆ.

ಸುಮಾರು ಒಂದು ವರ್ಷದಿಂದಲೂ ಹುಲಿಕಾಟ ಆಜ್ರಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಪರೀತ ಕಾಟ ನೀಡುತ್ತಿತ್ತು. ಆದರೆ ಒಂದು ತಿಂಗಳ ಹಿಂದೆ ಸುಮಾರು ಎರಡು ತಿಂಗಳುಗಳ ಕಾಲ ಹುಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಇದ್ದಕ್ಕಿದ್ದಂತೆ ಮತ್ತೆ ಜಾನುವಾರುಗಳನ್ನು ಕೊಲ್ಲಲಾರಂಭಿಸಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

ಇದೀಗ ಕಳೆದ ಒಂದು ತಿಂಗಳಿನಿಂದ ಹುಲಿ ಹಗಲಲ್ಲೂ ತಿರುಗಾಡುತ್ತಿದ್ದು ಮನೆ ಮಂದಿ ಹೊರಗಡೆ ಬರಲು ಹೆದರುತ್ತಿದ್ದಾರೆ. ಅಲ್ಲದೇ ಜಾನುವಾರಗುಗಳನ್ನೂ ಹೊರಗಡೆ ಬಿಡಲೂ ಆಗದೇ ಹಟ್ಟಿಯಲ್ಲಿ ಕಟ್ಟಿಹಾಕಲೂ ಆಗದೇ ದಿಕ್ಕು ಕಾಣದಂತಾಗಿದ್ದಾರೆ. ಸಂಬಂಧಪಟ್ಟವರು ಹುಲಿ ಹಿಡುವಲ್ಲಿ ಇನ್ನಾದರೂ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಒಂದು ವರ್ಷದಿಂದಲೂ ಹುಲಿ ಕಾಟ ಆಜ್ರಿ ಗ್ರಾಮಸ್ಥರ ನಿದ್ದೆಗೆಡಿಸಿದೆ, ಕಳೆದ ಒಂದು ತಿಂಗಳಿನಿಂದ ಹಟ್ಟಿಗೆ ನುಗ್ಗಿ ದನ ಕದ್ದೊಯ್ದ ಘಟನೆಯೂ ನಡೆಯುತ್ತಿದೆ. ಗ್ರಾಮಸ್ಥರು ಕಂಗಾಲಾಗಿದ್ದಾರೆ. – ಸತ್ಯನಾರಾಯಣ ಐತಾಳ್, ಆಜ್ರಿ

Write A Comment