ಕನ್ನಡ ವಾರ್ತೆಗಳು

ಜನವರಿ 12 ರಂದು ರಾಜ್ಯಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನ

Pinterest LinkedIn Tumblr

vivek_band_photo_1

ಬೆಂಗಳೂರು,ಜ.08 : ಸಾಮಾಜಿಕ ಸ್ವಯಂಸೇವೆಗಳಿಗೆ ಪ್ರೋತ್ಸಾಹ ನೀಡುವ ಸರ್ಕಾರೇತರ ಸಂಸ್ಥೆ ‘ಸಮರ್ಥ ಭಾರತ’; ಸ್ವಾಮಿ ವಿವೇಕಾನಂದರ 152 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಯುವ ಜನರಲ್ಲಿ “ಉತ್ತಮನಾಗು-ಉಪಕಾರಿಯಾಗು” ಎನ್ನುವ ಸಾಮಾಜಿಕ ಸಂದೇಶದೊಂದಿಗೆ “ವಿವೇಕ್ ಬ್ಯಾಂಡ್” ಅಭಿಯಾನವನ್ನು ರೂಪಿಸಿದೆ.

vivek_band_photo_2

12  ಜನವರಿ 2015 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸ್ಮರಣೆಗಾಗಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಆ ದಿನ ಆರಂಭವಾಗಲಿರುವ ಅಭಿಯಾನವು 26 ಜನವರಿ 2015  ರ ವರೆಗೆ 2 ವಾರ ನಡೆಯಲಿದೆ.

ಸಮರ್ಥ ಭಾರತವು ಈ ಅಭಿಯಾನದಿಂದ ಸುಮಾರು 20 ಕ್ಕೂ ಅಧಿಕ ಜನರನ್ನು ತಲುಪುವ ಮೂಲಕ ಯುವ ಜನತೆಗೆ ಅವರಲ್ಲಿರುವ ಅಧಮ್ಯ ಶಕ್ತಿ ಮತ್ತು ಅವಕಾಶಗಳ ಪರಿಚಯ, ಜೀವನವನ್ನು ರೂಪಾಂತರಗೊಳಿಸಿ ಶಕ್ತಿಯುತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನು ಮುಡಿಪಿಡುವ ಪ್ರಜ್ಞೆ ಮೂಡಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಸಮರ್ಥ ಭಾರತವು ಹೊಂದಿದೆ.

vivek_band_photo_3

ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್‌ಸೈಟ್, ಸಾಮಾಜಿಕ ಮಾದ್ಯಮಗಳು, ವಾಟ್ಸಪ್, ಮತ್ತು ಎಸ್‌ಎಮ್‌ಎಸ್ ಗಳನ್ನು ಬಳಸುವ ಮೂಲಕ “ವಿವೇಕ್ ಬ್ಯಾಂಡ್” ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ವಿವೇಕ್ ಬ್ಯಾಂಡ್ ಧರಿಸುವವರಿಗೆ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ. ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು, ಯುವ ಮಾದರಿಗಳು , ವಿಜ್ಞಾನಿಗಳು, ಕ್ರೀಡಾ ತಾರೆಗಳು, ಸಿನೆಮಾ ತಾರೆಗಳು ಇನ್ನೂ ಮುಂತಾದವರು ಈ ಅಭಿಯಾನಕ್ಕೆ ಪ್ರಚಾರ ನೀಡಲಿದ್ದಾರೆ.

ಸಮರ್ಥ ಭಾರತದ ಬಗ್ಗೆ: ಸಮರ್ಥ ಭಾರತವು ಸಾಮಾಜಿಕ, ಆರ್ಥಿಕ, ನಾಗರಿಕ, ಪ್ರಾಕೃತಿಕ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ದೇಶವು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕೆಲಸ ಮಾಡುವ ಒಂದು ಸ್ವಯಂಸೇವಾ ವೇದಿಕೆಯಾಗಿದೆ. ಸಮರ್ಥ ಭಾರತದ ಅಡಿಯಲ್ಲಿ ಅನೇಕ ಸಂಸ್ಥೆಗಳಿಂದ ಸಮಾಜದ ವಿವಿಧ ಕ್ಷೇತ್ರಗಳಾದ ಗುಣಮಟ್ಟದ ಶಿಕ್ಷಣ, ಆರೋಗ್ಯ, ವೃತ್ತಿಪರ ತರಬೇತಿ, ನಾಗರಿಕ ಸಮಸ್ಯೆಗಳು, ಪರಿಸರ ಸಂರಕ್ಷಣೆ, ಗ್ರಾಮಾಭಿವೃದ್ಧಿ, ಗೋ ಸಂರಕ್ಷಣೆ, ಸಾಂಸ್ಕೃತಿಕ ಮತ್ತು ಅಕ್ಷರತೆಯ ಅಭಿವೃದ್ಧಿ, ಸಾಮಾಜಿಕ ನಿರ್ಲಕ್ಷಕ್ಕೊಳಗಾಗಿರುವ ವರ್ಗಗಳಾದ ಬೀದಿ ಮಕ್ಕಳು, ಪೀಡಿತರು ಮತ್ತು ದೇವದಾಸಿಯರ ಸಾಮಾಜಿಕ ಉನ್ನತಿ ಇದೇ ಮುಂತಾದವುಗಳಲ್ಲಿ ಗಣನೀಯ ಪ್ರಮಾಣದ ಕೆಲಸವು ನಡೆಯುತ್ತಿದೆ.

vivek_band_photo_6 vivek_band_photo_4

ಇಸ್ರೋ ವಿಜ್ಞಾನಿಗಳು ಮತ್ತು ಮಂಗಳಯಾನ ಕಾರ್ಯಕ್ರಮದ ಮುಖ್ಯಸ್ಥರ ಡಾ| ಅಣ್ಣಾದೊರೈ, ನ್ಯಾ.ಮೂ. ಶಿವರಾಜ ಪಾಟೀಲ್,  ಧರ್ಮಸ್ಥಳ ದೇವಸ್ಥಾನ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ, ನಾರಾಯಣ ಹೃದಯಾಲಯ ಸಂಸ್ಥೆಯ ಮುಖ್ಯಸ್ಥ ಮತ್ತು ಹೃದಯ ತಜ್ಞರು ಪದ್ಮಭೂಷಣ ಡಾ| ದೇವಿ ಶೆಟ್ಟಿ, ಕನ್ನಡ ಸಿನೆಮಾ ನಟ ಶ್ರೀನಗರ ಕಿಟ್ಟಿ , ನಟ ಮತ್ತು ರಾಜಕಾರಣಿ ಬಿ.ಸಿ. ಪಾಟೀಲ್, ಭಾರತೀಯ ಮಹಿಳಾ ಕಬ್ಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ, ರಾಮಕೃಷ್ಣಾಶ್ರಮ ಪ್ರಕಾಶಾನಂದ ಸ್ವಾಮೀಜಿ, ಸ್ಪರ್ಷ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥ ಮತ್ತು ಮೂಳೆ ತಜ್ಞರು ಡಾ| ಶರಣ್ ಪಾಟೀಲ್ , ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ಕ್ರಿಕೆಟ್ ಆಟಗಾರ ಮಿಥುನ್ ಅಭಿಮನ್ಯು, ಸಂಗೀತ ನಿರ್ದೇಶಕ ಗುರುಕಿರಣ್ , ರಿಲಾಯನ್ಸ ಕಮ್ಮ್ಯುನಿಕೇಶನ್ ಅಧ್ಯಕ್ಷ ಡಾ| ಸಿ.ಎಸ್. ರಾವ್, ಏಶಿಯನ್ ಗೇಮ್ಸ ಸ್ವರ್ಣ ಪದಕ ವಿಜೇತ ಅರ್ಜುನ್ ದೇವಯ್ಯ, ಕನ್ನಡ ಅಭಿನೇತ್ರಿ ರೂಪಿಕಾ, ಮೊದಲಾದವರು ಈ ನಮ್ಮ ಅಭಿಯಾನದ ರಾಯಭಾರಿಗಳಾಗಿದ್ದಾರೆ.

vivek_band_photo_8 vivek_band_photo_7

10 ಜನವರಿ 2015 ರ ನಂತರ ರಾಜ್ಯದ ಅನೇಕ ಚಿಲ್ಲರೆ ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯವಿರುತ್ತದೆ. ಎಲ್ಲಾ ಮಾರಾಟ ಮಳಿಗೆಗಳ ಸಮಗ್ರ ವಿವರಗಳು www.samarthabharata.org ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ¹: 9880621824, 9663330692 (ಬೆಂಗಳೂರು) ,9448111824 (ಹುಬ್ಬಳ್ಳಿ), ), 9739953063 (ಮಂಗಳೂರು)
ಇಮೈಲ್ ವಿಳಾಸ: reachout.sb@gmail.com

Write A Comment