ಕನ್ನಡ ವಾರ್ತೆಗಳು

5 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ ಇನ್ನು ದೇಶದ ಎಲ್ಲೆಡೆ ಲಭ್ಯ

Pinterest LinkedIn Tumblr

lpg_gas_photo_1

ಬೆಂಗಳೂರು,ಜ.05 : ಸಬ್ಸಿಡಿಯುಕ್ತ 5 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳು ಇನ್ನು ಮುಂದೆ ದೇಶದ ಎಲ್ಲ ಎಲ್‌ಪಿಜಿ ವಿತರಣಾ ಕೇಂದ್ರಗಳಲ್ಲಿ ಲಭ್ಯವಾಗಲಿವೆ.ನಗರದ ಅತಿದೊಡ್ಡ ಕೊಳೆಗೇರಿಯಾದ ಸಾಲಿಯಾ ಸಾಹಿಯಲ್ಲಿ ತೈಲ ಸಚಿವ ಧರ್ಮೇಂದ್ರ ಪ್ರಧಾನ್‌ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಗ್ರಾಹಕರಿಗೆ ಸುಲಭವಾಗಿ ಅಡುಗೆ ಅನಿಲ ದೊರಕುವಂತೆ ಮಾಡುವುದೇ ಯೋಜನೆಯ ಉದ್ದೇಶ. ಇದುವರೆಗೆ 14.2 ಕೆ.ಜಿ ತೂಕದ ಗೃಹಬಳಕೆ ಸಿಲಿಂಡರ್‌ಗಳು ಗ್ಯಾಸ್‌ ಏಜೆನ್ಸಿಗಳಲ್ಲಿ ಮಾತ್ರ ಲಭ್ಯವಿದ್ದವು ಎಂದು ಮೂಲಗಳು ಹೇಳಿವೆ.

ಕೊಳೆಗೇರಿಗಳ ಮತದಾರರನ್ನು ಓಲೈಸುವ ಪ್ರಯತ್ನವಾಗಿ ಬಿಜೆಪಿ ಈ ಯೋಜನೆ ಆರಂಭಿಸುತ್ತಿದೆ ಎಂದು ಹೇಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿ 215 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೊಳೆಗೇರಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. ಈ ಪ್ರದೇಶದ ಮತದಾರರು ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ಹೊಂದಿದ್ದಾರೆ. ಪ್ರಸ್ತುತ ಈ ಪ್ರದೇಶ ಆಡಳಿತಾರೂಢ ಬಿಜೆಡಿಯ ಅಧೀನದಲ್ಲಿದೆ.

Write A Comment