ಕನ್ನಡ ವಾರ್ತೆಗಳು

ಖಾಸಗಿ ಬಸ್ಸು, ಕಾರು ಹಾಗೂ ಸೈಕಲ್ ಸರಣಿ ಅಪಘಾತ: ಸೈಕಲ್ ಸವಾರ ಗಂಭೀರ; ಕಾರು ಜಖಂ

Pinterest LinkedIn Tumblr

ಕುಂದಾಪುರ: ಬೆಳ್ತಂಗಡಿಯಿಂದ ಕುಂದಾಪುರದತ್ತ ಸಾಗುತಿದ್ದ ಖಾಸಗಿ ಬಸ್ಸೊಂದು ಕುಂದಾಪುರದೆಡೆಗೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ದಾಟಲು ನಿಂತಿದ್ದ ಸೈಕಲ್‌ಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದ್ದು ಈ ಅಪಘಾತದಲ್ಲಿ ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೈಕಲ್ ಸವಾರ ತೆಕ್ಕಟ್ಟೆ ಸಮೀಪದ ಕನ್ನುಕೆರೆ ನಿವಾಸಿ ಅಶೋಕ್ (42) ಎನ್ನುವವರೇ ಗಂಭೀರವಾಗಿ ಗಾಯಗೊಂಡಿದ್ದು ಅವರು ಬೀಜಾಡಿಯ ಮಾರ್ಬಲ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು.

Kumbashi_bus-car_Accident_ (11) Kumbashi_bus-car_Accident_ (13) Kumbashi_bus-car_Accident_ (6) Kumbashi_bus-car_Accident_ (8) Kumbashi_bus-car_Accident_ (7) Kumbashi_bus-car_Accident_ (10) Kumbashi_bus-car_Accident_ (12) Kumbashi_bus-car_Accident_ (5) Kumbashi_bus-car_Accident_ (9) Kumbashi_bus-car_Accident_ (3) Kumbashi_bus-car_Accident_ (4) Kumbashi_bus-car_Accident_ (2) Kumbashi_bus-car_Accident_ Kumbashi_bus-car_Accident_ (1)

ಘಟನೆ ವಿವರ: ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕುಂದಾಪುರದೆಡೆಗೆ ಸಾಗುತ್ತಿದ್ದ ಎರಡು ವೇಗದೂತ ಖಾಸಗಿ ಬಸ್ಸುಗಳು ಓವರ್‌ಟೇಕ್ ಬರದಲ್ಲಿದ್ದು ಈ ವೇಳೆ ಕುಂಭಾಸಿ ಡಿವೈಡರ್ ಸಮೀಪ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್ಸು ಕುಂದಾಪುರ ಪುರಸಭೆ ಎಸ್.ಡಿ.ಎ. ಆಗಿರುವ ಸತ್ಯ ಎನ್ನುವವರು ಚಲಾಯಿಸುತ್ತಿದ್ದ ಐಯಾನ್ ಕಾರಿಗೆ ಡಿಕ್ಕಿಯಾಗಿದೆ. ಆ ಬಳಿಕ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್ ಮೇಲಕ್ಕೆ ಹತ್ತಿ ಡಿವೈಡರ್ ಸಮೀಪ ರಸ್ತೆ ದಾಟಲು ಕಾಯುತ್ತಿದ್ದ ಸೈಕಲ್ ಸವಾರನಿಗೆ ಡಿಕ್ಕಿಯಾಗಿದೆ. ಬಸ್ಸು ಡಿಕ್ಕಿಯಿಂದ ಸೈಕಲ್ ಸವಾರ ಅಶೋಕ್ ತಲೆಗೆ ತೀವೃ ಸ್ವರೂಪದ ಗಾಯಗಳಾಗಿದೆ.

ಬಸ್ಸು ಸೈಕಲ್‌ಗೆ ಡಿಕ್ಕಿಯಾಗುವ ಮೊದಲು ಕಾರಿಗೆ ಡಿಕ್ಕಿ ಹೊಡೆದ್ದಿದ್ದು ಉಡುಪಿ ಜಿಲ್ಲಾಧಿಕಾರಿಯವರ ಕಛೇರಿಯಿಂದ ಕುಂದಾಪುರಕ್ಕೆ ವಾಪಾಸಾಗುತ್ತಿದ್ದ ಕುಂದಾಪುರ ಪುರಸಭೆಯ ಇಂಜಿನಿಯರ್ ರಾಜಶೇಖರ್ ಹಾಗೂ ಪುರಸಭೆ ಎಸ್.ಡಿ.ಎ. ಸತ್ಯ ಅವರು ಈ ಕಾರಿನಲ್ಲಿದ್ದರು. ಸತ್ಯ ಅವರು ಕಾರು ಚಲಾಯಿಸುತ್ತಿದ್ದು ಅದೃಷ್ಟವಶಾತ್ ಇಬ್ಬರು ಪಾರಾಗಿದ್ದು, ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಅಜಾಗರುಕತೆಯ ಚಾಲನೆ ಮಾಡಿದ ಖಾಸಗಿ ಬಸ್ಸು ಚಾಲಕನನ್ನು ರವಿ ಎಂದು ಗುರುತಿಸಲಾಗಿದೆ.

ಡಿವೈಡರ್ ಸಮಸ್ಯೆ: ಕುಂಭಾಶಿ ಭಾಗದಲ್ಲಿ ಒಂದು ಭಾಗದ ರಸ್ತೆ ಸಂಪೂರ್ಣವಾಗಿದ್ದು ಇನ್ನೊಂದು ಹಾಗದ ರಸ್ತೆ ಅರ್ಧಕ್ಕೆ ನಿಂತಿದೆ. ಆದ್ದರಿಂದ ಡಿವೈಡರ್ ಸಮಸ್ಯೆ ಇಲ್ಲಿ ಬಹುತೇಕ ವಾಹನ ಸವಾರರನ್ನು ಗೊಂದಲಕ್ಕೆ ಒಳಪಡಿಸುತ್ತಿದ್ದು ಅಪಘಾತಕ್ಕೆ ಡಿವೈಡರ್ ಸಮಸ್ಯೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸರು ಹಾಗೂ ಸಂಬಂದಪಟ್ಟ ಗುತ್ತಿಗೆ ಕಂಪೆನಿ ಕ್ರಮಕೈಗೊಂಡು ಶೀಘ್ರ ಒನ್‌ವೇ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಕುಂದಾಪುರ ಸಂಚಾರಿ ಪೊಲಿಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Write A Comment