ಪುತ್ತೂರು,ಡಿ.31 : ಪುತ್ತೂರು ನಗರದ ಪ್ರಮುಖ ಕೇಂದ್ರ ಪ್ರದೇಶವಾದ ಸಿಂಡಿಕೇಟ್ ಬ್ಯಾಂಕ್ ಬಳಿಯ ರೂಬಿ ಟವರ್ಸ್ನಿಂದ ಬಿದ್ದು ಕಾರ್ಮಿಕನೊಬ್ಬ ಮೃತ ಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಕಾಸರಗೋಡು ಮೂಲದ ಸಲೀಂ(41) ಎಂಬ ಕಾರ್ಮಿಕ ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
ಸಲೀಂ ರೂಬಿ ಟವರ್ಸ್ನಲ್ಲಿ ಮೇಸ್ತ್ರಿ ಕಾಮಗಾರಿ ಮಾಡುತ್ತಿದ್ದನಲ್ಲದೇ ಅದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದನು ಎನ್ನಲಾಗಿದೆ. ಬೆಳಿಗ್ಗೆ ಮೇಸ್ತ್ರಿ ಕೆಲಸಕ್ಕೆಂದು ಕಟ್ಟಡದ 4ನೇ ಮಹಡಿಯಲ್ಲಿ ಮರದ ಹಲಗೆಯನ್ನು ಕಟ್ಟುತ್ತಿದ್ದ ವೇಳೆ ಲಿಂಟಲ್ ಬೀಮ್ ತುಂಡಾಗಿ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿ ಇರಿಸಲಾಗಿದೆ. ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.