ಮಂಗಳೂರು,ಡಿ.31 :ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್‌ನ `ಸಾಂತ್ವನ’ ವತಿಯಿಂದ ಮೂರನೆ ವರ್ಷದ 5 ಜೊತೆ ಉಚಿತ ಸರಳ ವಿವಾಹ ಕಾರ್ಯಕ್ರಮವು ಬುಧವಾರ ಕೋಟೆಕಾರ್‌ನ ನೂರ್‌ಮಹಲ್‌ನಲ್ಲಿ ನಡೆಯಿತು.
ಅಲ್‌ಹಿದಾಯ ಜುಮ್ಮಾ ಮಸೀದಿಯ ಖತೀಬ್ ಅಸೈಯ್ಯದ್ ಸಿ.ಟಿ.ಎಂ. ಸಲೀಮ್ ತಂಙಳ್ ಮಾಡಿದರು.ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ ನಿಖಾಹ್‌ನ ನೇತೃತ್ವ ವಹಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಲ್‌ಹಾಜ್ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ `ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದು ಸರಿಯಲ್ಲ. ಸಾಮೂಹಿಕ ವಿವಾಹದ ಮೂಲಕ ದುಂದುವೆಚ್ಚ ತಡೆಯಬಹುದು. ಹಾಗಾಗಿ ಎಲ್ಲರೂ ಇಂತಹ ಮದುವೆಗಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ಪ್ರತಿಯೊಂದು ಮುಸ್ಲಿಂ ಜಮಾಅತ್ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎಸೆಸ್ಸೆಫ್ ನಾಯಕ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್‌ವೈಎಸ್ ತಲಪಾಡಿ ಸೆಂಟರ್ ಅಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ತಲಪಾಡಿ ಘಟಕದ ಡಾ. ಅಬ್ದುಲ್ ಖಾದರ್, ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ, ತಾಜ್‌ಸ್ಟೀಲ್‌ನ ಮೊದಿನ್ ಬಾವಾ,ಇಬ್ರಾಹೀಂ, ನಝೀರ್ ಕೆಸಿಆರ್, ಮೋನುಹಾಜಿ ಮಾಡೂರು, ಬಾವಾ ಹಾಜಿ ಪಿಲಿಕೂರು, ಸತ್ತಾರ್ ಹಾಜಿ ಕೆ. ಮತ್ತಿತರರು ಉಪಸ್ಥಿತರಿದ್ದರು. ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಉಮರ್ ಕಾರ್ಯಕ್ರಮ ನಿರೂಪಿಸಿದರು.














