ಕನ್ನಡ ವಾರ್ತೆಗಳು

ತೀಯಾ ಸಮಾಜ ಮಹಿಳಾ ವಿಭಾಗದ ದಶಮಾನೋತ್ಸವ, ರೋಹಿದಾಸ ಬಂಗೇರ ರಿಗೆ   ’ತೀಯಾ ಕುಲ ರತ್ನ’ ಪ್ರಶಸ್ತಿ ಪ್ರಧಾನ

Pinterest LinkedIn Tumblr

Thiya_Samaj_Mahila_1

ವರದಿ : ಈಶ್ವರ ಎಂ. ಐಲ್

 ಮುಂಬಯಿ: ತೀಯಾ ಕುಲ ತಿಲಕ ಬಿರುದಾಂಕಿತ ತೀಯಾ ಸಮಾಜದ ಖ್ಯಾತ ಉಧ್ಯಮಿ, ದಾನಿ, ತೀಯಾ ಸಮುದಾಯದ 18 ಭಗವತೀ ಕ್ಷೇತ್ರಗಳಲ್ಲಿ ಹೆಚ್ಚಿನವುಗಳನ್ನು ಜೀರ್ಣೋದ್ದಾರ ಗೊಳಿಸಲು ಕಾರಣಕರ್ತರಾದ, ರೋಹಿದಾಸ ಬಂಗೇರ ಅವರ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ತೀಯಾ ಸಮಾಜ ಮುಂಬಯಿ ವತಿಯಿಂದ ಅವರಿಗೆ ’ತೀಯಾ ಕುಲರತ್ನ’  ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಿ. 28ರಂದು ನಗರದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಸಮಾಜದ ಪಶ್ಚಿಮ ವಲಯದ ಮಹಿಳಾ ವಿಭಾಗದ ದಶಮಾನೋತ್ಸವವು ಚಂದ್ರಶೇಖರ ಆರ್. ಬೆಳ್ಚಡ  ಅವರ ಅಧ್ಯಕ್ಷತೆಯಲ್ಲಿ ಜರಗಿದ್ದು ಈ ಸಮಾರಂಭದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳ ತುಳು-ಕನ್ನಡ ಜಾತೀಯ ಸಂಘಟನೆಗಳ ಮಹಿಳಾ ವಿಭಾಗದ ಪ್ರಮುಖರು ಉಪಸ್ಥಿತರಿದ್ದರು.

Thiya_Samaj_Mahila_2 Thiya_Samaj_Mahila_3 Thiya_Samaj_Mahila_4 Thiya_Samaj_Mahila_5 Thiya_Samaj_Mahila_6 Thiya_Samaj_Mahila_7 Thiya_Samaj_Mahila_8 Thiya_Samaj_Mahila_9 Thiya_Samaj_Mahila_10 Thiya_Samaj_Mahila_11

 ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ  ಶ್ರೀಮತಿ ಲತಾ ಜೆ ಶೆಟ್ಟಿ (ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ ಶುಭಾ ಡಿ. ಗುಜರನ್ (ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಡಾ.  ಶ್ರೀಮತಿ ಸತ್ಯ ಎಸ್. ಶೆಟ್ಟಿ (ಮೂಳೂಂಡ್ ಬಂಟ್ಸ್ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ ಉಷಾ ಹೆಗ್ಡೆ (ಸ್ತ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ ಇದರ ಅಧ್ಯಕ್ಷೆ) ಮತ್ತು  ಡಾ. ಸಂದ್ಯಾ ವಾಸನ್  ಹಾಗೂ ಗೌರವ ಅಥಿತಿಗಳಾಗಿ  ಶ್ರೀಮತಿ ಶಕುಂತಳಾ ಕೋಟ್ಯಾನ್(ಬಿಲ್ಲವರ ಅಶೋಷಿಯೇಶನ್ ಮುಂಬಯಿ ಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ  ಉಷಾ ಜಿ. ಮುನ್ನಾರ್ (ಕರ್ನಾಟಕ ವಿಶ್ವಕರ್ಮ ಅಶೋಷಿಯೇಶನ್  ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ ಮಧುಮತಿ ಶೆಟ್ಟಿಗಾರ್ (ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿಯ ಮಹಿಳಾ ವಿಭಾಗದ ಉಪ  ಕಾರ್ಯಧ್ಯಕ್ಷೆ),  ಶ್ರೀಮತಿ ಭಾರತಿ ಎಸ್. ನೆಟ್ಟೆಕರ್ (ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ ಅನಿತಾ ಜಿ. ಸುವರ್ಣ (ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ ಲಲಿತಾ ಭಂಡಾರಿ (ಭಂಡಾರಿ ಸೇವಾ ಸಮಿತಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ),  ಶ್ರೀಮತಿ ಸುಮತಿ ಎಸ್. ಬಂಜನ್  (ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ) ಇವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್ ಸ್ವಾಗತಿಸಿದರು.  ನಂತರ ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ವಿವಿಧ ಸಮಾಜದ ಎಲ್ಲಾ ಅತಿಥಿಗಳು ವಿವಿಧತೆಯಿಂದ ಏಕತೆಯನ್ನು ತೋರಿಸಿದ ತೀಯಾ ಸಮಾಜ ಮತ್ತು ಅದರ ಮಹಿಳಾ ವಿಭಾಗದ ಸ್ಥಳೀಯ ಸಮಿತಿಗೆ ಅಬಿನಂದನೆ ಸಲ್ಲಿಸಿದರು. ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹಿಳೆಯ ಮಹತ್ವವನ್ನು ತಿಳಿಸಿದರು.

Thiya_Samaj_Mahila_12 Thiya_Samaj_Mahila_13 Thiya_Samaj_Mahila_14 Thiya_Samaj_Mahila_15 Thiya_Samaj_Mahila_21 Thiya_Samaj_Mahila_17 Thiya_Samaj_Mahila_22 Thiya_Samaj_Mahila_23 Thiya_Samaj_Mahila_24 Thiya_Samaj_Mahila_25

ಅಧ್ಯಕ್ಷತೆಯನ್ನು ವಹಿಸಿದ ಚಂದ್ರಶೇಖರ ಆರ್. ಬೆಳ್ಚಡ  ಅವರು ಮಾತನಾಡುತ್ತಾ ಇಂದು ನಮ್ಮ ನಾಡಿನ ಎಲ್ಲಾ ಸಮುದಾಯದ ಮಹಿಳೆಯರ ಉಪಸ್ಥಿತಿಯಿಂದ ಏಕತೆ ಹಾಗೂ ಸಮಾನತೆಯನ್ನು ಕಾಣುವಂತಾಗಿದೆ ಎಂದರು.

ವೇದಿಕೆಯಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಐಲ್ ಬಾಬು, ಕೋಶಾಧಿಕಾರಿ ರಮೇಸ್ ಉಳ್ಲಾಲ್, ಮಹಿಳಾ ವಿಭಾಗದ ಕಾರ್ಯದರ್ಶಿ ಚಂದ್ರ ಸುವರ್ಣ, ರಂಜಿನಿ ಸುವರ್ಣ, ಸುಜಾತಾ ಎಸ್. ಉಚ್ಚಿಲ್,  ಉಪಸಮಿತಿಗಳ ಪ್ರಮುಖರಾದ ಗಂಗಾಧರ ಕಲ್ಲಾಡಿ, ಪದ್ಮಿನಿ ಕೋಟೆಕಾರ್, ಶ್ರೀಧರ ಸುವರ್ಣ ತಿಮ್ಮಪ್ಪ ಬಂಗೇರ, ಹರ್ಷ ಚಂದ್ರಶೇಖರ್, ಸಾಫಲ್ಯ ಸೇವಾ ಸಂಘದ ಶ್ರೀಮತಿ ಅನಸೂಯ ಉಪಸ್ಥಿತರಿದ್ದು ಅವರನ್ನು ಗೌರವಿಸಲಾಯಿತು.

Thiya_Samaj_Mahila_26 Thiya_Samaj_Mahila_27 Thiya_Samaj_Mahila_28 Thiya_Samaj_Mahila_29 Thiya_Samaj_Mahila_30 Thiya_Samaj_Mahila_31 Thiya_Samaj_Mahila_32 Thiya_Samaj_Mahila_33 Thiya_Samaj_Mahila_34 Thiya_Samaj_Mahila_35

 ಹತ್ತು ವರ್ಷಗಳ ಕಾಲ ತೀಯಾ ಸಮಾಜದ ಅಧ್ಯಕ್ಷರಾಗಿ ಮಹಿಳಾ ವಿಭಾಗವೂ ಸೇರಿ ವಿವಿಧ ಉಪಸಮಿತಿಗಳ ಹಾಗೂ ಸಮಾಜದ ಮುಖವಾಣಿ ಸ್ಥಾಪನೆಗೆ ಕಾರಣರಾದ ಕೆ. ಪಿ. ಅರವಿಂದ್  ದಂಪತಿಯನ್ನು, ಸಮಾಜದ ಪಶ್ಚಿಮ ವಲಯದ ಪ್ರಥಮ ಕಾರ್ಯಧ್ಯಕ್ಷರಾದ ಮಹಿಳಾ ವಿಭಾಗ ಸ್ಥಾಪನೆಗೆ  ಕಾರಣಕರ್ತರಾದ ಐಲ್ ಬಾಬು ದಂಪತಿಯನ್ನು, ನಾಲ್ಕು ವರ್ಷಗಳ ಕಾಲ ತೀಯಾ ಸಮಾಜದ ಪಶ್ಚಿಮ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದ ಚಂದ್ರ ಎಂ. ಸುವರ್ಣ, ತೀಯಾ ಸಮಾಜದ ಪೂರ್ವ ವಲಯದ ಮಹಿಳಾ ವಿಭಾಗದ ಸ್ಥಾಪಕ ಕಾರ್ಯಾಧ್ಯರಾಗಿದ್ದ ವೃಂದಾ ದಿನೇಶ್ ಇವರನ್ನು ಸನ್ಮಾನಿಸಲಾಯಿತು. 

ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ  ಮತ್ತು ದಿವಿಜ ಚಂದ್ರಶೇಖರ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಿವ್ಯಾ ಆರ್ ಕೋಟ್ಯಾನ್ ಮತ್ತು ರಾಮಚಂದ್ರ ಕೋಟ್ಯಾನ್ ಅವರನ್ನು ಅಥಿತಿಗಳ ಉಪಸ್ಥಿತಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Thiya_Samaj_Mahila_36 Thiya_Samaj_Mahila_35 Thiya_Samaj_Mahila_36 Thiya_Samaj_Mahila_37 Thiya_Samaj_Mahila_38 Thiya_Samaj_Mahila_39 Thiya_Samaj_Mahila_40 Thiya_Samaj_Mahila_41 Thiya_Samaj_Mahila_42 Thiya_Samaj_Mahila_43 Thiya_Samaj_Mahila_44 Thiya_Samaj_Mahila_45 Thiya_Samaj_Mahila_46

 ದಿವಿಜಾ ಚಂದ್ರಶೇಖರ್ ಮತ್ತು ಶ್ರೀಧರ ಸುವರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದು, ತೀಯಾ ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ಈಶ್ವರ ಎಂ. ಐಲ್ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

 ಮನೋರಂಜನೆಯ ಅಂಗವಾಗಿ ಸಮಾಜದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಕಲಾ ಸೌರಭದ ಪದ್ಮನಾಭ ಸಸಿಹಿತ್ಲು ಅವರಿಂದ ಸಾಂಸ್ಕೃತಿಕ ವೈಭವ ನಡೆಯಿತು. ಕಾರ್ಯದರ್ಶಿ ಚಂದ್ರಾ ಎಂ. ಸುವರ್ಣ ವಂದನಾರ್ಪಣೆಗೈದರು.

Write A Comment