ಕನ್ನಡ ವಾರ್ತೆಗಳು

ಕೋಟ: ಗೋಮಾಂಸ, ಶ್ರೀಗಂಧ ಸಾಗಾಟ ಪತ್ತೆ | ಒಬ್ಬನ ಬಂಧನ; ಪರಾರಿಯಾದ ಇಬ್ಬರು ಆರೋಪಿಗಳು

Pinterest LinkedIn Tumblr

ಕುಂದಾಪುರ: ಇಲ್ಲಿನ ಕೋಟ ಹೀರೆಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಓಮ್ನಿಯಲ್ಲಿ ಗೋಮಾಂಸ ಸಾಗಟ ಮಾಡುತ್ತಿರುವಾಗ ದಾಳಿ ಮಾಡಿದ ಪೊಲೀಸರು ಮಾರುತಿ ಓಮ್ನಿ ಸಹಿತ ಗೋಮಾಂಸ ಹಾಗೂ ವಾಹನದಲ್ಲಿದ್ದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ತಗೆದುಕೊಂಡಿದ್ದಾರೆ. ಓಮ್ನಿಯಲ್ಲಿದ್ದ ಆರೋಪಿಗಳು ಫಲಾಯನಗೈದಿದ್ದು, ಗೋಮಾಂಸವನ್ನು ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Kota_Illegal_ cows meet (9) Kota_Illegal_ cows meet (8) Kota_Illegal_ cows meet (7) Kota_Illegal_ cows meet (4) Kota_Illegal_ cows meet (1) Kota_Illegal_ cows meet (5) Kota_Illegal_ cows meet (6) Kota_Illegal_ cows meet (3) Kota_Illegal_ cows meet (2) Kota_Illegal_ cows meet

ಡಿ.25 ರಂದು ಬೆಳಿಗ್ಗೆ 9 ಗಂಟೆಗೆ ಕಂಡ್ಲೂರಿನಿಂದ ಉಡುಪಿ ಕಡೆ ಓಮ್ನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಕೋಟದ ಎನ್.ಹೆಚ್.೬೬ರ ರಲ್ಲಿರುವ ಹೀರೆಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಹಿಂದೂ ಸಂಘಟನೆಯ ಕಾರ್ಯಕರ್ತನೋರ್ವ ಬರುತ್ತಿರುವಾಗ ಓಮ್ನಿಯಲ್ಲಿ ಏನೋ ವ್ಯಾಪಾರ ನಡೆಯುತ್ತಿರುವುದು ಕಂಡು ಹತ್ತಿರ ಬಂದಿದ್ದಾನೆ. ಆಗ ಅಲ್ಲಿ ಸ್ಕೂಟಿ ವಾಹನದಲ್ಲಿ ಬಂದಿದ್ದ ಅಬ್ದುಲ್ ಎಂಬಾತ ಮಾಂಸ ಖರೀಧಿಗೆ ಮುಂದಾಗುತ್ತಿದ್ದ ಎನ್ನಲಾಗಿದೆ. ತಕ್ಷಣ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೂಡಲೇ ಸ್ಥಳಕ್ಕಾಗಮಿಸಿದ್ದ ಪೊಲೀಸರು, ಅಷ್ಟರಲ್ಲೇ ಓಮ್ನಿಯಲ್ಲಿದ್ದ ಇದ್ದ ಇಬ್ಬರು ಆರೋಪಿಗಳು ಫಲಾಯನಗೈದಿದ್ದರು. ಓಮ್ನಿಯನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ೫೦ ಕೆಜಿಗೂ ಹೆಚ್ಚು ದನದ ಮಾಂಸ ಪತ್ತೆಯಾಗಿದೆ. ಮಾಂಸವನ್ನು ಪರಿಶೀಲಿಸುವ ಸಂದರ್ಭ ಮಾಂಸದ ಅಡಿ ಭಾಗದಲ್ಲಿ ೫ ಕೆಜಿಗೂ ಹೆಚ್ಚು ಶ್ರೀಗಂಧದ ಕೊರಡುಗಳು ಪತ್ತೆಯಾಗಿದೆ.

ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಓಮ್ನಿ, ದನದ ಮಾಂಸ, ಶ್ರೀಗಂಧ, ಹಾಗೂ ಸ್ಕೂಟಿ ಸಹಿತ ಮಾಂಸ ಖರೀಧಿಗೆ ಬಂದಿದ್ದ ಅಬ್ದುಲ್ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಪರಾರಿಯಾದ ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ಎರಡು ತಿಂಗಳಿನಲ್ಲಿಯೇ ಕೋಟ ಭಾಗದಲ್ಲಿ ಅಕ್ರಮ ದನದ ಮಾಂಸ ಸಾಗಾಟದ ಪ್ರಕರಣ ಇದು ನಾಲ್ಕನೆಂಯದಾಗಿದ್ದು ಪೊಲೀಸರು ಈ ಬಗ್ಗೆ ಸೂಕ್ತ ಗಮನಹರಿಸಬೇಕೆಂದು ಹಿಂದೂಪರ ಸಂಘಟನೆಯವರು ಆಗ್ರಹಿಸಿದ್ದಾರೆ.

Write A Comment