ಕನ್ನಡ ವಾರ್ತೆಗಳು

ಬಿಬಿಎಂಪಿಗೆ ದೂರು ಕೊಡಲು ನೂತನ ಫೇಸ್‌ಬುಕ್‌, ಟ್ವಿಟರ್‌ ಖಾತೆ ಅನಾವರಣ.

Pinterest LinkedIn Tumblr

fckebook_tweet

ಬೆಂಗಳೂರು, ಡಿ. 23 : ಬಿಬಿಎಂಪಿ ಕಾಮಗಾರಿಗಳ ಬಿಲ್‌ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ರೂಪಿಸ­ಲಾಗಿದ್ದು, ಬುಧವಾರ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಪಾಲಿಕೆಯು ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿಗೂ ಕಾಲಿಟ್ಟಿದ್ದು, ಅಧಿಕೃತ ಖಾತೆಗಳಿಗೆ ಮಂಗಳವಾರ ಚಾಲನೆ ನೀಡಲಾಗಿದೆ. ಬಿಬಿಎಂಪಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಎನ್.ಶಾಂತಕುಮಾರಿ ಮತ್ತು ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌, ಬಿಲ್‌ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ರೂಪಿಸಿರುವ ಕುರಿತು ಮಾಹಿತಿ ನೀಡಿದರು. ಇನ್ನುಮುಂದೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಆಡಳಿತ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದರು.

ಆಡಳಿತದಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ. 357 ಬಗೆಯ ಬಿಲ್‌ ಪಾವತಿಗಳನ್ನು ಈ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುವುದು. ನೌಕರರಿಗೂ ಆನ್‌ಲೈನ್‌ ಮೂಲಕವೇ ವೇತನ ಪಾವತಿಸ­ಲಾಗುವುದು. ಈ ವ್ಯವಸ್ಥೆ ಅಳವಡಿಸಲು ಕಂದಾಯ ವಿಭಾಗದ ಸಿಬ್ಬಂದಿಗೆ ನಾಲ್ಕು ದಿನಗಳ ತರಬೇತಿ ನೀಡಲಾಗುವುದು ಎಂದು ಮೇಯರ್ ತಿಳಿಸಿದರು. ಸಹಾಯಕ ಎಂಜಿನಿಯರ್‌­ಗಳು ಕಾಮಗಾರಿ ಆರಂಭವಾಗುವ ಮೊದಲು, ಸ್ಥಳದ ಚಿತ್ರ ತೆಗೆದು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಬಳಿಕ ಕೆಲಸದ ಅವಧಿಯ ಛಾಯಾಚಿತ್ರ ಹಾಕ­ಬೇಕು. ಆ ನಂತರ ಕಾಮಗಾರಿ ಮುಗಿದ ಚಿತ್ರ ಹಾಗೂ ಇತರ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಬೇಕು. ನಂತರ ಬಿಲ್ ಪಾವತಿ ಮಾಡಲಾಗುತ್ತದೆ ಎಂದರು.

ಟ್ವಿಟರ್, ಫೇಸ್ ಬುಕ್ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿಗೂ ಸೋಮವಾರ ಚಾಲನೆ ನೀಡಲಾಗಿದೆ. ಪಾಲಿಕೆಯ ಎಲ್ಲಾ ವಿಭಾಗಗಳಿಗೆ ಸಂಬಂಧ­ಪಟ್ಟ ದೂರುಗಳು, ಅಭಿಪ್ರಾಯಗಳು, ಸಲಹೆಗ­ಳನ್ನು ಸಾರ್ವಜನಿಕರರು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ದಾಖಲಿಸಬಹುದು ಎಂದು ಮೇಯರ್ ಎನ್‌.ಶಾಂತಕುಮಾರಿ ತಿಳಿಸಿದರು.
ಟ್ವಿಟರ್‌ ವಿಳಾಸ : @mayor_bangalore
ಫೇಸ್‌ಬುಕ್‌ ವಿಳಾಸ : Worshipful Mayor-BBMP
ಬಿಬಿಎಂಪಿ ವೆಬ್ ಸೈಟ್ : http://bbmp.gov.in/

Write A Comment