ಕನ್ನಡ ವಾರ್ತೆಗಳು

ಬೆಳ್ಕಲ್ ತೀರ್ಥಸ್ನಾನದಲ್ಲಿ ಪಾಲ್ಘೊಂಡ ಕೇಮಾರು ಶ್ರೀ; ಕ್ಲೀನ್ ಕೊಡಚಾದ್ರಿ, ಫ್ಲಾಸ್ಟಿಕ್ ಮುಕ್ತ ಗೋವಿಂದ ತೀರ್ಥಕ್ಕೆ ಪಣ ತೊಟ್ಟ ಶ್ರೀಗಳು

Pinterest LinkedIn Tumblr

ಕುಂದಾಪುರ: ಕೊಡಚಾದ್ರಿಯ ೬೪ ಪವಿತ್ರ ತೀರ್ಥಗಳಲ್ಲಿ ಒಂದಾಗಿರುವ ಬೆಳ್ಕಲ್ ತೀರ್ಥಕ್ಕೆ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಅವರ ಅನುಯಾಯಿಗಳು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ತೀರ್ಥಸ್ನಾನ ಮಾಡಿದರು.

ಕೊಡಚಾದ್ರಿ ಉಳಿಸಿ, ಸೌಪರ್ಣಿಕ ಉಳಿಸಿ ಹಾಗೂ ಪ್ಲಾಸ್ಟಿಕ್ ಮುಕ್ತ ಕೊಡಚಾದ್ರಿ ಹಾಗೂ ಬೆಳ್ಕಲ್ ತೀರ್ಥ (ಗೋವಿಂದ ತೀರ್ಥ) ಸಂಕಲ್ಪದೊಂದಿಗೆ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್, ಆರೋಹಿ ಚಾರಣ ಸಂಘಟನೆ ಮಂಗಳೂರು, ಪಶ್ಚಿಮ ಘಟ್ಟ ಉಳಿಸಿ ಸಮಿತಿ, ಪರಶುರಾಮ ಸೇನೆ, ಯುವಜಾಗೃತಿ ಬಳಗ ಸೇರಿದಂತೆ ಸ್ಥಳೀಯ ಹಲವು ಸಂಘಟನೆಗಳ ಸಹಯೋಗದೊಂದಿಗೆ ‘ಕ್ಲೀನ್ ಕೊಡಚಾದ್ರಿ’ ಅಭಿಯಾನದ ಅಂಗವಾಗಿ ‘ಗೋವಿಂದ ತೀರ್ಥ ಸ್ನಾನ’ ಹಾಗೂ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

Kemaru Shri_Visit_Belkal Theertha (13) Kemaru Shri_Visit_Belkal Theertha (17) Kemaru Shri_Visit_Belkal Theertha (18) Kemaru Shri_Visit_Belkal Theertha (19) Kemaru Shri_Visit_Belkal Theertha (15) Kemaru Shri_Visit_Belkal Theertha (11) Kemaru Shri_Visit_Belkal Theertha (10) Kemaru Shri_Visit_Belkal Theertha (16) Kemaru Shri_Visit_Belkal Theertha (12) Kemaru Shri_Visit_Belkal Theertha (7) Kemaru Shri_Visit_Belkal Theertha (8) Kemaru Shri_Visit_Belkal Theertha (9) Kemaru Shri_Visit_Belkal Theertha (4) Kemaru Shri_Visit_Belkal Theertha (5) Kemaru Shri_Visit_Belkal Theertha (6) Kemaru Shri_Visit_Belkal Theertha (3) Kemaru Shri_Visit_Belkal Theertha (1) Kemaru Shri_Visit_Belkal Theertha (2) Kemaru Shri_Visit_Belkal Theertha

ಬೆಳಿಗ್ಗೆ 9.30 ಕ್ಕೆ ಜಡ್ಕಲ್ ಮಾರ್ಗವಾಗಿ ಸ್ವಾಜಿ ಸಹಿತ ನೂರಾರು ಜನರು ಬೆಳ್ಕಲ್ ತೀರ್ಥಸ್ನಾನ ಘಟ್ಟಕ್ಕೆ ತೆರಳಿದ್ದು ಸುಮಾರು 5 ಕಿ.ಮೀ. ದೂರ ನಡೆದು ಸಾಗಲಾಯಿತು. ಈ ವೇಳೆ ಭಜನೆ, ದೇವರ ನಾಮ ಎಲ್ಲೆಡೆ ಮೊಳಗುತ್ತಿತ್ತು. ಸುಮಾರು 12 ಗಂಟೆ ಸುಮಾರಿಗೆ ತೀರ್ಥಸ್ನಾನ ಘಟ್ಟಕ್ಕೆ ತೆರಳಿದ ಬಳಿಕ ಕೇಮಾರು ಶ್ರೀಗಳು ನೆರೆz ಸಾವಿರಾರು ಭಕ್ತರು ಹಾಗೂ ಅನುಯಾಯಿಗಳ ಜೊತೆಗೂಡಿ ತೀರ್ಥಸ್ನಾನ ಮಾಡಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೇಮಾರು ಶ್ರೀಗಳು, ಗೋವಿಂದ ತೀರ್ಥ ಬಹಳ ಪ್ರಾಮುಖ್ಯವಾಗಿದ್ದು, ನಮಗೆ ಕೊಡಚಾದ್ರಿಯ ಎಲ್ಲಾ ತೀರ್ಥಕ್ಷೇತ್ರಗಳ ಸಂರಕ್ಷಣೆ ಮುಖ್ಯ ಗುರಿಯಾಗಿದೆ. ಭಕ್ತಿಯ ಜೊತೆಗೆ ಪ್ರಕೃತಿಯನ್ನು ಉಳಿಸುವ ಪ್ರಯತ್ನ ಇದಾಗಿದ್ದು, ಕೊಡಚಾದರಿಯಲ್ಲಿ ಫ್ಲಾಸ್ಟಿಕ್ ಮಯವಾಗಿದೆ. ಈ ಭಾಗದಲ್ಲಿ ಫ್ಲಾಸ್ಟಿಕ್ ಮುಕ್ತ ಮಾಡುವ ಬಗ್ಗೆ ಇಲಾಖೆ ಚಿಂತನೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ, ಉಡು‌ಒ‌ಇ ಜಿಲಲಾಡಳಿತ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗುತ್ತದೆ. ಈ ಗೋವಿಂದ ತೀರ್ಥ ಸ್ನಾನ ಪವಿತ್ರ ಸ್ನಾನ ಎಂಬುದು ಎಲ್ಲರಿಗೂ ತಿಳಿಯಬೇಕು. ಈ ದಿನದಂದೇ ನಮ್ಮ ಅಭಿಯಾನದ ಮುಂದುವರಿದ ಭಾಗವನ್ನು ಇಲ್ಲಿ ನಡೆಸುತ್ತಿದ್ದೇವೆ.

ಸಾವಿರಾರು ಭಕ್ತರು ಈ ತೀರ್ಥಸ್ನಾನಕ್ಕೆ ಬಂದಿದ್ದಾರೆ. ಇದರಿಂದಾಗಿ ಅವರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಜಗತ್ತಿನಲ್ಲಿಯೇ ಶ್ರೇಷ್ಟವಾದ ಜೀವ ಸಂಕಲಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳ ರಕ್ಷಣೆ ಅಗತ್ಯ ಎಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕೆ.ಕೆ. ಸಾಬು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿಜಯ ಶಾಸ್ತ್ರೀ, ವಿಘ್ನೇಶ್ವರ ಶಾಸ್ತ್ರೀ, ಆರೋಹಿ ಸಂಘಟನೆಯ ಸಂಚಾಲಕ ಶಶಿಧರ ಬಂಗೇರ, ಚೈತ್ರೇಶ್, ಶಿವ, ಗಿರೀಶ್, ಮೋಹನ್, ತಾರಾನಾಥ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment