ಕನ್ನಡ ವಾರ್ತೆಗಳು

ಕಾಂಗ್ರೆಸ್ ಒಳಜಗಳದಿಂದ ಮನಪಾ ಕಮಿಷನರ್ ಆಯ್ಕೆ ವಿಳಂಭ : ಸಚಿವ ಸೊರಕೆ ವಿರುದ್ಧ ಬಿಜೆಪಿಯಿಂದ ಕಪ್ಪು ಬಾವುಟ ಪ್ರದರ್ಶನ | ಬಂಧನ

Pinterest LinkedIn Tumblr

bjp_protest_photo_7

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಸೂಕ್ತ ಅಯುಕ್ತರನ್ನು ನೇಮಿಸುವಲ್ಲಿ ವಿಳಂಭ ದೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಬಂಧನಗೊಳಗಾದ ಘಟನೆ ಸೋಮವಾರ ನಡೆಯಿತು.

ಹಲವು ಸಮಯಗಳಿಂದ ನೆನೆಗುದಿಗೆ ಬಿದ್ದಿದ್ದ ಮನಪಾ ಅಯುಕ್ತರ ನೇಮಕ ಪ್ರಕರಣ ಕಾಂಗ್ರೆಸ್ ಸಚಿವರ ಒಳಜಗಳದಿಂದ ವಿಳಂಭವಾಗುತ್ತಿರುವುದರಿಂದ ಮನಾಪ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತದೆ ಎಂದು ಆರೋಪಿಸಿರುವ ನಾವು ಕಳೆದ ಆರು ತಿಂಗಳಿಂದ ಮ.ನಾ.ಪಗೆ ಕಮೀಷನರ್ ಆಯ್ಕೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದೇವು. ಆದರೆ ರಾಜ್ಯ ಸರಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಸೊರಕೆಯವರು ಯಾವೂದೇ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡುವ ಸಂದರ್ಭ ಅವರ ವಿರುದ್ಧ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಈ ಹಿಂದೆ ಪ್ರಕಟಿಸಿದ್ದರು.

bjp_protest_photo_1 bjp_protest_photo_2 bjp_protest_photo_3

ಈ ಹಿನ್ನೆಲೆಯಲ್ಲಿ ನಗರದ ಓಷಿಯನ್ ಪರ್ಲ್ ಹೊಟೇಲ್‌ನಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಬಿಜೆಪಿ ಕಾರ್ಯಕರ್ತರು ಪಿವಿಎಸ್ ಸಮೀಪದ ಜಿಲ್ಲಾ ಬಿಜೆಪಿ ಕಚೇರಿ ಎದುರು ರಸ್ತೆ ಮಧ್ಯೆ ಕಪ್ಪು ಬಾವುಟ ಹಿಡಿದು, ಪ್ರತಿಭಟನೆಗೆ ಮುಂದದಾಗ ಸ್ಥಳಕ್ಕೆ ಆಗಮಿಸಿದ ಬಂದರು ಮತು ಬರ್ಕೆ ಪೊಲೀಸರು ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು.

ಆದರೆ ಪ್ರತಿಭಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಂಗಳೂರಿನ ಸಮಾರಂಭಕ್ಕೆ ಆಗಮಿಸಲಿದ್ದ ಸೊರಕೆ ಅವರು ತಮ್ಮ ಭೇಟಿಯನ್ನು ರದ್ದುಗೊಳಿಸಿದರು.

bjp_protest_photo_4 bjp_protest_photo_5 bjp_protest_photo_6 bjp_protest_photo_8 bjp_protest_photo_9 bjp_protest_photo_10 bjp_protest_photo_11 bjp_protest_photo_12

ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ,ಪಕ್ಷದ ಪ್ರಮುಖರಾದ ಮೊನ್ನಪ್ಪ ಭಂಡಾರಿ, ಕಿಶೋರ್ ಕುಮಾರ್, ವೇದವ್ಯಾಸ ಕಾಮತ್, ಕಾರ್ಪೊರೇಟರ್ ನವೀನ್ ಚಂದ್ರ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜ್ ಗೋಪಾಲ್ ರೈ ಮತ್ತಿತ್ತರರು ಪಾಲ್ಗೊಂಡಿದ್ದರು.

Write A Comment