ಕನ್ನಡ ವಾರ್ತೆಗಳು

ಜಯ ಸುವರ್ಣರಿಗೆ ಸಾರ್ವಜನಿಕ ಅಭಿನಂದನೆ, ಸನ್ಮಾನ

Pinterest LinkedIn Tumblr

mumbai_eswar_alli_1

 

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2014 ಪುರಸ್ಕೃತ ಬಿಲ್ಲವರ ಅಸೋಸಿಯೇಶನ್‌ ಗೌರವಾಧ್ಯಕ್ಷ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣರಿಗೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ನೇತೃತ್ವದಲ್ಲಿ ಮುಂಬಯಿಯ ತುಳು-ಕನ್ನಡಿಗರಿಂದ ಸಾರ್ವಜನಿಕ ಸಮ್ಮಾನವು ಡಿ. 20 ರಂದು ಸಂಜೆ ಕಾಂದಿವಲಿ ಪಶ್ಚಿಮದ ಮಹಾವೀರ ನಗರದ ಸಪ್ತಾಹ ಕ್ರೀಡಾ ಮೈದಾನದಲ್ಲಿ ಅದ್ದೂರಿಯಾಗೆ ನೆರವೇರಿತು.

ಮೆರವಣಿಗೆಯಲ್ಲಿ ಹುಲಿ ವೇಷ, ಯಕ್ಷಗಾನ ವೇಷಧಾರಿಗಳೊಂದಿಗೆ ಪೂರ್ಣಕುಂಭ ಕಲಶವನ್ನು ಹಿಡಿದ ಮಹಿಳೆಯರು, ವಾದ್ಯ, ಚೆಂಡೆ, ಬ್ಯಾಂಡು, ರಥದಲ್ಲಿ ಜಯ ಸಿ. ಸುವರ್ಣ ದಂಪತಿಯನ್ನು ಬರಮಾಡಿಕೊಳ್ಳಲಾಯಿತು.

mumbai_eswar_alli_2 mumbai_eswar_alli_3 mumbai_eswar_alli_4mumbai_eswar_alli_5A

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಜಯ ಸಿ. ಸುವರ್ಣ ದಂಪತಿಯನ್ನು ಸನ್ಮಾನಿಸಿದರು. ಆ ನಂತರ ಮಾತನಾಡಿದ ವಿರೇಂದ್ರ ಹೆಗ್ಗಡೆಯವರು ಇಂದಿನ ಈ ಸಮಾರಂಭವನ್ನು ನೋಡುವಾಗ ಜಯ ಸಿ. ಸುವರ್ಣರಿಗೆ ರಾಜ ಮರ್ಯಾದೆ ಸಿಕ್ಕಿದಂತಾಗಿದೆ. ಸಾಧನೆಯ ಮೂಲಕ ಶಿಖರವನ್ನು ಏರಿದರೆ ಆತ ಯಾವ ರೀತಿ ಆ ಶಿಕರವನ್ನು ಏರಿದ್ದಾನೆ ಎಂಬುದನ್ನು ತಿಳುದುಕೊಳ್ಳಬೇಕು. ಜೀವನದಲ್ಲಿ ನಾವು ಸುಖವನ್ನು ಸಂಪಾದಿಸಲು ಅದರ ಹಿಂದಿರುವ ಕಷ್ಟದ ಬದಕನ್ನು ಮರೆಯಬಾರದು. ಜಯ ಸುವರ್ಣರಿಗೆ ಜನ ಸಾಮಾನ್ಯರ ಸೇವೆಯನ್ನು ಮಾಡುವ ಶಕ್ತಿಯನ್ನು ಭಗವಂತನು ಮುಂದೆಯೂ ಕರುಣಿಸಲಿ ಎಂದರು.

mumbai_eswar_alli_7 mumbai_eswar_alli_8 mumbai_eswar_alli_9 mumbai_eswar_alli_6A

ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಹಾಗೂ ಬೊರಿವಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ. ಶೆಟ್ಟಿ ಉಪಸ್ಥಿತರಿದ್ದರು. ಬೆಳ್ತಂಗಡಿ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸುಂಕದಕಟ್ಟೆ ಕ್ಷೇತ್ರದ ಧರ್ಮದರ್ಶಿ ಶ್ರೀ ನಿರಂಜನ ಸ್ವಾಮೀಜಿ, ಪೊವಾಯಿ ರುಂಡಮಾಲಿನಿ ಸುವರ್ಣಬಾಬಾ ಮಂದಿರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಹಾಗೂ ಪುರೋಹಿತ ಕೆ. ಸದಾಶಿವ ಶಾಂತಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ್‌ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್‌ ಜಿ. ಸುವರ್ಣ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಅಕ್ಷಯ’ ಮಾಸಿಕದ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್‌, ಭಾರತ್‌ ಬ್ಯಾಂಕ್‌ನ ನಿಕಟಪೂರ್ವ ಕಾರ್ಯಾಧ್ಯಕ್ಷ ವಾಸುದೇವ ಆರ್‌. ಕೋಟ್ಯಾನ್‌, ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌, ನಿರ್ದೇಶಕಿ ಪುಷ್ಪಲತಾ ಎನ್‌. ಸಾಲ್ಯಾನ್‌, ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ, ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ ಎಲ್‌. ವಿ. ಅಮೀನ್‌, ವಿವಿಧ ಸಮುದಾಯಗಳ ಪ್ರಮುಖರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಅಜಿತ್ ಸುವರ್ಣ, ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಗಿರೀಶ್‌ ಜಿ. ಸಾಲ್ಯಾನ್‌, ವಾಸು ಎಸ್‌. ದೇವಾಡಿಗ, ನ್ಯಾಯವಾದಿ ಶೇಖರ್‌ ಎಸ್‌. ಭಂಡಾರಿ, ರಾಘವೇಂದ್ರ ಜಿ. ಪೈ, ಚಂದ್ರಶೇಖರ್‌ ಬಿ., ನಾರಾಯಣ ಆರ್‌. ಮೆಂಡನ್‌, ಸುರೇಂದ್ರ ಕೆ. ಶೆಟ್ಟಿ, ರಾಜಶೇಖರ ಕೋಟ್ಯಾನ್‌, ಎನ್‌. ನಿತ್ಯಾನಂದ, ಓಂದಾಸ್‌ ಕಣ್ಣಂಗಾರ್‌, ಪ್ರಭಾಕರ ಬಂಗೇರ ಮೂಲ್ಕಿ, ಜಗನ್ನಾಥ ಪುತ್ರನ್‌, ದಯಾನಂದ ಬೋಂಟ್ರಾ ಬರೋಡಾ, ಸದಾಶಿವ ಸಾಲ್ಯಾನ್‌ ಪುಣೆ, ಧರ್ಮಪಾಲ್‌ ಯು. ದೇವಾಡಿಗ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಜೆ. ಎಂ. ಕೋಟ್ಯಾನ್‌, ಉದ್ಯಮಿಗಳಾದ ಯೊಗೇಶ್‌ ಎಸ್‌. ಪೂಜಾರಿ, ಗಿರಿಯಾ ಟಿ. ಪೂಜಾರಿ, ರವೀಂದ್ರ ಶೆಟ್ಟಿ, ರಘು ಎಂ. ಪೂಜಾರಿ, ಮೋಹನ್‌ ಸಿ. ಪೂಜಾರಿ ಗುಜರಾತ್‌, ಹರೀಶ್‌ ಜಿ. ಅಮೀನ್‌ , ಸುರೇಂದ್ರ ಎ. ಪೂಜಾರಿ, ಹರೀಶ್‌ ಬಿ. ಮೂಲ್ಕಿ ಬೆಂಗಳೂರು, ಯೊಗೇಶ್‌ ಕುಮಾರ್‌ ಬೆಳ್ತಂಗಡಿ, ಶ್ರೀಧರ ಪೂಜಾರಿ ಲೋನಾವಲ, ಜಗನ್ನಾಥ್‌ ವಿ. ಕೋಟ್ಯಾನ್‌, ಎಂ. ಐ. ದಾಮೋದರನ್‌, ಬಿಪಿನ್‌ ಜಗನ್ನಾಥ್‌ ಕೋಟ್ಯಾನ್‌, ಸುಜೀತ್‌ ಕೋಟ್ಯಾನ್‌, ರಘುರಾಮ ಕೆ. ಶೆಟ್ಟಿ ಬೆಳಗಾಂ, ಸುಂದರ್‌ ಪೂಜಾರಿ ಪುಣೆ ಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಚಂದ್ರಶೇಖರ್‌ ಎಸ್‌. ಪೂಜಾರಿ, ಸಿ. ಟಿ. ಸಾಲ್ಯಾನ್‌, ಜ್ಯೋತಿ ಕೆ. ಸುವರ್ಣ, ಭಾಸ್ಕರ್‌ ಎಂ. ಸಾಲ್ಯಾನ್‌, ಗೌರವ ಪ್ರಧಾನ ಕೋಶಾಧಿಕಾರಿ ಭಾಸ್ಕರ ವಿ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌, ಯುವಾಭ್ಯದಯ ಸಮಿತಿಯ ಕಾರ್ಯಧ್ಯಕ್ಷ ಪ್ರೇಮನಾಥ್‌ ಪಿ.ಕೋಟ್ಯಾನ್‌ ಹಾಗೂ ಸೇವಾದಳದ ಗಣೇಶ್‌ ಕೆ. ಪೂಜಾರಿ, ಸೂರ್ಯಕಾಂತ್‌ ಜೆ. ಸುವರ್ಣ, ಗಂಗಾಧರ್‌ ಜೆ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಜಯ ಸಿ ಸುವರ್ಣ ದಂಪತಿಗಳನ್ನು ಅಭಿನಂದಿಸಿದರು.

ಗಣೇಶ್ ಅಮೀನ್ ಸಂಕಮಾರ್ ಅವರು ಅಭಿನಂದನಾ ಬಾಷಣವನ್ನು ಮಾಡಿದರು. ಸನ್ಮಾನಕ್ಕೆ ಉತ್ತರಿಸಿದ ಜಯ ಸಿ ಸುವರ್ಣರು ತನ್ನ ಸಮಾಜ ಸೇವೆ ಹಾಗೂ ಉದ್ಯಮದ ಯಶಸ್ವಿಗೆ ಕಾರಣರಾದವರನ್ನು ಸ್ಮರಿಸಿದರು.

ಹರೀಶ್‌ ಕೆ. ಹೆಜ್ಮಾಡಿ ಮತ್ತು ಧರ್ಮೇಶ್ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು. ಅಸೋಶಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಡಾ| ಯು. ಧನಂಜಯ ಕುಮಾರ್‌ ವಂದಿಸಿದರು. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕಲಾಸೌರಭ ತಂಡದಿಂದ ಪದ್ಮನಾಭ ಸಸಿಹಿತ್ಲು ಅವರ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Write A Comment