ಕನ್ನಡ ವಾರ್ತೆಗಳು

ಕಿಂಗ್ ಫಿಶರ್ ಕ್ಯಾಲೆಂಡರ್ – 2015 ಫಸ್ಟ್ ಲುಕ್ ಅನಾವರಣ

Pinterest LinkedIn Tumblr

kinfiser_clender_1

ನವದೆಹಲಿ .ಡಿ.20: 2014ಕ್ಕೆ ಗುಡ್ ಬೈ ಹೇಳಿ 2015ನ್ನು ಬರಮಾಡಿಕೊಳ್ಳುವ ಸಮಯ. ಅದೇ ರೀತಿ ಕ್ಯಾಲೆಂಡರ್ ಗಳನ್ನು ಬದಲಾಯಿಸಬೇಕಾದ ಸಮಯ ಬಂದಿದೆ. ಮಾರುಕಟ್ಟೆಗೆ ನಾನಾ ರೀತಿಯ, ನಮೂನೆಯ ಕ್ಯಾಲೆಂಡರ್ ಗಳು ಲಗ್ಗೆ ಇಡುತ್ತವೆ. ಆದರೆ ತನ್ನದೇ ಆದ ವಿಶಿಷ್ಟತೆಯಿಂದ ಗಮನಸೆಳೆಯುವ ಕ್ಯಾಲೆಂಡರ್ ಕಿಂಗ್ ಫಿಶರ್. ಕಿಂಗ್ ಫಿಶರ್ ಕ್ಯಾಲೆಂಡರ್ ಎಂದರೆ ಸಾಕು ಕಣ್ಣುಗಳಲ್ಲಿ ಏನೋ ಹೊಳಪು, ಮನಸ್ಸಿನಲ್ಲಿ ಇನ್ನೇನೋ ಪುಳಕ. ಇದಕ್ಕೆ ಕಾರಣ ಬಿಕಿನಿ ಬೆಡಗಿಯರ ಕಲರ್ ಫುಲ್ ಚಿತ್ರಗಳು. ತಮ್ಮ ಅಂದಚೆಂದ ವೈಯಾರಗಳನ್ನು ಸಮೃದ್ಧವಾಗಿ ಧಾರೆಯೆರೆದ ಬಿಕಿನಿ ಚೆಲುವೆಯರಿಂದ ಸರ್ವಾಂಗ ಸುಂದರವಾಗಿ ರೂಪಗೊಂಡ ಕ್ಯಾಲೆಂಡರ್.

kinfiser_clender_2

ಪ್ರತಿ ವರ್ಷ ಬಿಕಿನಿ ಬಾಲೆಯರೊಂದಿಗೆ ಈ ಕ್ಯಾಲೆಂಡರ್ ಹೊರತರುತ್ತಿರುವುದು ವಿಜಯ್ ಮಲ್ಯ ಅವರ ಸ್ಪೆಷಾಲಿಟಿ. ಕಾಲಬದಲಾಗುತ್ತಿದ್ದರೂ ಅವರ ಅಭಿರುಚಿ ಮಾತ್ರ ಬದಲಾಗಿಲ್ಲ ಎಂಬುದಕ್ಕೆ 2015ರಲ್ಲೂ ಅದೇ ರೀತಿಯ ಚುಮುಚುಮು ಚಿತ್ರಗಳನ್ನು ಕಾಣಬಹುದು. ದಶಕಗಳ ಕಾಲದಿಂದಲೂ ಈ ಕ್ಯಾಲೆಂಡರ್ ನಿರ್ವಿಘ್ನವಾಗಿ ಮೂಡಿಬರುತ್ತಿದೆ. ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಈ ಕ್ಯಾಲೆಂಡರನ್ನು ರೂಪಿಸುವುದು ಮಲ್ಯ ಅವರ ಹವ್ಯಾಸಗಳಲ್ಲಿ ಒಂದು.

kinfiser_clender_3

ಅದೇ ರೀತಿ ಬಿಕಿನಿ ಚೆಲುವೆಯರ ಭುಜಕ್ಕೆ ಭುಜ ತಾಕಿಸುತ್ತಾ ಗಂಭೀರವಾಗಿ ಪೋಸು ಕೊಡುವುದು ಮಲ್ಯ ಸಾಹೇಬರಿಗೆ ಒಂದು ರೀತಿ ಖುಷಿ ವಿಚಾರ. ಈ ಸಲದ ಬಿಕಿನಿ ಬೆಡಗಿಯರನ್ನು ಮಲ್ಯ ಸಾಹೇಬರೇ ಆಯ್ಕೆ ಮಾಡಿರುವುದು ವಿಶೇಷ.

Write A Comment