ಕನ್ನಡ ವಾರ್ತೆಗಳು

ಲಾಲ ಶ್ರೀ ವೆಂಕಟರಮಣ ದೇವಸ್ಥಾನ : ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣೆ

Pinterest LinkedIn Tumblr

VT_Temle_belgndi_1

ಬೆಳ್ತಂಗಡಿ, 07 : ಲಾಲ ಶ್ರೀ ವೆಂಕಟರಮಣ ದೇವಸ್ಥಾನ ಇದರ ಶ್ರೀ ದೇವರ ಮೂಲ ಪ್ರತಿಷ್ಠಾ ಶತಮನೋತ್ಸವದ ಪ್ರಯುಕ್ತ ನಡೆದ ಸಹಸ್ರ ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಆದಿತ್ಯವಾರ ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಶ್ರೀಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ದಿವ್ಯ ಹಸ್ತಗಳಿಂದ ಸಮಾಜ ಬಾಂಧವರಿಗೆ ತಪ್ತ ಮುದ್ರಾಧಾರಣೆ ನಡೆಯಿತು.

VT_Temle_belgndi_2 VT_Temle_belgndi_3

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಮತ್ತು ಶತಮನೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಭಗವದ್ಭಕ್ತರು ಮುದ್ರೆಯನ್ನು ಸ್ವೀಕರಿಸಿದರು.

ಶ್ರೀ ದೇವರಿಗೆ ಅಷ್ಟೋತ್ತರ ಸಹಸ್ರ ಪ್ರದಕ್ಷಿಣೆ

VT_Temle_belgndi_4

ಬೆಳ್ತಂಗಡಿ : ಲಾಲ ಶ್ರೀ ವೆಂಕಟರಮಣ ದೇವಸ್ಥಾನ ಇದರ ಶ್ರೀ ದೇವರ ಮೂಲ ಪ್ರತಿಷ್ಠಾ ಶತಮನೋತ್ಸವದ ಪ್ರಯುಕ್ತ ಆದಿತ್ಯವಾರ ಸಮಾಜ ಬಾಂಧವರಿಂದ ಶ್ರೀ ದೇವರಿಗೆ ಅಷ್ಟೋತ್ತರ ಸಹಸ್ರ ಪ್ರದಕ್ಷಿಣೆ ನಡೆಯಿತು.

VT_Temle_belgndi_5

 

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಮತ್ತು ಶತಮನೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಗವದ್ಭಕ್ತರು ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದರು.

ಚಿತ್ರ : ಮಂಜು, ನೀರೇಶ್ವಾಲ್ಯ

Write A Comment