ಕನ್ನಡ ವಾರ್ತೆಗಳು

ನೂಪುರ ಭ್ರಮರಿ ತಂಡದಿಂದ ನೃತ್ಯಾಸಕ್ತರಿಗೆ ವಿನೂತನ ನೃತ್ಯ ಕೋರ್ಸ್ ಅರಂಭ..

Pinterest LinkedIn Tumblr

noopura_bramar_class

ಬೆಂಗಳೂರು,ಡಿ.02: ಕ​​ರ್ನಾಟಕದಲ್ಲಿ ಭರತನ ನಾಟ್ಯಶಾಸ್ತ್ರದ ಶಾಸ್ತ್ರಾಭ್ಯಾಸದ ಕುರಿತ ತರಬೇತಿಗಳು ಇಂದಿಗೆ ಕ್ರಮಬದ್ಧವಾಗಿ​ ಜರುಗುವುದು ತೀರಾ ವಿರಳಾತಿ ವಿರಳ. ಇದರಿಂದಾಗಿ ನೃತ್ಯಾಸಕ್ತರಿಗೆ, ಅಧ್ಯಯನದ ಅಪೇಕ್ಷೆ ಉಳ್ಳವರಿಗೆ ಸಾಕಷ್ಟು ಹಿನ್ನಡೆಯೂ ಆಗಿದೆ. ಹೀಗಾಗಿ ನೃತ್ಯಾಸಕ್ತರಿಗೆ ವಿನೂತನ ಕೋರ್ಸ್ ಗಳನ್ನು ನೂಪುರ ಭ್ರಮರಿ ತಂಡ ಆಯೋಜಿಸುತ್ತಿದೆ.   ನೃತ್ಯ ಸಂಶೋಧನೆ, ಅಧ್ಯಯನ, ದಾಖಲೀಕರಣಕ್ಕೆ ಸಂಬಂಧಿಸಿದಂತೆ ದುಡಿಯುತ್ತಿರುವ ನೂಪುರ ಭ್ರಮರಿ ಸಂಸ್ಥೆಯು ಶಾಸ್ತ್ರೀಯ-ಜಾನಪದವೆಂಬ ಬೇಧವಿಲ್ಲದೆ ವಿವಿಧ ಕಲಾವಿಭಾಗದ ಅಭ್ಯರ್ಥಿಗಳು ಕೋರ್ಸ್ ತೆಗೆದುಕೊಳ್ಳಬಹುದು.

ಅಂದರೆ ಸಬ್ ಜೂನಿಯರ್ ಹಂತದಿಂದ ಜೂನಿಯರ್, ಸೀನಿಯರ್, ವಿದ್ವತ್, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕಲಾವಿದರಿಗಾಗಿ ಭರತನ ನಾಟ್ಯಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ( ಥಿಯರಿ+ ಪ್ರಾಕ್ಟಿಕಲ್) ಸರ್ಟಿಫಿಕೇಟ್ ಕೋರ್ಸ್ ತರಗತಿಗಳನ್ನು ಆರಂಭಿಸಲಾಗಿದೆ. ಇದು ಹಲವು ಹಂತಗಳಲ್ಲಿ ವಿಭಾಗೀಕರಿಸಲ್ಪಟ್ಟಿದ್ದು ನಾಟ್ಯಶಾಸ್ತ್ರದ ಸಂಪೂರ್ಣ ಅಧ್ಯಯನ, ಕರಣ/ಚಾರಿಗಳ ಕಲಿಕೆಯನ್ನು ಒಳಗೊಳ್ಳಲಿದೆ.

ಶತಾವಧಾನಿ ಡಾ. ಆರ್. ಗಣೇಶ್ ರ ತರಗತಿಗಳೇ ಇದಕ್ಕೆ ಸ್ಪೂರ್ತಿ. ಅವರ ತರಗತಿ, ಮಾರ್ಗದರ್ಶನದಿಂದ ಕಲಿತು ಬೆಳೆಸಿಕೊಂಡ ವಿಚಾರಗಳನ್ನು ಸಹೃದಯ ಆಸಕ್ತರಿಗೆ ತಲುಪಿಸಬೇಕೆಂಬ ಕೈಂಕರ್ಯ ನಮ್ಮದು. ಇದರ ಜತೆಗೆ ಸಂಶೋಧನಾಧರಿತವಾದ ನಟುವಾಂಗ (ತಾಳಕ್ರಮದ) ಕುರಿತ ​6 ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನೂ ತೆರೆಯಲಾಗಿದೆ.

​ಇದರೊಂದಿಗೆ ​ಪ್ರದರ್ಶನ ಕಲೆಗಳ ಸಂಶೋಧನಾಸಕ್ತರಿಗಾಗಿ ಸಂಶೋಧನಾ ತರಗತಿಗಳನ್ನೂ, ಶಾಸ್ತ್ರಗ್ರಂಥಗಳ ಅಧ್ಯಯನ ತರಗತಿಗಳನ್ನೂ ನಡೆಸಲಾಗುತ್ತಿದೆ. ಈ ತರಗತಿಗಳೆಲ್ಲವೂ ಅಭ್ಯರ್ಥಿಗಳ ಆಯ್ಕೆಯ ಮೇರೆಗೆ ಒಂದೋ ಮುಖಾಮುಖಿ ಅಥವಾ ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇದು ಕರ್ನಾಟಕದ ನೃತ್ಯಕ್ಷೇತ್ರದಲ್ಲೇ ವಿನೂತನವಾದ ಬಹುಬೇಡಿಕೆಯ ತರಗತಿಕ್ರಮಗಳಾಗಿದ್ದು ಆಸಕ್ತರು ಸದ್ವಿನಿಯೋಗಪಡಿಸಿಕೊಳ್ಳಬಹುದು.
​ ​
ಹೆಚ್ಚಿನ​ ಮಾಹಿತಿಗೆ ಲೇಖನಗಳಿಗಾಗಿ www.noopurabhramari.com ನ್ನು ಪರಿಶೀಲಿಸಬಹುದು. ಆಸಕ್ತರು ಸಂಪರ್ಕಿಸಿ: ಮನೋರಮಾ ಬಿ.ಎನ್ : 99641 40927​

Write A Comment