ಕನ್ನಡ ವಾರ್ತೆಗಳು

ಸುಕನ್ಯ ರಾವ್‌ಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿ ಕರ್ನಾಟಕ ವತಿಯಿಂದ ಪಿ.ಹೆಚ್.ಡಿ. ಪದವಿ ಪ್ರಧಾನ.

Pinterest LinkedIn Tumblr

Sukanya_Rao_Phd_award

ಮಂಗಳೂರು,ಡಿ.02 : ಮಂಗಳೂರಿನ ಸುಕನ್ಯ ರಾವ್ ಅವರ “ಫ್ಯಾಕ್ಟರ್‍ಸ್ ಎಫೆಕ್ಟಿಂಗ್ ಇನ್ವೆಸ್ಟ್‌ಮೆಂಟ್ ಡಿಸಿಷನ್ ಮೇಕಿಂಗ್ ಆಫ್ ಇಂಡಿವಿಜ್ಯುವಲ್ ಇನ್ವೆಸ್ಟರ್‍ಸ್ ಇನ್ ಇಂಡಿಯ” ಎಂಬ ಮಹಾ ಪ್ರಬಂಧಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್  ಪಿ.ಹೆಚ್.ಡಿ. ಪದವಿ ನೀಡಿದೆ.ಸುಕನ್ಯ ಅವರು ತಮ್ಮ ಮಹಾಪ್ರಬಂಧವನ್ನು ಡಾ. ಕೆ.ಬಿ. ಕಿರಣ್, ಪ್ರೊಫೆಸರ್, ಹುಮ್ಯಾನಿಟೀಸ್, ಸಮಾಜ ವಿಜ್ಞಾನ ಮತ್ತ ಆಡಳಿತ ವಿಭಾಗ, ಎನ್‌ಐಟಿಕೆ, ಸುರತ್ಕಲ್ ಮತ್ತು ಡಾ. ಎಸ್ ಶ್ರೀಧರ್, ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಸಿದ್ಧ ಪಡಿಸಿದ್ದರು.

ಸುಕನ್ಯ ಮಂಗಳೂರಿನ ವಿಕ್ಟೋರಿಯಾ ಹಣ್ಮಕ್ಕಳ ಪ್ರೌಢಶಾಲೆ, ಲೇಡಿಹಿಲ್ ಮತ್ತ ಸೈಂಟ್ ಆಗ್ನೆಸ್ ಹೈಸ್ಕೂಲ್ ಮಚ್ತು ಕಾಲೇಜ್ ಇದರ ಹಳೆ ವಿದ್ಯಾಥಿನಿಯಾಗಿದ್ದು, ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.ಇವರು ಮಂಗಳೂರಿನ ಸೈಂಟ್ ಜೋಸೆಫ್ಸ್ ಇಂಜಿನಿಯರಿಂಗ್ ಕಾಲೇಜು, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿ, ಎಮ್‌ಎಸ್‌ಎನ್‌ಎಮ್ ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್, ಎನ್‌ಎಮ್‌ಎ‌ಎಮ್ ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿ, ನಿಟ್ಟೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಸುಕನ್ಯ ರಾವ್ ಅವರು ತಿಂಗೊಳೆಮನೆ, ಅತಿಕಾರಿಬೆಟ್ಟು, ಮುಲ್ಕಿ ಇಲ್ಲಿನ ದಿ. ನಾಗರತ್ನ ಮತ್ತು ಶ್ರೀ. ರಾಘು ಕೆ. ಶೆಟ್ಟಿ ದಂಪತಿಯ ಪುತ್ರಿ ಮತ್ತು ಶ್ರೀ. ರೋಹಿತ್ ಎಸ್ ರಾವ್, ಮಾಲಕರು, ಕ್ರಿಸ್ಟಲ್ ಇಲೆಕ್ಟ್ರಾನಿಕ್ಸ್, ಬಲ್ಮಠ ಮಂಗಳೂರು ಇವರ ಪತ್ನಿ.

Write A Comment