ಕನ್ನಡ ವಾರ್ತೆಗಳು

ಡಿಸೆಂಬರ್ 4ರಿಂದ 11ರವರೆಗೆ ವಿಶ್ವ ತುಳುವೆರೆ ಪರ್ಬದಲ್ಲಿ ತುಳು ನಾಟಕ ಪರ್ಬ- 2014

Pinterest LinkedIn Tumblr

vishwa_tulu_parba_Logo

ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟ ಇದರ ಬೆಳ್ಳಿ ಹಬ್ಬದ ಅಂಗವಾಗಿ ವಿಶ್ವ ತುಳುವೆರೆ ಪರ್ಬ2014ರ ನೆನಪಿನಂಗವಾಗಿ ಡಿಸೆಂಬರ್ 4ರಿಂದ 11ರವರೆಗೆ ತುಳುನಾಟಕ ಪರ್ಬ-2014ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಜರಗಲಿದೆ.

ಲಕ್ಷ್ಮೀಶ ಭಂಡಾರಿಯವರ ಪ್ರಾಯೋಜಕತ್ವದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಾಟಕ ಪರ್ಬ ಜರಗಲಿದ್ದು ಏಳು ಮಂದಿ ಹಿರಿಯ ಕಲಾವಿದರನ್ನು ಗೌರವಿಸಲಾಗುತ್ತದೆ.

ಡಿಸೆಂಬರ್ 4ರಂದು ಸಂಜೆ 5.30ಕ್ಕೆ ನಾಟಕ ಪರ್ಬದ ಉದ್ಘಾಟನಾ ಸಮಾರಂಭವನ್ನು ಖ್ಯಾತ ನಾಟಕ ರಚನೆಕಾರ ಬಯ್ಯಮಲ್ಲಿಗೆ ಖ್ಯಾತಿಯ ಡಾ.ಪಿ.ಸಂಜೀವ ದಂಡೆಕೇರಿ ರಂಗಜ್ಯೋತಿ ಪ್ರಜ್ವಲಿಸಲಿದ್ದಾರೆ . ಏಳು ದಿನಗಳಲ್ಲಿ ಆರತಿ, ಕೋಟಿ ಚೆನ್ನಯ್ಯ , ನಮ ತೆರಿಯೊನುಗ, ಬಂಗಾರ್ ಕಂಡನಿ, ಸತ್ಯೊದ ಸಿರಿ, ಆ…ನಾಗಮಚ್ಚೆ, ನೆನಪು ದೀಲೆ, ಪಗರಿದ ಮಂಚವು ನಾಟಕ ಪ್ರದರ್ಶನಗೊಳ್ಳಲಿದೆ.

ಬಿ.ರಾಮ ಕಿರೋಡಿಯನ್, ಆನಂದ ಗಾಣಿಗ. ಪಿ.ಎಸ್.ರಾವ್, ಎಂ.ಎಸ್.ಇಬ್ರಾಹಿಂ, ಕೆ.ಬಿ.ಭಂಡಾರಿ, ರಾಮಣ್ಣ ರೈ ಪುತ್ತೂರು ಮಚ್ಚೇಂದ್ರನಾಥ ಪಾಂಡೇಶ್ವರ್, ಸೋಮಶೇಖರ ಪುತ್ರನ್ ಮೊದಲಾದವರ `ನೆಂಪು’ ಕಾರ್ಯಕ್ರಮವೂ ಜರಗಲಿದೆ.

ಏಳು ದಿನದ ನಾಟಕ ಪರ್ಬದಲ್ಲಿ ಸಂಜೀವ ಅಡ್ಯಾರ್, ಕ್ಯಾಥರಿನ್ ರೋಡ್ರಿಗಸ್, ಆರ್.ಕೆ.ಮಂಗಳೂರು, ಶಾರದಾ ಬಾರ್ಕೂರು, ರಾಘವ ಅತ್ತಾವರ, ರೂಪಾ ಅತ್ತಾವರ, ಕ್ಯಾಲಿ ಡಿ.ಎಸ್, ಇಬ್ರಾಹಿಂ ತಣ್ಣೀರುಬಾವಿ ಮೊದಲಾದವರನ್ನು ಸನ್ಮಾನಿಸಲಾಗುವುದು ಎಂದು ನಾಟಕ ಪರ್ಬ ಸಮಿತಿಯ ಸಂಚಾಲಕ ವಿ.ಜಿ.ಪಾಲ್ ತಿಳಿಸಿದ್ದಾರೆ.

Write A Comment