ಕನ್ನಡ ವಾರ್ತೆಗಳು

ಚಿಪ್ಸ್ ಪ್ಯಾಕೇಟಲ್ಲಿ ಬೀಡಿ ತುಂಡು :  ಚಿಪ್ಸ್ ತಿಂದ ವಿದ್ಯಾರ್ಥಿನಿ ಅಸ್ವಸ್ಥ

Pinterest LinkedIn Tumblr
chips_with_beedi_1
ಮಂಗಳೂರು,ನ.29: ಆಹಾರ ಇಲಾಖೆ ಇದ್ದೂ ಇಲ್ಲದಂತಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕೆಂದರೆ ವಿದ್ಯಾರ್ಥಿನಿಯೋರ್ವಳು ತಿಂದ ಚಿಪ್ಸ್ ಪ್ಯಾಕೇಟಲ್ಲಿ ಸೇದಿದ ಬೀಡಿಯ ತುಂಡು ಕಂಡು ಬಂದು ಆಕೆ ಅಸ್ವಸ್ಥಳಾಗಿದ್ದರೂ ತಯಾರಕರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕೊಣಾಜೆ ನಿವಾಸಿ ಗೋರಿಗುಡ್ಡ ಶಾಲೆಯ ವಿದ್ಯಾರ್ಥಿನಿಯೋರ್ವಳು ಕೊಣಾಜೆಯಲ್ಲಿರುವ ರೇಷನ್ ಅಂಗಡಿಯಿಂದ ರೂ.1 ಕೊಟ್ಟು ಚಿಪ್ಸ್ ಪ್ಯಾಕೇಟನ್ನು ಖರೀದಿಸಿದ್ದಳು. ಸಂಜೆ ಮನೆಗೆ ವಾಪಸ್ಸಾಗುವ ಸಂದರ್ಭ ಅದನ್ನು ತಿನ್ನುವಾಗ ಪ್ಯಾಕೇಟಿನಲ್ಲಿದ್ದ ಚಿಪ್ಸ್ ಜತೆಗೆ ಸೇದಿದ ಬೀಡಿಯ ತುಂಡು ಕಂಡುಬಂದಿತ್ತು. ಕೂಡಲೇ ಅದನ್ನು ನೋಡಿದ ಬಾಲಕಿ ವಾಂತಿ ಮಾಡಲು ಆರಂಭಿಸಿದ್ದಳು. ಬಸ್ಸಿನಲ್ಲಿ ಬಳಿಕ ಮನೆಯಲ್ಲಿ ವಾಂತಿ ಮಾಡುತ್ತಿದ್ದಾಗ ಕಂಡ ಮನೆಯವರು ವಿಚಾರಿಸಿದಾಗ ಚಿಪ್ಸ್ ತಿಂದಿರುವುದನ್ನು ಹೇಳಿದ್ದಾಳೆ. ಮನೆಯವರು ಪರಿಶೀಲಿಸಲು ಅದನ್ನು ತಿನ್ನುವಾಗ ಹಳಸಿದ ಸ್ಥಿತಿಯಲ್ಲಿ ಚಿಪ್ಸ್ ಇತ್ತು. ಖರೀದಿಸಿದ ಅಂಗಡಿಯಲ್ಲಿ ವಿಚಾರಿಸಿದಾಗ ಮಂಗಳೂರಿನಿಂದ ನಿನ್ನೆಯಷ್ಟೇ ತಂದು ಇರಿಸಿರುವುದಾಗಿ, ಅಂಗಡಿ ಮಾಲಿಕರು ತಿಳಿಸಿದ್ದರು.
chips_with_beedi_2
ಇಂತಹ ಹಳಸಿದ ಮತ್ತು ದೇಹಕ್ಕೆ ಹಾನಿಕಾರವಾದ ವಸ್ತುಗಳನ್ನು ಅಂಗಡಿಯಲ್ಲಿ ಮಾರಾಟ ಮಾಡಿದಲ್ಲಿ, ಮಕ್ಕಳ ಆರೋಗ್ಯಕ್ಕೆ ತುಂಬಾ ಪರಿಣಾಮ ಬೀರುವುದು. ಕೂಡಲೇ ಆಹಾರ ಇಲಾಖೆಯವರು ಕ್ರಮಕೈಗೊಂಡು, ಇಂತಹ ಆಹಾರ ತಿಂಡಿಗಳನ್ನು ನಿರ್ಬಂಧಿಸಬೇಕು ಎಂಬ ಒತ್ತಾಯ ಮನೆ ಮಂದಿಯದ್ದಾಗಿದೆ.

 

Write A Comment