ಕನ್ನಡ ವಾರ್ತೆಗಳು

ಕಿಸ್ ಅಫ್ ಲವ್ ಡೇ ಆಚರಣೆ : ಪೂಜಾರಿ ಅಕ್ರೋಶ

Pinterest LinkedIn Tumblr

Poojary_bantwala_case

ಮಂಗಳೂರು,ನ.25:  ” ಕಿಸ್‌ ಆಫ್‌ ಲವ್‌ ಡೇ ಕಾರ್ಯಕ್ರಮ ಮಾಡುವವರನ್ನು ಬಂಧಿಸಬೇಕು. ಇಂತಹ ಅಶ್ಲೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮೂರು ವರ್ಷ ಜೈಲು ಶಿಕ್ಷೆಯ ಕಾನೂನಿದೆ. 354 ತಿದ್ದುಪಡಿ ಕಾಯ್ದೆ ಪ್ರಕಾರ ಅಶ್ಲೀಲ ಸಂದೇಶ ರವಾನೆ ಮಾಡಿದ ಯಾರೇ ಆದರೂ ಶಿಕ್ಷೆಗೆ ಅರ್ಹರು ಹಾಗೂ ಈ ರೀತಿಯ ಕಾರ್ಯಕ್ರಮ ಆಯೋಜನೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ದುಷ್ಪರಿಣಾಮ ಬೀರುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಯವರು ತಿಳಿಸಿದರು ಅವರು ನಗರದ ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ . ಅನೈತಿಕ ಪೊಲೀಸ್‌ಗಿರಿ ವಿರೋಧಿಸಿ ಕಿಸ್‌ ಆಫ್‌ ಡೇ ಕಾರ್ಯಕ್ರಮ ಆಯೋಜಿಸುವುದು ಅಕ್ಷಮ್ಯ ಅಪರಾಧ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದರು.

ಸಾರ್ವಜನಿಕವಾಗಿ ಮುತ್ತಿಕ್ಕುವ ಕಾರ್ಯಕ್ರಮ ಇಟ್ಟುಕೊಂಡರೆ ಶಾಲಾ ವಿದ್ಯಾರ್ಥಿಗಳಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಅವರೂ ಕೂಡ ನಾಳೆ ಅದನ್ನೇ ಪಾಲಿಸುತ್ತಾರೆ ಎಂಬ ಅರಿವು ಅವಶ್ಯ. ಅಲ್ಲದೇ ಪಬ್‌ ಮೇಲೆ ದಾಳಿ ಮಾಡಿ ಅನೈತಿಕ ಪೊಲೀಸ್‌ಗಿರಿ ತೋರಿಸಿದವರಿಗೆ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ದಾಳಿಗೆ ಮತ್ತೂಂದು ಅವಕಾಶ ನೀಡಿದಂತಾಗುತ್ತದೆ ಎಂದು ಅವರು ವಿವರಿಸಿದರು.

ಮೇಯರ್‌ ಮಹಾಬಲ ಮಾರ್ಲ, ಕಾಂಗ್ರೆಸ್‌ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ವಿಶ್ವಾಸ್‌ಕುಮಾರ್‌ ದಾಸ್‌ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment