ಕನ್ನಡ ವಾರ್ತೆಗಳು

ಕರ್ನಾಟಕದ ಶೇ. 20ಕ್ಕಿಂತ ಹೆಚ್ಚು ಶಾಸಕರಿಗೆ ವಿಕಿಪೀಡಿಯಾದಲ್ಲಿ ವೈಯಕ್ತಿಕ ಪುಟ.

Pinterest LinkedIn Tumblr

Wikipedia_join_mls_pic

ಬೆಂಗಳೂರು,ನ. 25: ಈ ಕುರಿತು ವಿಕಿಪೀಡಿಯಾ ಆಡಳಿತಾಧಿಕಾರಿ ಟಿನು ಚೆರಿಯನ್ ಮಾಹಿತಿ ನೀಡಿದ್ದಾರೆ. “ವಿಕಿಪೀಡಿಯಾ ಅತ್ಯಂತ ಜನಪ್ರಿಯ ಅಂತರ್ಜಾಲ ಮಾಹಿತಿ ಪುಟವಾಗಿದೆ. ಆದರೆ, ಅಲ್ಲಿ ಶಾಸಕರು ಅದರಲ್ಲಿಯೂ ಸಚಿವರ ಕುರಿತು ಸಾಕಷ್ಟು ಮಾಹಿತಿ ಸಿಗುತ್ತಿಲ್ಲ. ಕರ್ನಾಟಕದ ಶೇ. 20ಕ್ಕಿಂತ ಕಡಿಮೆ ಶಾಸಕರು ಮಾತ್ರ ವಿಕಿಪೀಡಿಯಾ ಪುಟದಲ್ಲಿದ್ದಾರೆ. ಆದ್ದರಿಂದ ಅವರಿಗೆಲ್ಲ ಪ್ರತ್ಯೇಕ ಪುಟ ನೀಡಲು ನಿರ್ಧರಿಸಲಾಗಿದೆ” ಎಂದು ಚೆರಿಯನ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ ವಿಕಿಪೀಡಿಯಾ ಪುಟ ಬರೆಯುತ್ತಿರುವ ಎಲ್ಲ ಬರಹಗಾರರು ಹಾಗೂ ಸಂಪಾದಕರು ಸೇರಲಿದ್ದು, ಕರ್ನಾಟಕದ ಶಾಸಕರು ಹಾಗೂ ಸಚಿವರ ಕುರಿತು ವ್ಯಕ್ತಿ ಪರಿಚಯ ಮಾಹಿತಿಯನ್ನು ಸಿದ್ಧಪಡಿಸಲಿದ್ದಾರೆ. ಇದರಲ್ಲಿ ಶಾಸಕರ ಜನ್ಮಸ್ಥಳ, ಶಿಕ್ಷಣ, ರಾಜಕೀಯ ಜೀವನ, ಕುಟುಂಬ ಮತ್ತಿತರ ವಿವರಗಳನ್ನು ಒಳಗೊಂಡಿರಲಿದೆ ಎಂದು ಚೆರಿಯನ್ ತಿಳಿಸಿದ್ದಾರೆ.

ಬರಹಗಾರರು ಎದುರಿಸುವ ಸವಾಲುಗಳು: ಇಲ್ಲಿ ಎದುರಾಗುವ ಸಮಸ್ಯೆ ಎಂದರೆ ವಿಕಿಪೀಡಿಯಾ ನಿಯಮದ ಪ್ರಕಾರ ಈ ವೆಬ್ ಸೈಟ್‌ನಲ್ಲಿ ಪುಟ ಹೊಂದುವ ವ್ಯಕ್ತಿ ಅರ್ಹತೆ ಹೊಂದಿರಬೇಕು. ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರಬೇಕು. ಆದರೆ, ಎಲ್ಲ ಶಾಸಕರ ಕುರಿತು ಈ ಮಾನದಂಡ ಅನುಸರಿಸುವುದು ಕಷ್ಟಸಾಧ್ಯ ವಿಷಯ ಕುರಿತು ಅವರ ಅರ್ಹತೆಯನ್ನು ಅಳೆಯುವುದು ಕಷ್ಟಸಾಧ್ಯ ವಿಷಯ. ಅಲ್ಲದೆ, ಎಲ್ಲ ಶಾಸಕರ ವೈಯಕ್ತಿಕ ಮಾಹಿತಿ ಹಾಗೂ ಚಿತ್ರವನ್ನು ಸಂಗ್ರಹಿಸಬೇಕಾಗಿದೆ. ಈ ಸಮಸ್ಯೆಯ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯನ್ನು ಸಂಪರ್ಕಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಶಾಸಕರ ಜೊತೆ ಸಂವಹನ ನಡೆಸಲು ಅನುಕೂಲ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಚೆರಿಯನ್ ತಿಳಿಸಿದ್ದಾರೆ. ಕರ್ನಾಟಕದ ಎಲ್ಲ 224 ಶಾಸಕರ ಕುರಿತು ಮಾಹಿತಿ ಸಂಗ್ರಹಿಸಿ, ಬರೆಯುವ ಪ್ರಕ್ರಿಯೆ ಎಂದು ಮುಗಿಯುತ್ತದೆ ಎಂದು ಹೇಳಿವುದು ಕಷ್ಟ. ಆದರೆ, ವಿಧಾನಸಭೆ ಸದಸ್ಯರ ಕುರಿತು ಮಾಹಿತಿ ಬರವಣಿಗೆ ಮುಗಿದ ನಂತರ ವಿಧಾನ ಪರಿಷತ್ ಸದಸ್ಯರ ಕುರಿತು ಬರೆಯಲಾಗುವುದು ಎಂದು ಚೆರಿಯನ್ ತಿಳಿಸಿದ್ದಾರೆ.

Write A Comment