ಕನ್ನಡ ವಾರ್ತೆಗಳು

ಶ್ರೀಶಾಂತ್ ಸೆಕೆಂಡ್ ಇನ್ನಿಂಗ್ಸ್ – ಬಾಲಿವುಡ್ ಗೆ ಪಾದಾರ್ಪಣೆ

Pinterest LinkedIn Tumblr

shrishant_news_look

ನವ ದೆಹಲಿ,ನ.24: ಐಪಿಎಲ್‌‌ ಪಂದ್ಯದಲ್ಲಿ ಸ್ಪಾಟ್​​ ಫಿಕ್ಸಿಂಗ್​’ ಆರೋಪ ಹೊತ್ತುಕೊಂಡು​ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿ ತಮ್ಮ ಕ್ರಿಕೆಟ್ ಭವಿಷ್ಯಕ್ಕೆ ಕುತ್ತು ತಂದುಕೊಂಡ ಶ್ರೀಶಾಂತ್ ಬಾಲಿವುಡ್ ಪ್ರವೇಶಿಸುವುದು ಖಚಿತವಾಗಿದೆ.

ಕೇರಳ ಮೂಲದ 31 ವರ್ಷದ ಕ್ರಿಕೆಟರ್, ಕೌಶ್ತುಭ ನಾರಾಯಣ ನಿಯೋಗಿ ನಿರ್ದೇಶನದ ‘ಕ್ಯಾಬರೆಟ್’ ಎಂಬ ಚಿತ್ರದಲ್ಲಿ ಮಲಯಾಳಿ ಮೆಂಟರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಈ ವಿಷಯವನ್ನು ಚಿತ್ರದ ನಿರ್ಮಾಪಕಿ ಪೂಜಾ ಭಟ್​​ ಖಚಿತ ಪಡಿಸಿದ್ದಾರೆ. ಇದೊಂದು ನೃತ್ಯ ಪ್ರಧಾನ ಚಿತ್ರ ಎನ್ನಲಾಗುತ್ತಿದೆ.

shrishant_news_look2

ಚಿತ್ರದಲ್ಲಿ ರಿಚ್ಚ ಚಡ್ಡಾಳ ಡ್ಯಾನ್ಸ್​​ ಮೆಂಟರ್​​ ಆಗಿ ಶ್ರೀಶಾಂತ್​​ ನಟಿಸಲಿದ್ದಾರೆ. ಈ ಪಾತ್ರಕ್ಕಾಗಿ ನಿರ್ಮಾಪಕಿ ಪೂಜಾ ಭಟ್​​ ಅನುಭವಿ ನಟನಿಗಾಗಿ ಹುಡುಕುತಿದ್ದರಂತೆ. ಶ್ರೀಶಾಂತ್​​‌ನನ್ನು ನೋಡಿದ್ಮೇಲೆ ಈ ಪಾತ್ರಕ್ಕೆ ಆತನೇ ಸೂಕ್ತ ಅನ್ನಿಸಿತು ಎಂದು ಪೂಜಾ ಹೇಳಿದ್ದಾರೆ.

shrishant_news_look1

ಜೈಲು ಶಿಕ್ಷೆ ಮುಗಿಸಿಕೊಂಡು ಬಂದ ಶ್ರೀಶಾಂತ ಕಹಿ ಗಳಿಗೆಗಳನ್ನು ಮರೆಯಲು ಸಂಗೀತದ ಮೊರೆ ಹೋಗಿದ್ದರು. ಮ್ಯೂಸಿಕ್, ನೃತ್ಯ​​ ನಿಜಕ್ಕೂ ಅವರಿಗೆ ಸಾಂತ್ವನವನ್ನು ನೀಡಿದ್ದವು. ಈಗ ಅದೇ ನೃತ್ಯ ಅವರ ಜೀವನವನ್ನು ಕೈ ಹಿಡಿದು ನಡೆಸಲು ಹೊರಟಿದೆ.

ತಮ್ಮ ಕ್ರಿಕೆಟ್ ಜೀವನವನ್ನು ಅಪಮಾನಕರವಾಗಿ ಮೊಟಕುಗೊಳಿಸಿಕೊಂಡ ಶ್ರೀಶಾಂತ್, ಈಗ​​​ ಹೊಸದೊಂದು ವೃತ್ತಿ ಬದುಕಿಗೆ ಕಾಲಿಡುತ್ತಿದ್ದಾರೆ. ಅದು ಸಹ ಬಾಲಿವುಡ್‌ನಲ್ಲಿ !….’ಕೇರಳ ಎಕ್ಸಪ್ರೆಸ್’ ದ್ವಿತೀಯ ಇನ್ನಿಂಗ್ಸ್ ಹೇಗಿರುತ್ತೆ ಎಂಬುದನ್ನು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Write A Comment