(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.೨೩: ಪ್ರಪಂಚದ ಕಲಾಶಕ್ತಿಗೆ ಬಲತುಂಬಿದ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ವಿಶ್ವದಾಖಲೆ ಸೃಷ್ಠಿಸಿ ಇತಿಹಾಸದ ಪುಟಗಳಲ್ಲಿ ಮೆರೆದ ಕಲಾಕ್ಷೇತ್ರದ ಕ್ರಾಂತಿ ಪುರುಷರೇ ಸರಿ. ಅವರ ಈ ಕಲಾಸಾಧನೆ ನಮಗೂ ಕಲಾಮಾತೆಗೂ ಸಂದ ಗೌರವವಾಗಿದೆ. ವಿಜಯಕುಮಾರ್ ಶೆಟ್ಟಿ ಅವರು ಒಂದೆಡೆ ಬಂಟರಿಗೆ ಕೀರ್ತಿ ಪತಾಕೆಯಾಗಿದ್ದರೆ ತುಳುನಾಡ ಸಮಗ್ರ ಜನತೆಗೆ ಹಿರಿಮೆಯ ಕುವರನಾಗಿದ್ದಾರೆ. ಅವರ ವಿಶೇಷವಾದ ಜೀವನಶೈಲಿ, ಕಲಾ ಕಲ್ಪನೆ ಅತ್ಯಾದ್ಭುತವಾಗಿದ್ದು, ಕಲೆಯಲ್ಲಿ ಜಾತಿ, ಭೇದ ತೋರದೆ ಜೀವನ ಅರ್‍ವತ್ತು ಫಲಪ್ರದ ಸಂವತ್ಸರಗಳನ್ನು ಪೂರೈಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸುಪುತ್ರರಾಗಿ ವಿಜಯದ ಪತಾಕೆಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಇಂತಹ ಮಹಾನ್ ಕಲಾರಾರಗಿಗೆ ರಾಷ್ಟ್ರದ ಪ್ರತಿಷ್ಠಿತ ಪುರಸ್ಕಾರ ಶೀಘ್ರವೇ ಅರಸಿ ಬರಲಿ ಎಂದು ವಿದ್ಯಾವಿಹಾರ್‌ನ ಶ್ರೀ ಅಂಬಿಕ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯಕುಮಾರ್ ಶೆಟ್ಟಿ ಸಂಸ್ಥಾಪಕತ್ವದ ಕಲಾಜಗತ್ತು ಮುಂಬಯಿ ಸಂಸ್ಥೆಯ ೩೫ನೇ ವಾರ್ಷಿಕೋತ್ಸವದ ಅಂಗವಾಗಿ ಬಂಟರ ಸಂಘ ಮುಂಬಯಿ ಸಹಯೋಗದಲ್ಲಿ ಇಂದಿಲ್ಲಿ ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಕಲಾಜಗತ್ತು ರಂಗೋತ್ಸವ ಸಮಾರಂಭವನ್ನು ಆಶೀರ್ವಚಿಸಿ ಹರಿದಾಸ ಭಟ್ ನುಡಿದರು.
ರಂಗೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಸಮಾರಂಭವನ್ನು ರಂಗೋತ್ಸವ ಸಂಘಟನಾ ಸಮಿತಿ ಗೌರವಾಧ್ಯಕ್ಷರೂ, ಅನಿವಾಸಿ ಭಾರತೀಯ ಎನ್‌ಎಂಸಿ ಸಮೂಹ ಸಂಸ್ಥೆ ಅಬುಧಾಬಿ ಇದರ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ| ಬಿ.ಆರ್ ಶೆಟ್ಟಿ ಕಲಾದೀಪವನ್ನು ಮಂಗಳಮಯವಾಗಿ ಪ್ರಜ್ವಲಿಸಿ ರಂಗೋತ್ಸಕ್ಕೆ ಚಾಲನೆಯನ್ನೀಡಿದರು. ಮುಖ್ಯ ಅತಿಥಿsಯಾಗಿ ಉಪಸ್ಥಿತ ಬೊರಿವಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರು `ಕಲಾಕ್ಷೇತ್ರದ ಕ್ರಾಂತಿ ಪುರುಷ ವಿಜಯಣ್ಣ’ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು.
ಗೌರವ ಅತಿಥಿsಗಳಾಗಿ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಸರ್ವೋತ್ತಮ ಶೆಟ್ಟಿ ಅಬುದಾಭಿ, ರಂಗೋತ್ಸವ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ, ಕಲಾ ಜಗತ್ತು ಅಮ್ಮ ಚಾವಡಿಯ ಸಂಘಟಕ ರತ್ನಾಕರ ಎ.ಶೆಟ್ಟಿ, ಸಮಾಜ ಸೇವಕರುಗಳಾದ ನಿತ್ಯಾನಂದ ಡಿ.ಕೋಟ್ಯಾನ್, ಡಾ| ಸುರೇಶ್ ಎಸ್.ರಾವ್ ಕಟೀಲು, ಜಯಕೃಷ್ಣ ಎ.ಶೆಟ್ಟಿ, ಜಯರಾಮ ಎನ್.ಶೆಟ್ಟಿ, ಮಂಜುನಾಥ ಬನ್ನೂರು, ಶ್ರೀಮತಿ ಲತಾ ಜಯರಾಮ ಶೆಟ್ಟಿ, ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅರ್‍ವತ್ತರ ಕಲಾ ಮಹತ್ಕಾರ್‍ಯಗೈದ ಸಾಧಕ ವಿಜಯಕುಮಾರ್‌ಗೆ ಶುಭೇಚ್ಛಗಳು. ಅತೀಶೀಘ್ರವೇ ಇವರ ಸಾಧನೆ ಲಿಮ್ಕಾ ಬುಕ್ ರೆಕಾರ್ಡ್‌ನಲ್ಲಿ ಅಚ್ಚಾಗಲಿ. ನಮ್ಮ ಸಮಾಜದ ಕಲಾ ಸಂಸ್ಕೃತಿಯನ್ನು ಬಿಂಬಿಸಿ ಜೀವಂತವಾಗಿಸಲು ಶ್ರಮಿಸಿದ ಇವರ ಕನಸುಗಳು ನನಸಾಗಲಿ ಎಂದು ಸಂಸದ ಗೋಪಾಲ್ ಶೆಟ್ಟಿ ಅಭಿನಂದಿಸಿದರು.
ನಮ್ಮೆಲ್ಲರ ಮತ್ತು ಸಮಗ್ರ ಕಲಾಭಿಮಾನಿಗಳ ಒಲವಿನ ವಿಜಯಣ್ಣರ ಈ ಅರ್‍ವತ್ತು ವೈಶಿಷ್ಟ್ಯಮಯ ಪಾತ್ರಗಳ ಕಾರ್ಯಕ್ರಮವು ಯಶಸ್ಸು ಕಾಣಲಿ. ಅವರ ಆಶಯದ ಕೊಡುಗೆಗಳು ಶ್ರೀದೇವರು ಕರುಣಿಸಿಸಲಿ. ಅವರ ಕನಸಿನ ಈ ಒಂದು ದಿನದ ಕಾರ್ಯಕ್ರವು ಅವರ ಸಾಧನೆಗೆ ಮೈಲುಗಲ್ಲಾಗಲಿ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಐಕಳ ಹರೀಶ್ ಶುಭಾರೈಸಿದರು.
ಸುಧಾಕರ ಆಚಾರ್ಯ ಉಡುಪಿ ಮತ್ತು ತಂಡವು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕಲಾಜಗತ್ತು ಸಂಸ್ಥಾಪಕ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ಸ್ವರಚಿಸಿ ನಿರ್ದೇಶಿದ ನಾಟಕ, ಸ್ವರಚಿಸಿದ ಪದ್ಯಗಳಿಗೆ ರಾಗ ಸಂಯೋಜಿಸಿ ಒಂದೆಡೆ ಸಂಗೀತದ ಹೊಳೆಯನ್ನು ಹರಿಸಿದರೆ ಮತ್ತೊಂದೆಡೆ ವೈಶಿಷ್ಟ ಮಯ ನೃತ್ಯಗಳೊಂದಿಗೆ ಅರ್‍ವತ್ತು ವಿವಿಧ ಪಾತ್ರಗಳನ್ನು ಪ್ರದರ್ಶಿಸಿ ರಂಗಭೂಮಿಯನ್ನು ಆರಾಧಿಸುವ ಮುಖೇನ ರಂಗವೈಭವಕ್ಕೆ ಹೊಸ ಅಧ್ಯಾಯನ ಬರೆದರು.
ಸಮಾರಂಭದಲ್ಲಿ ಕಲಾಜಗತ್ತು ಸ್ಥಾಪಕ ಸದಸ್ಯರುಗಳಾದ ಅಶೋಕ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ವಿಜಯ ಆರ್.ಭಂಡಾರಿ, ಉದಯ ಆರ್. ಹೆಗ್ಡೆ, ಹೇಮಂತ್ ಶೆಟ್ಟಿ, ಎನ್.ಪ್ರಥ್ವಿರಾಜ್ ಮುಂಡ್ಕೂರು, ಶರತ್ ಶೆಟ್ಟಿ, ಸುರೇಶ್ ಕೆ.ಶೆಟ್ಟಿ, ದೇವುನಾಥ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ದಿವಾಕರ್ ಎಂ.ಶೆಟ್ಟಿ, ಪ್ರಕಾಶ್ ಶೆಟ್ಟಿ, ತಾರನಾಥ್ ಶೆಟ್ಟಿ, ದಿನೇಶ್ ಎನ್.ಶೆಟ್ಟಿ, ಯಶವಂತ್ ಶೆಟ್ಟಿ, ಲಾರೇನ್ಸ್ ಡಿ’ಸೋಜಾ ಕೆಮ್ಮಣ್ಣು, ಭಾಸ್ಕರ್ ಸರಪಾಡಿ ಮತ್ತಿತರರು ವಿವಿಧ ಪಾತ್ರಗಳಿಗೆ ಸಹ ಕಲಾಕಾರರುಗಳಾಗಿ ಸಾಥ್ ನೀಡಿದರು. ಪದ್ಮನಾಭ ಸಸಿಹಿತ್ಲು ಮತ್ತು ಬಳಗವು ಸಂಗೀತ ಪ್ರಸ್ತುತ ಪಡಿಸಿದರು.
ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿ ಅತಿಥಿಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಕಲಾಜಗತ್ತು ಮುಂಬಯಿ ಕಾರ್ಯಾಧ್ಯಕ್ಷ ಸುರೇಂದ್ರಕುಮಾರ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಪುಷ್ಕಳ್ ಕುಮಾರ್ ತೋನ್ಸೆ ಪ್ರಾರ್ಥನೆಯ ನ್ನಾಡಿದರು. ಮೀರಾರೋಡ್‌ನ ನೃತ್ಯ ಕಲಾವಿದೆಯರು `ಅಪ್ಪೆಸೀತೆ’ ಗಣಪತಿಸ್ತುತಿ ನೃತ್ಯಗೈದರು. ಪುಷ್ಕಳ್ ಕುಮಾರ್ ರಂಗೋತ್ಸವ ಗೀತೆ ಪ್ರಸ್ತುತ ಪಡಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೃಷ್ಣರಾಜ್ ಶೆಟ್ಟಿ ವಂದನಾರ್ಪಣೆಗೈದರು.
ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ಶಬ್ದವೇದಿಯ ದಶರಥನಾಗಿ ಆಗಮಿಸಿ ಏಕಾಭಿನಯದ ಅರ್‍ವತ್ತು ವೈಶಿಷ್ಟ್ಯಮಯ ಪಾತ್ರಚಿತ್ರಣಗಳ ಪ್ರದರ್ಶನಕ್ಕೆ ನಾಂದಿಯನ್ನಾಡಿ ಭಾವನಾತ್ಮಕ ಕ್ಷಣಗಳೊಂದಿಗೆ ನೆರೆದ ಕಲಾಭಿಮಾನಿಗಳನ್ನು ಒಂದೆಡೆ ಅಚ್ಚರಿ ಮೂಡಿಡಿಸಿದರೆ ಮತ್ತೊಂದೆಡೆ ಲಿಮ್ಕಾ ಬುಕ್ ರೆಕಾರ್ಡ್ ದಾಖಲೆಗೆ ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮ್ಯಾನ್‌ಗಳನ್ನೂ ಬೆರಗುಗೊಳಿಸಿ ರಂಗವೈಭವಕ್ಕೆ ಹೊಸ ಅಧ್ಯಾಯನ ಬರೆದರು.





































