ಕನ್ನಡ ವಾರ್ತೆಗಳು

ಪೋಪ್ ಜಾನ್ ಪಾಲ್ ಅವರ ಕಂಚಿನ ಪ್ರತಿಮೆ ವಾಹನ ಜಾಥಾ ಮೂಲಕ ಬಜಪೆಗೆ…

Pinterest LinkedIn Tumblr

bisap_coper_model_1a

ಮಂಗಳೂರು.ನ.24 : ದಿವಂಗತ ಪೋಪ್ ಜಾನ್ ಪಾಲ್- ದ್ವಿತೀಯ ಅವರನ್ನು ಸಂತ ಪದವಿಗೇರಿಸಿದ ಗೌರವಾರ್ಥ ಹಾಗೂ 1986ರ ಫೆ.6ರಲ್ಲಿ ಅವರು ಮಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬಜಪೆಯಲ್ಲಿ ನಿರ್ಮಿಸಲಾದ ಪುಣ್ಯಕ್ಷೇತ್ರದಲ್ಲಿ ಸ್ಥಾಪಿಸಲಾಗುವ ಅವರ ಕಂಚಿನ ಪ್ರತಿಮೆಯನ್ನು ವಾಹನ ಜಾಥಾ ಮೂಲಕ ಮಂಗಳೂರಿನಿಂದ ಬಜಪೆಗೆ ಭಾನುವಾರ ಕೊಂಡೊಯ್ಯಲಾಯಿತು.

bisap_coper_model_2 bisap_coper_model_3 bisap_coper_model_4 bisap_coper_model_6

ಬಿಷಪ್ ಹೌಸ್ ಆವರಣದಲ್ಲಿ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರು ‘ವಾಹನ ಜಾಥಾ’ಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ವಿಕಾರ್ ಜನರಲ್ ಡೆನ್ನಿಸ್ ಮೋರಸ್ ಪ್ರಭು, ಬಜಪೆ ಪ್ಯಾರಿಶ್ ಪ್ರೀಸ್ಟ್ ರೆ.ಫಾ.ಲಿಯೋ ಲೋಬೋ , ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

bisap_coper_model_7 bisap_coper_model_8 bisap_coper_model_9 bisap_coper_model_10a

ಆರು ಅಡಿ ಎತ್ತರ ಹಾಗೂ ಸುಮಾರು ಒಂಬತ್ತು ಟನ್ ಭಾರದ ಕಂಚಿನ ಪ್ರತಿಮೆಯನ್ನು ಇಂಡೋನೇಶಿಯಾದಲ್ಲಿ ತಯಾರಿಸಲಾಗಿದ್ದು, ನ.27ರಂದು ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಪ್ರತಿಮೆಯನ್ನು ಭಾರತದ ವ್ಯಾಟಿಕನ್ ರಾಯಭಾರಿ ಆರ್ಚ್ ಬಿಷಪ್ ಸಾಲ್ವತೋರ್ ಪೆನಾಕ್ಕಿಯೊ ಅವರು ಕೊಡುಗೆಯಾಗಿ ನೀಡಿದ್ದಾರೆ.

Write A Comment