ಕನ್ನಡ ವಾರ್ತೆಗಳು

ಐಟಂ ಗರ್ಲ್ ಹಾದಿಯಲ್ಲಿ ಶ್ರುತಿ ಹಾಸನ್..ಹೀರೋಯಿನ್ ಗಿಂತ ಐಟಂ ಗೆ ಆದ್ಯತೆ ಕೊಟ್ಟ ನಟಿ

Pinterest LinkedIn Tumblr

shruthi_hassan_hot_1

ಆಗಡು ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ತನ್ನ ಸೌಂದರ್ಯವನ್ನು ಹೊರ ಹಾಕಿದ ಶ್ರುತಿ ಹಾಸನ್ ಈಗ ಆ ಚಿತ್ರ ಸೋತು ಮಕಾಡೆ ಮಲಗಿದ ಬಳಿಕ ಟಾಲಿವುಡ್ ನಲ್ಲಿ ಏನು ಮಾಡಬೇಕು ಎಂದು ತಿಳಿಯದ ಪರಿಸ್ಥಿತಿಯಲ್ಲಿ ಇದ್ದಾಳೆ.  ಅದಕ್ಕೆ ಪೂರಕವಾಗಿ ಆಕೆ ಮತ್ತೆ ಐಟಂ ಸಾಂಗ್ ನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಎಲ್ಲ ಸಂಗತಿಗಳು ಕಂಡು ಬರುತ್ತಿದೆ. ಅಂದರೆ ಶ್ರುತಿ ಮತ್ತೆ ಜೂನಿಯರ್ ಇಂತಿ ಆರ್ ಅವರ ಚಿತ್ರದಲ್ಲಿ ಐಟಂ ನಂಬರ್ ಮಾಡಲು ಸಿದ್ಧತೆ ನಡೆಸಿದ್ದಾಳೆ.

shruthi_hassan_hot_2

ಸಾಮಾನ್ಯವಾಗಿ ತಾವು ಹೆಚ್ಚು ಜನಪ್ರಿಯತೆ ಪಡೆದಿರುವ ಸಮಯದಲ್ಲಿ ಅನೇಕ ನಟಿಯರು ಐಟಂ ನಂಬರ್ ಮಾಡಿದ್ದಾರೆ. ಆದರೆ ಅದನ್ನೇ ಅವರು ನೆಚ್ಚಿಕೊಂಡು ಕುಳಿತಿಲ್ಲ. ಏಕೆಂದರೆ ಒಮ್ಮೆ ಐಟಂ ನಂಬರ್ ಮಾಡದೆ ಮತ್ತೆ ಅದರತ್ತ ತಮ್ಮ ಆದ್ಯತೆ ನೀಡಿದರೆ ಅದರಿಂದ ನಷ್ಟವೇ ಹೊರತು ಲಾಭವಾಗಿಲ್ಲ ಅವರ ತಾರ ಬದುಕಿಗೆ.

ಹೀಗೆ ಅನೇಕ ತಾರೆಯರು ಅತಿಯಾಸೆಗೆ ಬಿದ್ದು ಹೀರೋಯಿನ್ ಗಳಾಗಿ ಇದ್ದಾಗಲೇ ಐಟಂಕಡೆಗೆ ಕೈ ಚಾಚಿದ ಫಲ ಈಗ ಅವಕಾಶಗಳು ಇಲ್ಲದ ಸ್ಥಿತಿ ಏರ್ಪಡಿಸಿಕೊಂಡಿದ್ದಾರೆ.ಅದೇ ಸಾಲಿಗೆ ಶ್ರುತಿ ಸೇರುತ್ತಿದ್ದಾಳ ಎನ್ನುವ ಚಿಂತೆ ಮತ್ತು ಚರ್ಚೆ ಈಗ ಟಾಲಿವುಡ್ ಚಿತ್ರಪಂಡಿತರಲ್ಲಿ ಮೂಡಿದೆ.

shruthi_hassan_hot_3

ಮುಖ್ಯವಾಗಿ ಈ ರೀತಿಯ ಅಭಿಪ್ರಾಯ ಹೊಂದಲು ಏನು ಕಾರಣವೆಂದರೆ ಶ್ರುತಿ ಹಾಸನ್ ಕೇವಲ ಟಾಲಿವುಡ್ ಮಾತ್ರವಲ್ಲ, ಕಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಸಹಿತ ಜನಪ್ರಿಯತೆ ಹಾಗೂ ಹೇರಳ ಅವಕಾಶಗಳನ್ನು ಪಡೆದ ನಟಿ. ಇಷ್ಟೆಲ್ಲಾ ಅವಕಾಶಗಳು ಇದ್ದರು ಸಹಿತ ಈ ರೀತಿ ಐಟಂ ಗರ್ಲ್ ಆಗುವ ಆಕೆಯ ಅತಿಯಾಸೆ ಬಗ್ಗೆ ಏನು ಹೇಳುವುದು? ಮುಂದೆ ಏನಾಗುತ್ತದೆಯೋ ಬಲ್ಲವರು ಯಾರು. ಆದರೂ ಸಹಿತ ಐಟಂ ಹುಡುಗಿಯಾಗುವುದಕ್ಕಿಂತ ಹೀರೋಯಿನ್ ಆಗಿ ಹೆಚ್ಚು ಒಳ್ಳೆಯ ಚಿತ್ರಗಳನ್ನು ನೀಡಲಿ ಎನ್ನುವ ಸದಾಶಯ ನಮ್ಮದು.

Write A Comment