ಕನ್ನಡ ವಾರ್ತೆಗಳು

ಬಳ್ಳಾಲ್‌ಬಾಗ್‌ನಲ್ಲಿ 63ನೇ ವರ್ಷದ ಸಂಭ್ರಮದ ಗುರ್ಜಿದೀಪೋತ್ಸವ

Pinterest LinkedIn Tumblr

Ballal_bagh_gurji_1

ಮಂಗಳೂರು: ಗುರ್ಜಿ ದೀಪೋತ್ಸವ ಸಮಿತಿ ಬಳ್ಳಾಲ್‌ಬಾಗ್ ಮಂಗಳೂರು ಇದರ ಆಶ್ರಯದಲ್ಲಿ 63ನೇ ವರ್ಷದ ಗುರ್ಜಿದೀಪೋತ್ಸವವು ನವೆಂಬರ್ 19, ಬುಧವಾರದಂದು ಜರುಗಿತು. ಆ ಪ್ರಯುಕ್ತ ತಾ.17.11.2014 ನೇ ಸೋಮವಾರ ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಮತ್ತು ಅನ್ನಸಂತರ್ಪಣೆ ನಡೆಯಿತು.

ಗುರ್ಜಿ ದೀಪೋತ್ಸವ ಸಮಾರಂಭವನ್ನು ಜಯರಾಮ್ ಹಂದೆ ಕರ್ಣಾಟಕ ಬ್ಯಾಂಕ್ ಡಿಜಿ‌ಎಂ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿ.ಪದ್ಮನಾಭ ರೈ , ಜಯಂತಿ ಆಚಾರ್ ಈ ಸಂದರ್ಭ ಉಪಸ್ಥಿತರಿದ್ದರು. ಸಂಜೆ 6.30 ಕ್ಕೆ ಸನಾತನ ನಾಟ್ಯಾಲಯ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯೆ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ರಾತ್ರಿ 8 ಕ್ಕೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಬಲ ಮಾರ್ಲ ಮೇಯರ್ ಮಂಗಳೂರು ಮಹಾನಗರ ಪಾಲಿಕೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜೆ.ಬಾಲಕೃಷ್ಣ ಕೊಟ್ಟಾರಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಸೂರ್ಯನಾರಾಯಣ ದೇವಸ್ಥಾನ ಮತ್ತು ಮುಖ್ತೇಸರರು ಶ್ರೀ ದುರ್ಗಾಪರ ಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ವಿದ್ಯಾಧರ ಶೆಟ್ಟಿ ಎಲ್.ಐ.ಸಿ.ಡೆವಲೆಪ್‌ಮೆಂಟ್ ಆಫೀಸರ್ ಭಾಗವಹಿಸಿದರು. ಸಮಾರಂಭದಲ್ಲಿ ನಾರಾಯಣ ಶೆಟ್ಟಿ ಬಳ್ಳಾಲ್‌ಭಾಗ್ ಹಿರಿಯ ಸದಸ್ಯರು, ಧೀರಜ್ ಕೊಟ್ಟಾರಿ ಕಲಾವಿದ ಚಿತ್ರ ನಟ, ಉತ್ತಮ್ ಕೊಡಿಯಾಲ್‌ಬೈಲ್ ಹಿಂದೂಸ್ಥಾನಿ ಗಾಯಕರು ಆಕಾಶವಾಣಿ ಕಲಾವಿದರು ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಬಿ.ಸಾಲ್ಯಾನ್ ಧನ್ಯವಾದಗೈದರು. ಸುರೇಶ್ ಬಳ್ಳಾಲ್, ಗಣೇಶ್ ಶೆಟ್ಟಿ, ಸುಂದರ ಶೆಟ್ಟಿ, ಉಪಸ್ಥಿತರಿದ್ದರು. ರಾತ್ರಿ 9.30ಕ್ಕೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

Write A Comment