ಕನ್ನಡ ವಾರ್ತೆಗಳು

`ಆಯುಷ್ ಉತ್ಸವ’ದ ಪೂರ್ವಭಾವಿ ರ್‍ಯಾಲಿ

Pinterest LinkedIn Tumblr

ayus_medical_ryali_1

ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ನ. 22 ಮತ್ತು 23 ರಂದು ಆಯೋಜಿಸಿರುವ ಆಯುಷ್ ಉತ್ಸವದ ಪೂರ್ವಭಾವಿಯಾಗಿ ಗುರುವಾರ ಮುನಿಯಾಲ್ ಆಯುರ್ವೇದ ಕಾಲೇಜು ನೇತೃತ್ವದಲ್ಲಿ ಮುನಿಯಾಲದಲ್ಲಿ ಆಯುಷ್ ವೈದ್ಯರು ಹಾಗೂ ವಿದ್ಯಾರ್ಥಿಗಳು ಜಾಗೃತಿ ರ್‍ಯಾಲಿ ನಡೆಸಿದರು.

ಬ್ಯಾನ್ ಹಿಡಿದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು. ಆಯುರ್ವೇದ, ಯೋಗ ಮತ್ತು ನಿಸರ್ಗ ಚಿಕಿತ್ಸೆ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿಗಳಿಗೆ ಸಂಬಂದಿಸಿ ಒಟ್ಟು ಪದ್ಧತಿಗೆ ಆಯುಷ್ ಎಂದು ಕರೆಯಲಾಗುತ್ತಿದೆ.

ವಿಶ್ವದೆಲ್ಲೆಡೇ ಶೇ.೮೦ ರಷ್ಟು ಮಂದಿ ಒಂದಲ್ಲ ಒಂದು ರೀತಿಯ ದೇಶೀಯ ವೈದ್ಯಕೀಯ ಪದ್ಧತಿಯ ಔಷದಗಳನ್ನು ಸೇವಿಸುತ್ತಾರೆ ಎಂಬುದಾಗಿ ಅಧ್ಯಯನಗಳಿಂದ ತಿಳಿದುಬಂದಿದೆ. ಆಯುರ್ವೇದದಂತಹಾ ಭಾರತೀಯ ವೈದ್ಯಕೀಯ ಪದ್ಧತಿಗಳು ಮನುಷ್ಯನ ಸಮಗ್ರ ಆರೋಗ್ಯ ರಕ್ಷಣೆಗಾಗಿ ವೈಜ್ಞಾನಿಕ ಸೂತ್ರಗಳನ್ನು ಹೇಳಿವೆ.

ಆಯುಷ್ ಪದ್ಧತಿಗಳನ್ನು ನಮ್ಮ ಆರೋಗ್ಯ ಸೇವೆಯಲ್ಲಿ ಮುಖ್ಯವಾಹಿನಿಯಲ್ಲಿ ತರಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪೂರಕ ವಾತಾವರಣವನ್ನು ಕಲ್ಪಿಸಲು ಒಂದು ಗಂಭೀರ ಪ್ರಯತ್ನವಾಗಿ ಮಂಗಳೂರಿನಲ್ಲಿ `ಆಯುಷ್ ಉತ್ಸವ’ ಏರ್ಪಡಿಸಲಾಗಿದೆ. ನ. ೨೨ ಮತ್ತು ೨೩ರಂದು ನಗರದ ನೆಹರೂ ಮೈದಾನದ ಸಮೀಪ ಫುಟ್ಬಾಲ್ ಮೈದಾನದಲ್ಲಿ ಇದು ನಡೆಯಲಿದೆ.

Write A Comment