ಕನ್ನಡ ವಾರ್ತೆಗಳು

ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ- ಜನತಾ ದರ್ಶನದಲ್ಲಿ 1800 ಫಲಾನುಭವಿಗಳು

Pinterest LinkedIn Tumblr

Janatha_dar_shan_1

ಮಂಗಳೂರು,ನವ.19  :-ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರಕಿ ಆತನೂ ಸಹಿತ ನೆಮ್ಮದಿಯ ಜೀವನ ಮಾಡಲು ಕರ್ನಾಟಕ ಮುಖ್ಯಮಂತ್ರಿಗಳ ಆಶಯದಂತೆ ಪ್ರತೀ ತಾಲೂಕಿನಲ್ಲಿ ಒಂದು ದಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನತಾದರ್ಶನ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ.

Janatha_dar_shan_2 Janatha_dar_shan_3

ಈ ದಿಸೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಮಟ್ಟದ 2 ನೇ ಜನತಾ ದರ್ಶನ  ಕಾರ್ಯಕ್ರಮ ಬಂಟ್ವಾಳ ಪಟ್ಟಣದಲ್ಲಿ ಇಂದು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದು ಒಟ್ಟು 1800 ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.

ಪ್ರಾಕೃತಿಕ ವಿಕೋಪದಿಂದ ಪ್ರಾಣಹಾನಿ,ಆಸ್ತಿಪಾಸ್ತಿ ಹಾನಿಗೀಡಾದ 11ಮಂದಿಗೆ ,ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಜನರಿಗೆ ,ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿ 31 ಜನರಿಗೆ, 291 ವಿಧವೆಯರಿಗೆ ವಿಧವಾ ವೇತನ ಮಂಜೂರಾತಿ ಆದೇಶ ಪತ್ರಗಳು ,90 ಜನರಿಗೆ ಅಂಗವಿಕಲ ವೇತನ ಮಂಜೂರಾತಿ ಆದೇಶ ಪತ್ರ,  531 ಜನ ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆ ಆದೇಶ ಪತ್ರ ಸೇರಿದಂತೆ,ಒಟ್ಟು  1533 ಫಲಾನುಭವಿಗಳಿಗೆ ಸಚಿವರು ವಿವಿಧ ಸೌಲಭ್ಯಗಳ ಆದೇಶ ಪತ್ರ ಹಾಗೂ ಚೆಕ್‌ಗಳನ್ನು ವಿತರಿಸಿದರು. ಇದಲ್ಲದೆ ಕೃಷಿ ಇಲಾಖೆ ವತಿಯಿಂದ ಮೂರು ಜನ ರೈತರಿಗೆ ಪವರ್ ಟಿಲ್ಲರ್,ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳು,ಕಲಂ  53ರಡಿ 79  ಜನರಿಗೆ ಸಾಗುವಳಿ ಚೀಟಿ, 125 ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರಗಳನ್ನು ಸಚಿವರು ಈ ಸಂದರ್ಭದಲ್ಲಿ ವಿತರಿಸಿದರು.

Janatha_dar_shan_5 Janatha_dar_shan_6

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಸಾಮಾನ್ಯ ಜನ ಸರ್ಕಾರಿ ಸೌಲಭ್ಯಗಳಿಗೆ ತಾಲೂಕು ಕಚೇರಿ ಹಾಗೂ ಜಿಲ್ಲಾ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಜನತಾ ದರ್ಶನ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಸದಸ್ಯರಾದ ಸಂತೋಷ್ ಕುಮಾರ್ ರೈ,ಮಮತಾ ಗಟ್ಟಿ,ಚಂದ್ರಪ್ರಕಾಶ್ ಶೆಟ್ಟಿ,ಎಂ.ಎಸ್.ಮಹಮದ್, ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ್,ಪುರಸಭೆ ಅಧ್ಯಕ್ಷೆ ವಸಂತಿ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಉಪವಿಭಾಗಾಧಿಕಾರಿ ಡಾ.ಅಶೋಕ್ ಸ್ವಾಗತಿಸಿದರು.

Write A Comment