ಕನ್ನಡ ವಾರ್ತೆಗಳು

ಬಿಎಸ್‌ವೈ ಅವರಿಂದ ಕುಗ್ರಾಮವಾದ ಕೆರಾಡಿ ದತ್ತು ಸ್ವೀಕಾರ

Pinterest LinkedIn Tumblr

8bsy

ಕುಂದಾಪುರ: ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸಂಸದ ಬಿ.ಎಸ್. ಯಡಿಯೂರಪ್ಪ ಅವರು ಬೈಂದೂರು ವಿಧಾನಸಭೆ ಕ್ಷೇತ್ರದ ಗಂಗೊಳ್ಳಿ ಗ್ರಾಮದ ಬದಲಾಗಿ ಕೆರಾಡಿ ಗ್ರಾಮವನ್ನು ದತ್ತು ಪಡೆಯಲು ಚಿಂತನೆ ನಡೆಸಿದ್ದಾರೆ ಎಂದು ಬೈಂದೂರುಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.

ತಿಂಗಳ ಹಿಂದೆ ಬಿಎಸ್‌ವೈ ಅವರು ಗಂಗೊಳ್ಳಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಗಂಗೊಳ್ಳಿ ಗ್ರಾಮವನ್ನು ದತ್ತು ಸ್ವೀಕಾರ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಆದರ್ಶ ಗ್ರಾಮ ದತ್ತು ಸ್ವೀಕಾರ ಮಾಡಬೇಕಾದರೆ ಆ ಗ್ರಾಮದಲ್ಲಿ 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರಬೇಕಾಗುತ್ತದೆ. ಗಂಗೊಳ್ಳಿ ಗ್ರಾಮದಲ್ಲಿ ಸುಮಾರು 14 ಸಾವಿರ ಜನಂಸಂಖ್ಯೆ ಹೊಂದಿರುವುದರಿಂದ, ಅದರ ಬದಲಾಗಿ ಕೇವಲ 2574 ಜನಸಂಖ್ಯೆ ಹೊಂದಿರುವ ಪಶ್ಚಿಮ ಘಟ್ಟದ ತಪ್ಪಲಿನ ಕುಗ್ರಾಮವಾದ ಕೆರಾಡಿ ಗ್ರಾಮವನ್ನು ದತ್ತು ಪಡೆಯಲು ಉದ್ದೇಶಿಸಿದ್ದಾರೆ ಎನಲಾಗಿದೆ.

ನಕ್ಸಲ್ ಹಣೆಪಟ್ಟಿ ಹೊಂದಿರುವ ಕೆರಾಡಿ ಅತ್ಯಂತ ಕುಗ್ರಾಮವಾಗಿದ್ದು, ಇನ್ನಾದರೂ ಅಲ್ಲಿ ಅಭಿವ್ರದ್ಧಿಯ ಕಾರ್ಯಗಳಾಗುವುದೇ ಕಾದು ನೋಡಬೇಕಾಗಿದೆ.

Write A Comment