ಕುಂದಾಪುರ: ಸ್ವಂತ ಟಿಪ್ಪರ್ ಇಟ್ಟುಕೊಂಡು 3-4 ವರ್ಷಗಳಿಂದ ವ್ಯವಹಾರ ಮಾಡಿಕೊಂಡಿದ್ದ ಹೊಸಂಗಡಿ ತಾರ್ಕಿಮಕ್ಕಿ ನಿವಾಸಿ ಕವೀನಾ ನಾಯ್ಕ್ (26) ನಾಪತ್ತೆಯಾದ ಬಗ್ಗೆ ಸಹೋದರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಸಾರಾಂಶ: ಕವೀನಾ ನಾಯ್ಕ ಎನ್ನುವರು ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ತಾರ್ಕಿಮಕ್ಕಿ ಎಂಬಲ್ಲಿಗೆ ಅ.2ರಂದು ಸಂಜೆ 6.30ರ ಸುಮಾರಿಗೆ ಸ್ನೇಹಿತನ ಬಳಿ ಮನೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದು ಮನೆಗೆ ಬಾರದೇ ನಾಪತ್ತೆಯಾಗಿದ್ದು ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಈವರೆಗೆ ಕವೀನಾ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಕವೀನಾ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದು ಕೆಲಸ ಮಾಡುವ ಟಿಪ್ಪರ್ ಬಳಿಯೂ ಹೋಗದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಅವರ ಸಹೋದರ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.