ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿಜಿಸ್ಟರ್ ಕುಂದಾಪುರ 2 ಯೋಜನ ಕಚೇರಿ ವ್ಯಾಪ್ತಿಯ ಕಮಲಶಿಲೆ ವಲಯದ ಹೊಸಂಗಡಿ ಕಾರ್ಯಕ್ಷೇತ್ರದ ಮಾನಸ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಹೊಸಂಗಡಿ ಗ್ರಾಮ ಪಂಚಾಯತ್ನಲ್ಲಿ ನಡೆಯಿತು.

ಧ.ಗ್ರಾ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಸುಧೀರ್ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ , ಸುಜ್ಞಾನನಿಧಿ ಸ್ಕಾಲರ್ಶಿಪ್ ಬಗ್ಗೆ , ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಮಲಶಿಲೆ ವಲಯಕ್ಕೆನೀಡಿರುವ ಜ್ಞಾನದೀಪ ಶಿಕ್ಷಕರ ಬಗ್ಗೆ, ಯೋಜನೆ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಅಮಾಸೆ ಬೈಲು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಮಲ ಅವರು ಮಹಿಳಾ ಸುರಕ್ಷತೆಯ ಬಗ್ಗೆ, ಮಕ್ಕಳನ್ನು ಸಂಸ್ಕೃತಿ ಸಂಸ್ಕಾರಯುತವಾಗಿ ಬೆಳೆಸುವುದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಎಸ್. ಮಡಿವಾಳ ಅವರು ಜ್ಞಾನವಿಕಾಸ ಕಾರ್ಯಕ್ರಮವು ಉತ್ತಮ ಕಾರ್ಯಕ್ರಮವಾಗಿದ್ದು ಮಹಿಳೆಯರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಸದೃಢರಾಗಬೇಕೆಂದು ತಿಳಿಸಿದರು.
ರಾಮಲಿಂಗೇಶ್ವರ ಸಂಘದ ರಜನೀಶ ಅವರು ಮರಣ ಹೊಂದಿದ್ದು ಮಂಜೂರಾದ ಎಲ್ಐಸಿ ಮೈಕ್ರೋ ಬಜೆಟ್ ಮಂಜೂರಾತಿ ಪತ್ರವನ್ನು ಅವರ ಪತ್ನಿ ಗೀತಾ ಅವರಿಗೆ ಹಸ್ತಾಂತರಿಸಲಾಯಿತು.
ಹೊಸಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಆನಂದ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ನಾಗವೇಣಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವಿತ, ಸೇವಾ ಪ್ರತಿನಿಧಿ ಸವಿತಾ, ಕೇಂದ್ರದ ಸಂಯೋಜಕಿ ವಿನೋದ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
Comments are closed.