ಕರಾವಳಿ

ಮಲ್ಪೆ | 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Pinterest LinkedIn Tumblr

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿ ಪ್ರಕರಣಗಳಿಗೆ ಸಂಬಂಧಿಸಿ ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಪಡುತೋನ್ಸೆ ಗ್ರಾಮದ ಕೊಂಡಿಬೇಂಗ್ರೆ ನಿವಾಸಿ ಜುಬೇರ್(42) ಬಂಧಿತ ಆರೋಪಿ. ಮಲ್ಪೆ ಪೊಲೀಸ್‌ ಠಾಣಾ ಎಸ್ಸೆ ಅನೀಲ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಸುರೇಶ್ ಕುಮಾ‌ರ್, ವಿಶ್ವನಾಥ್ ಮತ್ತು ಭಾಸ್ಕರ್, ಕುಬೇರ ಮಾ.22ರಂದು ಬೆಂಗಳೂರಿನ ಶಿವಾಜಿನಗರ ಎಂಬಲ್ಲಿ ಆರೋಪಿಯನ್ನು ಬಂಧಿಸಿ, ಮಾ.23ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Comments are closed.