ಕರಾವಳಿ

ಕೊಲ್ಲೂರು | ಲಕ್ಷಾಂತರ ಮೌಲ್ಯದ ನಗ-ನಗದು, ಮೊಬೈಲ್ ಠಾಣೆಗೆ ಮರಳಿಸಿ ಪ್ರಾಮಾಣಿಕತೆ | 2 ಪ್ರತ್ಯೇಕ ಘಟನೆ | ಪ್ರವಾಸಿಗ ಹಾಗೂ ಜೀಪ್ ಚಾಲಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

Pinterest LinkedIn Tumblr

ಕುಂದಾಪುರ:‌ ಎರಡು ಪ್ರತ್ಯೇಕ ಪ್ರಕರಣದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್‌ ಫೋನ್, ನಗದನ್ನು ಪೊಲೀಸರ ಸಮ್ಮುಖದಲ್ಲಿ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಒಂದೇ ದಿನದಲ್ಲಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ.19 ಗುರುವಾರ ನಡೆದಿದೆ.

ಘಟನೆಯೊಂದರಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಸುಮಾರು 15 ಸಾವಿರ ರೂಪಾಯಿ ಹಣವಿದ್ದ ಬ್ಯಾಗನ್ನು ಹೆಸರು ಹೇಳಲು ಇಚ್ಚಿಸದ ಪ್ರವಾಸಿಗರೊಬ್ಬರು ತಂದು ಠಾಣೆಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೊಂದೆಡೆ ಅಭಿಷೇಕ್ ಎಂಬ ಕೇರಳದ ಕೊಲ್ಲಂ ಪೊಲೀಸ್ ಠಾಣೆಯ ಸಿಬ್ಬಂದಿ ಪತ್ನಿಯ ಸುಮಾರು 3‌ ಸಾವಿರ ರೂ. ನಗದು ಮತ್ತು ಐಫೋನ್ ಮೊಬೈಲ್ ಇದ್ದ ಬ್ಯಾಗನ್ನು ಕೊಡಚಾದ್ರಿ ಜೀಪ್ ಚಾಲಕ ಮುದೂರಿನ ಶರತ್ ಎನ್ನುವರು ಠಾಣೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಎರಡು ಪ್ರತ್ಯೇಕ ಘಟನೆಯಲ್ಲಿ ನಗ-ನಗದು ಕಳೆದುಕೊಂಡವರಿಗೆ ಅವರ ವಸ್ತುಗಳನ್ನು ಕೊಲ್ಲೂರು ಪೊಲೀಸ್ ಠಾಣೆಯ ಮುಖಾಂತರ ಹಸ್ತಾಂತರಿಸಿದ್ದು ಪ್ರವಾಸಿಗ ಮತ್ತು ಜೀಪ್ ಚಾಲಕರ ಪ್ರಾಮಾಣಿಕತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.