Karnataka

ಅಬುಧಾಬಿಯಲ್ಲಿ 45 ಕೋಟಿ ರೂಪಾಯಿ ಲಾಟರಿ ಗೆದ್ದ ಉಡುಪಿ ಮೂಲದ ಶಾಂತನು ಶೆಟ್ಟಿಗಾರ್

Pinterest LinkedIn Tumblr

ಉಡುಪಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಉದ್ಯಾವರ ನಿವಾಸಿ ಶಾಂತನು ಶೆಟ್ಟಿಗಾರ್ ಅವರಿಗೆ 2 ಕೋಟಿ  ದಿರ್‌ಹಂ (49 ಕೋಟಿ ರೂ.) ಬಹುಮಾನ ಒಲಿದಿದೆ.

ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಾಂತನು ಮಸ್ಕತ್‌ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದಾರೆ. ಜ.20 ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಡ್ರಾ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಅವರಿಗೆ ಅದೃಷ್ಟ ಒಲಿದಿದೆ. ಶಾಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಈ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಅದರಲ್ಲಿ ಅರ್ಧ ಹಣ ಅಂದರೆ ಸರಿ ಸುಮಾರು 24.5 ಕೋಟಿ ರು. ಹಣ ಅವರ ಗೆಳೆಯನಿಗೆ ನೀಡಬೇಕಿದೆ.

Comments are closed.