ಕರಾವಳಿ

ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣ: ಒಳಸಂಚು ರೂಪಿಸಿದ್ದ ಮಹಿಳೆಯ ಬಂಧನ

Pinterest LinkedIn Tumblr

ಉಡುಪಿ: ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಒಳಸಂಚು ರೂಪಿಸಿದ ಆರೋಪದಲ್ಲಿ ಮಹಿಳಾ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

(ಕೊಲೆಯಾದ ಸೈಫ್ ಯಾನೆ ಸೈಫುದ್ದೀನ್)

ಕೊಲೆ ಪ್ರಕರಣದ ಆರೋಪಿ ಮಹಮ್ಮದ್ ಫೈಜಲ್ ಖಾನ್ ಪತ್ನಿ ರಿಧಾ ಶಭನಾ (27) ಬಂಧಿತ ಆರೋಪಿ. ಈಕೆ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದಳು ಎನ್ನಲಾಗಿದೆ‌. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

(ಬಂಧಿತರು)

ಸೆ.27ರಂದು ಸೈಫುದ್ದೀನ್‌ನನ್ನು ಅವರ ಕೊಡವೂರು ಸಮೀಪದಲ್ಲಿ ಆರೋಪಿಗಳಾದ ಮಹಮ್ಮದ್ ಫೈಜಲ್ ಖಾನ್, ಮಹಮ್ಮದ್ ಶರೀಫ್, ಅಬ್ದುಲ್ ಶುಕುರು ಮಾರಾಕಾಯುಧಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಮೂವರನ್ನು ಸೆ.28ರಂದು ಪೊಲೀಸರು ಬಂಧಿಸಿದ್ದರು. ಸದ್ಯ ಇನ್ನೋರ್ವ ಆರೋಪಿ ಬಂಧನವಾಗಿದ್ದು ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

Comments are closed.