ಕರಾವಳಿ

ನಿಟ್ಟೆ ಎನ್‌ಎಂಎಎಂಟಿ ಎನ್.ಎಸ್.ಎಸ್ ಘಟಕದಿಂದ ಸಾಸ್ತಾನ ಕೋಡಿ ಸಮುದ್ರ ತೀರ ಸ್ವಚ್ಛತೆ 

Pinterest LinkedIn Tumblr

ಉಡುಪಿ: ಎನ್‌ಎಂಎಎಂಟಿ ನಿಟ್ಟೆ, ಎನ್ಎಸ್ಎಸ್ ಘಟಕವು ಅ.4 ಶನಿವಾರದಂದು ಸಾಸ್ತಾನದಲ್ಲಿ ಕೋಡಿ ಕಡಲತೀರದ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

‘ಕಸವನ್ನು ಹಾಕುವುದಕ್ಕಿಂತ ಸಂಗ್ರಹಿಸುವುದು ಹೆಚ್ಚು ಕಷ್ಟ’ ಎಂಬ ಧ್ಯೇಯದಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 114 ಉತ್ಸಾಹಿ ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಂಡು ಬೆಳಗ್ಗೆನಿಂದ ಮಧ್ಯಾಹ್ನದವರೆಗೆ ಸಮುದ್ರ ತೀರದ ಸೌಂದರ್ಯವನ್ನು ಹೆಚ್ಚುಗೊಳಿಸಲು ಶ್ರಮಿಸಿದರು. ಬಿಸಿಲಿನ ತೀವ್ರತೆಯ ನಡುವೆ ಸುಮಾರು 60 ಬ್ಯಾಗ್ ತ್ಯಾಜ್ಯ-ಕಸವನ್ನು ಸಂಗ್ರಹಿಸಿದರು.

ಕೋಡಿ ಗ್ರಾಮ ಪಂಚಾಯತ್, ಸ್ವಯಂಸೇವಾ ಸಂಸ್ಥೆಯಾದ ಬೇರೂ ಕೋಸ್ಟ್ ಕ್ಲೀರ್ ಸಾಸ್ತಾನ, ಶೆಟ್ಟಿ ಏಗ್ರೋ ಸೆಂಟರ್ ಐರೋಡಿ ಅವರ ಸಹಕಾರದಲ್ಲಿ ಆಯೋಜಿಸಲ್ಪಟ್ಟಿದ್ದು ಕಾರ್ಯಕ್ರಮದ ನಿರ್ವಹಣೆ ಹಾಗೂ ಸಂಗ್ರಹಿಸಲಾದ ಕಸವನ್ನು ಸುರಕ್ಷಿತವಾಗಿ ನಿರ್ವಹಿಸಲು ಬೇರೂ ಸಂಸ್ಥೆ ಸಹಕರಿಸಿದರು.

ವಿದ್ಯಾರ್ಥಿಗಳ ಉತ್ಸಾಹವನ್ನು ಉತ್ತೇಜಿಸಲು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಭೋಜನ ವ್ಯವಸ್ಥೆಯನ್ನು ಮಾಡಿತ್ತು.

Comments are closed.