ಉಡುಪಿ: ಸೆ.8 ರಂದು ರಾತ್ರಿ ರಿಫೈನರಿ ಮೆಷಿನ್ನಲ್ಲಿ ಇಟ್ಟಿದ್ದ ಸುಮಾರು 95 ಲಕ್ಷದ 71 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಐವರು ಅಂತರ್ರಾಜ್ಯ ಕಳವು ಆರೋಪಿಗಳನ್ನು ಉಡುಪಿ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಾದ ಮಹಾರಾಷ್ಟ್ರ ಸೋಲಾಪುರ ಮೂಲದ ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ(19), ಸಾಗರ ದತ್ತಾತ್ರೇಯ ಕಂಡಗಾಲೆ(32), ಬಾಗವ ರೋಹಿತ್ ಶ್ರೀಮಂತ್(25) ಎನ್ನುವರನ್ನು ಸೆ. 12 ರಂದು ಮಹಾರಾಷ್ಟ್ರ ಜಿಲ್ಲೆ ಸೋಲಾಪುರ ಜಿಲ್ಲೆ ಮಲ್ಶಿರೋಸ್ ತಾಲೂಕಿನ ನಿಮ್ಗಾಂವ್ ಎಂಬಲ್ಲಿ ವಶಕ್ಕೆ ಪಡೆದಿದ್ದು ಆರೋಪಿಗಳಿಂದ 74 ಲಕ್ಷದ 88 ಸಾವಿರ ಮೌಲ್ಯದ 748.8 ಗ್ರಾಂ ಚಿನ್ನ, 3 ಲಕ್ಷ 60 ಸಾವಿರ ಮೌಲ್ಯದ 4 ಕೆ.ಜಿ 445 ಗ್ರಾಂ ಬೆಳ್ಳಿ, 5 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 4 ಲಕ್ಷ ಮೌಲ್ಯದ ಮಾರುತಿ ಸ್ವಿಪ್ಟ್ ಕಾರು ಸಹಿತ ಒಟ್ಟು 87 ಲಕ್ಷದ 48 ಸಾವಿರ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನೆಲೆ: ಸೆ.8 ರಂದು ರಾತ್ರಿ ರಿಫೈನರಿ ಮೆಷಿನ್ನಲ್ಲಿ ಇಟ್ಟಿದ್ದ ಸುಮಾರು 95 ಲಕ್ಷದ 71 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಚಿನ್ನಾಭರಣ ಕಳವಾದ ಬಗ್ಗೆ ಅಂಗಡಿ ಮಾಲಿಕರಿಗೆ ಸೆ.9 ಬೆಳಿಗ್ಗೆ ತಿಳಿದಿದ್ದು ಈ ಬಗ್ಗೆ ಉಡುಪಿ ನಗರ ಠಾಣೆ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಕಳವಾದ ಸೊತ್ತುಗಳ ಪತ್ತೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದಲ್ಲಿ ಪಿಎಸ್ಐ ಭರತೇಶ ಕಂಕಣವಾಡಿ, ಕಾಪು ಠಾಣಾ ಪಿಎಸ್ಐ ತೇಜಸ್ವಿ ಟಿ.ಐ., ಕೊಲ್ಲೂರು ಠಾಣಾ ಪಿಎಸ್ಐ ವಿನಯ ಎಂ. ಕೊರ್ಲಹಳ್ಳಿ, ಸಿಬ್ಬಂದಿಗಳಾದ ಹರೀಶ್ ಎಎಸ್ಐ, ಜೀವನ್ ಕುಮಾರ್, ಪ್ರಸನ್ನ ಕುಮಾರ್, ಸಂತೋಷ್ ಶೆಟ್ಟಿ, ಸಂತೋಷ್ ರಾಥೋಡ್, ಶಿವಕುಮಾರ್, ಹೇಮಂತ್ಕುಮಾರ್ ಎಂ.ಆರ್, ಸುನೀಲ್ ರಾಥೋಡ್, ಮಣಿಪಾಲ್ ಠಾಣಾ ರವಿರಾಜ್ ಕೊಲ್ಲೂರು ಠಾಣೆ ನಾಗೇಂದ್ರ ಹಾಗೂ ಮಹಾರಾಷ್ಟ್ರರಾಜ್ಯದ ಅಕ್ಲುಜ್ ಪೋಲೀಸ್ ಠಾಣಾ ಸಿಬ್ಬಂದಿಯಗಳಾದ ಎಸ್.ಆರ್ ಮಾದುಬಾವಿ, ವಿಬಿ ಘಾಟಗೆ, ವಿಎ ಸಾಟೆರವರ ತಂಡ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.